ಸಾರಾಂಶ
ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಮುಖಂಡರೊಂದಿಗೆ ಸ್ಥಳ ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ತುರ್ವಿಹಾಳ
ಮುಂಬರುವ ಫೆ.16ಕ್ಕೆ ತುರ್ವಿಹಾಳ ಪಟ್ಟಣಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆ ಶಾಸಕ ಆರ್.ಬಸನಗೌಡ ತುರ್ವಿಹಾಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ವೇದಿಕೆ ಕಾರ್ಯಕ್ರಮದ ಸ್ಥಳ ವೀಕ್ಷಿಸಿದರು.ನಂತರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕನಕಭವನ, ಇಂದಿರಾ ಕ್ಯಾಂಟಿನ್, ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆ ಹಾಗೂ ಕನಕದಾಸ ಸಂಗೊಳ್ಳಿ ರಾಯಣ್ಣನ ಪುತ್ತಳಿ ಅನಾವರಣಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಸಚಿವರು, ಶಾಸಕರು, ಸಂಸದರು ಹಾಗೂ ಇನ್ನಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಯಾವ ಲೋಪವಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಂತೆ ಹಾಗೂ ಶಿಷ್ಟಾಚಾರ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಮೋಘಸಿದ್ದೇಶ್ವರ ಮಠದ ವೇ.ಮೂ.ಮಾದಯ್ಯ ಗುರುವಿನ್, ವೇ.ಮೂ.ಚಿದಾನಂದಯ್ಯ ಗುರುವಿನ್, ಪಪಂ ಅಧ್ಯಕ್ಷ ಶಾಮಿದ ಸಾಬ್ ಜೌದ್ರಿ, ಕೆಪಿಸಿಸಿ ರಾಜ್ಯ ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿ ಅರ್.ಸಿದ್ದನಗೌಡ ತುರ್ವಿಹಾಳ, ಅಧಿಕಾರಿಗಳಾದ ತಹಸೀಲ್ದಾರ್ ಅರುಣ್ ಕುಮಾರ ದೇಸಾಯಿ, ಮಸ್ಕಿ ತಹಸೀಲ್ದಾರ್ ಡಾ.ಮಲ್ಲಪ್ಪ ಎರಗೋಳ, ಮುಖಂಡರಾದ ಮಲ್ಲನಗೌಡ ದೇವರಮನಿ, ಪಾರೂಖ್ ಸಾಬ್ ಖಾಜಿ, ಮೌಲಪ್ಪಯ್ಯ ಗುತ್ತೇದಾರ್, ಉಮರ್ ಸಾಬ ಸೇರಿ ಪಪಂ ಸರ್ವ ಸದಸ್ಯರು ಹಾಗೂ ವಿವಿಧ ಇಲಾಖಾ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.