ಕೋಮುಲ್‌ ಎಲ್ಲಿಯೂ ಸಾಲದಲ್ಲಿ ಇಲ್ಲ. ಹೆಚ್ಚು ಬೇಡಿಕೆಯಿರುವ ನಂದಿನ ಉತ್ಪನ್ನಗಳನ್ನು ಕೋಲಾರದಲ್ಲೇ ಉತ್ಪಾದಿಸಲು ತಯಾರಿಕಾ ಘಟಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ. ಕೆಎಎಫ್ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯಾಗಿದ್ದು, ಡಿ.ಕೆ.ಸುರೇಶ್ ಮತ್ತು ಬೈರತಿ ಸುರೇಶ್ ಸೇರಿದಂತೆ ನಾಯಕರು ಬೆಂಬಲವಿದೆ ಎನ್ನುತ್ತಾರೆ ಶಾಸಕ ನಂಜೇಗೌಡ.

ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಹಾಲು ಒಕ್ಕೂಟದ ೨೫೦ ಕೋಟಿ ರು.ಗಳ ವೆಚ್ಚದ ಎಂವಿಕೆ ಡೇರಿ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಮುಂಬರುವ ಜನವರಿ ೧೫ ಅಥವಾ ೧೯ರಂದು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಕೋಮುಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕೂಟದಲ್ಲಿ ಸ್ಥಾಪಿಸಿರುವ ಸೌರ ವಿದ್ಯುತ್ ಘಟಕದಿಂದ ಪ್ರತಿಮಾಸ ೪ ಲಕ್ಷ ಯುನಿಟ್ ಉತ್ಪಾದನೆ ಆಗುತ್ತಿದ್ದು, ಇದರ ಮೂಲಕ ಒಕ್ಕೂಟಕ್ಕೆ ನೇರವಾಗಿ ೮೦ ಲಕ್ಷ ರು.ಗಳ ಉಳಿತಾಯವಾಗುತ್ತಿದೆ. ಬೆಸ್ಕಾಂರಿಂದ ವಿದ್ಯುತ್ ಮೀಟರ್ ಅನುಮೋದನೆ ದೊರಕಿದ ನಂತರ ಉಳಿತಾಯದ ಮೊತ್ತ ತಿಂಗಳಿಗೆ ೧.೫ ಕೋಟಿ ರೂ. ಆಗಲಿದೆ ಎಂದರು.

ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ಕೋಮುಲ್‌ ಎಲ್ಲಿಯೂ ಸಾಲದಲ್ಲಿ ಇಲ್ಲ. ಹೆಚ್ಚು ಬೇಡಿಕೆಯಿರುವ ನಂದಿನ ಉತ್ಪನ್ನಗಳನ್ನು ಕೋಲಾರದಲ್ಲೇ ಉತ್ಪಾದಿಸಲು ತಯಾರಿಕಾ ಘಟಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ. ಕೆಎಎಫ್ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯಾಗಿದ್ದು, ಡಿ.ಕೆ.ಸುರೇಶ್ ಮತ್ತು ಬೈರತಿ ಸುರೇಶ್ ಸೇರಿದಂತೆ ನಾಯಕರು ಬೆಂಬಲವಿದೆ ಎಂದು ಅವರು ಹೇಳಿದರು.

ಮಾಲೂರಿನಲ್ಲಿ ಕಾಂಗ್ರೆಸ್ ಇಲ್ಲದಾಗ ಪಕ್ಷವನ್ನು ಕಟ್ಟಿದ್ದು ನಾನು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರು ಉತ್ತಮ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸುಮಾರು ೧೦ ಸಾವಿರ ಹಕ್ಕುಪತ್ರ ವಿತರಿಸಲು ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಿಎಂ ಆಗಮಿಸಲಿದ್ದಾರೆ ಎಂದು ನಂಜೇಗೌಡ ತಿಳಿಸಿದರು.

ಯಾವುದೇ ವೈಮನಸ್ಸು ಇಲ್ಲಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನಮ್ಮ ಪಕ್ಷದವರು, ನಾವಿಬ್ಬರೂ ಅಣ್ಣ ತಮ್ಮಂದಿರು ಇದ್ದಂತೆ, ಒಕ್ಕೂಟಕ್ಕೆ ಅವರು ಹೊಸಬರು, ಹಲವು ಅನುಮಾನಗಳಿದ್ದವು, ಅದಕ್ಕಾಗಿ ಮಾತನಾಡುತ್ತಿದ್ದರು, ನಂತರ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ, ಅದಕ್ಕೆ ಸಮಯ ಬೇಕಾಗುತ್ತರದೆ, ನಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂದರು. ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ಅವರು, ಸಿಎಂ ವಿಚಾರವಾಗಿ ಯಾರೂ ಮಾತನಾಡಬಾರದೆಂದು ಹೈಕಮಾಂಡ್‌ನ ಸ್ಪಷ್ಟ ಸೂಚನೆ ನೀಡಿದೆ, ಸಿದ್ದರಾಮಯ್ಯ ಅಥವಾ ಡಿಕೆಶಿ ಪರವಾಗಿ ಹಲವರಿದ್ದಾರೆ. ಆದರೆ ಯತೀಂದ್ರ ಈ ವಿಷಯದಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಸಿಎಂ ಮಗನಾಗಿದ್ದು ಮನೆಯಲ್ಲಿ ಆರಾಮವಾಗಿರಬೇಕು, ಸಿದ್ದರಾಮಯ್ಯ ರಾಜ್ಯದ ಪ್ರಮುಖ ನಾಯಕರು, ಅವಕಾಶ ಸಿಕ್ಕರೆ ರಾಷ್ಟ್ರಮಟ್ಟದ ನಾಯಕರಾಗುವ ಸಾಮರ್ಥ್ಯ ಅವರಲ್ಲಿದೆ ಎಂದರು.

ಗೊಂದಲಕ್ಕೆ ಶೀಘ್ರದಲ್ಲೇ ತೆರೆಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಒಟ್ಟಾಗಿದ್ದಾರೆ, ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಇವರಿಬ್ಬರ ನಾಯಕತ್ವದಿಂದ ನಾವೆಲ್ಲಾ ಶಾಸಕರಾಗಿದ್ದೇವೆ. ಹೈ ಕಮಾಂಡ್ ಶೀಘ್ರದಲ್ಲೇ ರಾಜಕೀಯ ಗೊಂದಲಕ್ಕೆ ತೆರೆ ಎಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಬಡವರು ಪ್ರಯೋಜನ ಪಡೆಯುತ್ತಿದ್ದಾರೆ. ಶ್ರೀಮಂತರು ಮತ್ತು ವಿರೋಧ ಪಕ್ಷದವರು ಮಾತ್ರ ವಿರೋಧಿಸುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ಸಿಎಲ್‌ಪಿ ಸಭೆಯಲ್ಲಿ ತಾವೇ ಮೊದಲು ಹೇಳಿದ್ದು ನಂತರ ಇತರೆ ಶಾಸಕರು ಇದನ್ನೇ ಹೇಳಿದರು, ಆದರೆ ಸಿ.ಎಲ್.ಪಿ. ಸಭೆಯಲ್ಲಿ ಆಗಿರುವ ವಿಚಾರ ಹೇಗೆ ಲೀಕ್ ಆಯಿತು ಎಂಬುದರ ಬಗ್ಗೆ ಅಶ್ಚರ್ಯ ವ್ಯಕ್ತಪಡಿಸಿದರು. ದೇಶದಲ್ಲಿ ಭ್ರಷ್ಟಾಚಾರದ ಮೂಲವೇ ಬಿಜೆಪಿ ಮತ್ತು ಆರ್‌ಎಸ್‌ಎಸ್. ೧೯೮೬ರಿಂದ ನಾನು ನಿರಂತರವಾಗಿ ಗೆಲ್ಲುತ್ತಿರುವುದು ನನ್ನ ಕೈಬಾಯಿ ಶುದ್ಧವಾಗಿರುವುದರಿಂದ. ಯಾರು ಏನು ಮಾತಾಡಿದರು ಸಾಬೀತುಪಡಿಸಬೇಕಲ್ಲ, ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದರೆ ಪ್ರಯೋಜನೆ ಇಲ್ಲ, ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವ ಬಿಜೆಪಿ ಬಿಹಾರದಲ್ಲಿ ಪ್ರತಿ ಮನೆಗೆ ೧೦ ಸಾವಿರ ನೀಡಿ ಗ್ಯಾರಂಟಿಗಳನ್ನು ಘೋಷಿಸಲಿಲ್ಲವೇ ಎಂದು ವ್ಯಂಗ್ಯವಾಡಿದರು.