ಗುರುಕುಲ ಶಾಲೆ ಸೃಜನ, ಮಿನಾಲ್‌ಗೆ ಸಿಎಂ ಗೌರವ

| Published : Nov 15 2024, 12:37 AM IST

ಸಾರಾಂಶ

ಬೆಂಗಳೂರಿನಲ್ಲಿ ಗುರುವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ 2024- 2025ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿನ್ನೆಲೆ ದಾವಣಗೆರೆಯ ಪ್ರತಿಷ್ಠಿತ ಗುರುಕುಲ ವಸತಿಯುತ ಶಾಲೆ ವಿದ್ಯಾರ್ಥಿನಿಯರಾದ ಬಿ. ಸೃಜನ, ಮಿನಾಲ್‌ ಮುಖ್ಯಮಂತ್ರಿ ಅವರಿಂದ ಗೌರವ ಸನ್ಮಾನಕ್ಕೆ ಪಾತ್ರರಾದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.

- ಬೆಂಗಳೂರಿನಲ್ಲಿ ಮಕ್ಕಳ ದಿನ ಕಾರ್ಯಕ್ರಮದಲ್ಲಿ ಸಾಧನೆ ಪ್ರಶಂಸಿಸಿದ ಸಿದ್ದರಾಮಯ್ಯ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಂಗಳೂರಿನಲ್ಲಿ ಗುರುವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ 2024- 2025ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿನ್ನೆಲೆ ದಾವಣಗೆರೆಯ ಪ್ರತಿಷ್ಠಿತ ಗುರುಕುಲ ವಸತಿಯುತ ಶಾಲೆ ವಿದ್ಯಾರ್ಥಿನಿಯರಾದ ಬಿ. ಸೃಜನ, ಮಿನಾಲ್‌ ಮುಖ್ಯಮಂತ್ರಿ ಅವರಿಂದ ಗೌರವ ಸನ್ಮಾನಕ್ಕೆ ಪಾತ್ರರಾದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.

ಅಂತರ ರಾಷ್ಟ್ರೀಯ ಮಟ್ಟದ ಫ್ಯಾಷನ್ ಮಾಡೆಲಿಂಗ್‌ನಲ್ಲಿ 2ನೇ ಸ್ಥಾನ, ರಾಜ್ಯ ಮತ್ತು ರಾಷ್ಟ್ರಮಟ್ಟದ ಫ್ಯಾಷನ್ ಮಾಡೆಲಿಂಗ್‌ ಸ್ಪರ್ಧೆಯಲ್ಲಿ 13 ಬಾರಿ ಜಯ, 3 ಬಾರಿ ದ್ವಿತೀಯ ಸ್ಥಾನ, 15 ಬಾರಿ ಟೈಟಲ್ ಹೋಲ್ಡರ್ ಪಡೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ 10 ಗೋಲ್ಡ್ ಮೆಡಲ್, 6 ಸಿಲ್ವರ್ ಮೆಡಲ್, 2 ಕಂಚಿನ ಮೆಡಲ್ ಪಡೆದಿದ್ದಾರೆ. ರಾಷ್ಟ್ರಮಟ್ಟದ ಕರಾಟೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಎಲ್ಲ ಪ್ರಶಸ್ತಿಗಳು ಒಟ್ಟುಗೂಡಿಸಿದರೆ 25 ಗೋಲ್ಡ್ ಮೆಡಲ್, 30 ಸಿಲ್ವರ್ ಮೆಡಲ್, 10 ಬ್ರೌನ್ಸ್ ಮೆಡಲ್‌ಗಳ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಾಗ ಸಾಧನೆ ಮತ್ತು ಇದಕ್ಕೆ ಉತ್ತಮ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಿದ ಗುರುಕುಲ ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಶಿಸಿದರು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಮಂತ್ರಿ ಜಿ. ಪರಮೇಶ್ವರ್, ಸಚಿವ ಜಮೀರ್ ಅಹ್ಮದ್ ಸೇರಿದಂತೆ ಶಾಸಕರು ಉಪಸ್ಥಿತರಿದ್ದರು.

ಗುರುಕುಲ ವಸತಿ ಶಾಲೆ ಅಧ್ಯಕ್ಷ ಆರ್. ಅಬ್ದುಲ್, ಶಾಲಾ ಆಡಳಿತ ಮಂಡಳಿ, ಸಿಬ್ಬಂದಿ, ಶಾಲಾ ಪೋಷಕರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದರು.

- - - -14ಕೆಡಿವಿಜಿ40, 41:

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ದಾವಣಗೆರೆ ಗುರುಕುಲ ಶಾಲೆ ವಿದ್ಯಾರ್ಥಿಗಳಾದ ಬಿ. ಸೃಜನ, ಮಿನಾಲ್ ಸಾಧನೆಗೆ ಪ್ರಶಂಶಿಸಿ ಗೌರವಿಸಿದರು.