22ರ ಬಳಿಕ ಅಯೋಧ್ಯೆಗೆ ನಾನೂ ಹೋಗ್ತೀನಿ: ಸಿಎಂ

| Published : Jan 13 2024, 01:31 AM IST

ಸಾರಾಂಶ

ಶ್ರೀರಾಮಚಂದ್ರನ ವಿಚಾರದಲ್ಲಿ ನನ್ನ ಯಾವುದೇ ವಿರೋಧ ಇಲ್ಲ. ನಾವೂ ಶ್ರೀರಾಮನ ಭಕ್ತರು. ಜ.22ರ ನಂತರ ನಾನೂ ಅಯೋಧ್ಯೆಗೆ ಹೋಗುತ್ತೇನೆ, ರಾಮಮಂದಿರಕ್ಕೆ ಭೇಟಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗಶ್ರೀರಾಮಚಂದ್ರನ ವಿಚಾರದಲ್ಲಿ ನನ್ನ ಯಾವುದೇ ವಿರೋಧ ಇಲ್ಲ. ನಾವೂ ಶ್ರೀರಾಮನ ಭಕ್ತರು. ಜ.22ರ ನಂತರ ನಾನೂ ಅಯೋಧ್ಯೆಗೆ ಹೋಗುತ್ತೇನೆ, ರಾಮಮಂದಿರಕ್ಕೆ ಭೇಟಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರವುಳಿಯುವುದಾಗಿ ಕಾಂಗ್ರೆಸ್‌ ಪಕ್ಷ ನಿರ್ಧಾರ ಕೈಗೊಂಡ ಬೆನ್ನಲ್ಲೇ ಬಿಜೆಪಿಯಿಂದ ಕೇಳಿಬರುತ್ತಿರುವ ಟೀಕೆಗಳ ಕುರಿತಾಗಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ಮತ್ತು ಶ್ರೀರಾಮಚಂದ್ರನ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ. ಈ ರಾಜಕೀಯವನ್ನಷ್ಟೇ ನಾವು ವಿರೋಧಿಸುತ್ತೇವೆ. ನಾನು ಅಯೋಧ್ಯೆಗೆ ಹೋಗುತ್ತೇನೆ, ನಮ್ಮ ಕಾರ್ಯಕರ್ತರೂ ಹೋಗುತ್ತಾರೆ ಎಂದರು.