ವಿಜಯೇಂದ್ರ ತಮ್ಮ ಪಕ್ಷದ ವಿಚಾರ ನೋಡಿಕೊಳ್ಳಲಿ: ಸಿಎಂ

| Published : Nov 21 2023, 12:45 AM IST

ವಿಜಯೇಂದ್ರ ತಮ್ಮ ಪಕ್ಷದ ವಿಚಾರ ನೋಡಿಕೊಳ್ಳಲಿ: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರತಿಪಕ್ಷದವರಿಗೆ ಇದೇ ಒಂದು ಕೆಲಸವಾಗಿದೆ. ಅವರು ತಮ್ಮ ಪಕ್ಷದ ವಿಷಯ ಬಗೆಹರಿಸಿಕೊಂಡು ಇದ್ದರೆ ಸಾಕು ಎಂದು ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯೇಂದ್ರ ತಮ್ಮ ಪಕ್ಷದ ವಿಚಾರ ನೋಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರತಿಪಕ್ಷದವರಿಗೆ ಇದೇ ಒಂದು ಕೆಲಸವಾಗಿದೆ. ಅವರು ತಮ್ಮ ಪಕ್ಷದ ವಿಷಯ ಬಗೆಹರಿಸಿಕೊಂಡು ಇದ್ದರೆ ಸಾಕು ಎಂದು ಹೇಳಿದರು.

ಬರ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ:

ಬರ ಪರಿಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದ್ದು, ಎಲ್ಲ ಜಿಲ್ಲಾಧಿಕಾರಿ ಹಾಗೂ ಸಿಇಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗ 226 ತಾಲೂಕುಗಳಲ್ಲಿ ಬರವಿದೆ. ಎಲ್ಲೂ ನೀರಿಗಾಗಿ ತೊಂದರೆಯಾಗಬಾರದು. ಜಿಲ್ಲಾಧಿಕಾರಿಗಳ ಬಳಿ ಒಟ್ಟು ₹ 800 ಕೂಟಿ ಇದೆ. ಅವರು ಯಾವಾಗ ಬೇಕು ಅದನ್ನು ಬಳಸಬಹುದು ಎಂದು ಹೇಳಿದರು.