ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ 56,825.7 ಚದರ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ಕರಡು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ತಾಲೂಕಿನ ಅಚನಹಳ್ಳಿ, ಅಗನಿ, ಆಲುವಳ್ಳಿ, ಅರಣಿ, ಅತ್ತಿಹಳ್ಳಿ, ಬಾಣಗೇರಿ, ಬಾಳೆಹಳ್ಳಿ, ಬೆಟ್ಟೇಕುಮಾರಿ, ದೇವಿಹಳ್ಳಿ, ಹೆಗ್ಗದ್ದೆ, ಹೊಡಚಹಳ್ಳಿ, ಹೊಂಗಡಹಳ್ಳಿ, ಹೊಸಹಳ್ಳಿ, ಜೆಡಿಗದ್ದೆ, ಕಡಗರವಳ್ಳಿ, ಕಾಡುಮನೆ, ಕಾಗಿನಹರೆ ರಾಜ್ಯ ಅರಣ್ಯ, ಕೇಸಾಗನಹಳ್ಳಿ, ಕುಮಾರಹಳ್ಳಿ, ಮಂಕನಹಳ್ಳಿ, ಮರಗತ್ತೂರು, ಮರಗುಂದ, ಮಾರ್ಕಳ್ಳಿ, ವಣಗೂರು, ಯಡೇಕುಮಾರಿ, ಯರಗಳ್ಳಿ ಹಾಗೂ ಯತ್ತಹಳ್ಳಿ ಸೇರಿದಂತೆ ಒಟ್ಟು 31 ಗ್ರಾಮಗಳು ಸೇರಿವೆ.
ಸಕಲೇಶಪುರ: ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಮಲೆನಾಡು ಭಾಗದ ಜನರ ಆತಂಕ, ಆಕ್ಷೇಪಣೆಗಳನ್ನು ಆಲಿಸಲು ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಲು ಇದೇ ಸೆಪ್ಟೆಂಬರ್ 20ರ ಭಾನುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ತಿಳಿಸಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಎಪಿಎಂಸಿ ಆವರಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ನಡೆಯಲಿದೆ. ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು, ವಿವಿಧ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ನೇರವಾಗಿ ಮನವಿ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು. ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ 56,825.7 ಚದರ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲು ಕರಡು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ತಾಲೂಕಿನ ಅಚನಹಳ್ಳಿ, ಅಗನಿ, ಆಲುವಳ್ಳಿ, ಅರಣಿ, ಅತ್ತಿಹಳ್ಳಿ, ಬಾಣಗೇರಿ, ಬಾಳೆಹಳ್ಳಿ, ಬೆಟ್ಟೇಕುಮಾರಿ, ದೇವಿಹಳ್ಳಿ, ಹೆಗ್ಗದ್ದೆ, ಹೊಡಚಹಳ್ಳಿ, ಹೊಂಗಡಹಳ್ಳಿ, ಹೊಸಹಳ್ಳಿ, ಜೆಡಿಗದ್ದೆ, ಕಡಗರವಳ್ಳಿ, ಕಾಡುಮನೆ, ಕಾಗಿನಹರೆ ರಾಜ್ಯ ಅರಣ್ಯ, ಕೇಸಾಗನಹಳ್ಳಿ, ಕುಮಾರಹಳ್ಳಿ, ಮಂಕನಹಳ್ಳಿ, ಮರಗತ್ತೂರು, ಮರಗುಂದ, ಮಾರ್ಕಳ್ಳಿ, ವಣಗೂರು, ಯಡೇಕುಮಾರಿ, ಯರಗಳ್ಳಿ ಹಾಗೂ ಯತ್ತಹಳ್ಳಿ ಸೇರಿದಂತೆ ಒಟ್ಟು 31 ಗ್ರಾಮಗಳು ಸೇರಿವೆ.ವರದಿ ಜಾರಿಯಾದರೆ ರಸ್ತೆ, ಚರಂಡಿ, ಮನೆ, ಶೌಚಾಲಯ ನಿರ್ಮಾಣದಂತಹ ಮೂಲಸೌಕರ್ಯ ಕಾಮಗಾರಿಗಳಿಗೂ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಈಗಾಗಲೇ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಕಂಗಾಲಾಗಿರುವ ಸಣ್ಣ ರೈತರು ಹಾಗೂ ಸ್ಥಳೀಯ ನಿವಾಸಿಗಳ ಬದುಕು ಮತ್ತಷ್ಟು ದುಸ್ತರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎನ್. ರಾಮಚಂದ್ರ( ಬೈರ್‌ಮುಡಿ ಚಂದ್ರು) ಮಾತನಾಡಿ, "ಪಕ್ಷಾತೀತವಾಗಿ ಬಿಜೆಪಿ, ಜೆಡಿಎಸ್, ಕಮ್ಯುನಿಸ್ಟ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು, ಎನ್‌ಜಿಒಗಳು, ರೋಟರಿ, ಲಯನ್ಸ್ ಸಂಸ್ಥೆಗಳು ಹಾಗೂ ದಲಿತ ಸಂಘರ್ಷ ಸಮಿತಿಯ ಮುಖಂಡರು ಅಹವಾಲು ಸಲ್ಲಿಸಬಹುದು. ಸಾರ್ವಜನಿಕರ ಅನುಕೂಲಕ್ಕಾಗಿ ವೇದಿಕೆ ಬಳಿ ಪ್ರತ್ಯೇಕ ಕೌಂಟರ್ ತೆರೆಯಲಾಗುತ್ತದೆ ಎಂದರು. ಕಾಂಗ್ರೆಸ್ ಮುಖಂಡ ಎಚ್.ಎಚ್. ಉದಯ್ ಮಾತನಾಡಿ, ಸಭೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂತ್ರಸ್ತ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಲಿಖಿತ ಮನವಿ ಸಲ್ಲಿಸುವ ಮೂಲಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು, " ಎಂದು ಕರೆ ನೀಡಿದರು.
ಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಫೀಜ್, ಕಾಂಗ್ರೆಸ್ ಮುಖಂಡರಾದ ಹಿತೈಷಿ, ಕಲ್ಗಣೆ ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.