ಸಿಇಒಗಳು ಕಾರ್ಯ ದಕ್ಷತೆಯಿಂದ ಸಹಕಾರ ಸಂಘಗಳ ಪ್ರಗತಿ ಸಾಧ್ಯ : ನಂಜುಂಡಪ್ರಸಾದ್

| Published : Jan 13 2024, 01:37 AM IST

ಸಿಇಒಗಳು ಕಾರ್ಯ ದಕ್ಷತೆಯಿಂದ ಸಹಕಾರ ಸಂಘಗಳ ಪ್ರಗತಿ ಸಾಧ್ಯ : ನಂಜುಂಡಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಡೇರಿ ಸಿಇಒಗಳ ಕರ್ತವ್ಯ, ಜವಾಬ್ದಾರಿ ಮತ್ತು ಲೆಕ್ಕ ಪತ್ರಗಳ ನಿರ್ವಹಣೆ ಕಾಯ್ದೆ ತಿದ್ದುಪಡಿಗಳ ಕುರಿತು ವಿಶೇಷ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಚಾಮರಾಜನಗರಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳು ಜವಾಬ್ದಾರಿಯಿಂದ ಕಾರ್ಯ ದಕ್ಷತೆ, ಕೌಶಲ್ಯವನ್ನು ರೂಢಿಸಿಕೊಂಡು ಮುನ್ನಡೆದರೆ ಡೇರಿಗಳು ಹೆಚ್ಚಿನ ಅರ್ಥಿಕ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.

ನಗರದ ಲ್ಯಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ಚಾ.ನಗರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯ ಜವಾಬ್ದಾರಿ ಇತ್ತೀಚಿನ ಸಹಕಾರ ಕಾಯ್ದೆ ತಿದ್ದುಪಡಿ ಹಾಗೂ ಲೆಕ್ಕ ಪುಸ್ತಕ ದಾಖಲಾತಿ ನಿರ್ವಹಣೆ ಕುರಿತು ನಡೆದ ಜಿಲ್ಲಾ ಮಟ್ಟದ ಒಂದು ದಿನ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,

ಚಾಮುಲ್ ಸೇರಿದಂತೆ ಎಲ್ಲಾ ಒಕ್ಕೂಟಗಳು ಇತ್ತೀಚಿನ ದಿನಗಳಲ್ಲಿ ಲಾಭಗಳಿಸುವುದಕ್ಕಿಂತ ನಷ್ಟದತ್ತ ಸಾಗುತ್ತಿವೆ. ಕಾರಣ, ಖಾಸಗಿ ಡೇರಿಗಳ ಪೊಪೈಟಿ ಮತ್ತು ಗುಣಮಟ್ಟದ ಹಾಲು ಪೊರೈಕೆಯಲ್ಲಿ ವ್ಯತ್ಯಯವಾಗುವುದು ಸೇರಿದಂತೆ ನಿರ್ವಹಣೆ ವೆಚ್ಚವೇ ಹೆಚ್ಚಾಗುತ್ತಿರುವುದರಿಂದ ಒಕ್ಕೂಟಗಳು ಲಾಭ ಗಳಿಸುವುದೇ ಕಷ್ಟವಾಗುತ್ತಿದೆ. ಚಾಮರಾಜನಗರ ಡೇರಿ ಪ್ರಸ್ತುತ ೧೦ ಕೋಟಿ ನಷ್ಟದಲ್ಲಿದೆ. ಇನ್ನು ಮೂರು ತಿಂಗಳಲ್ಲಿ ಹಾಲಿನ ಪುಡಿ ಹಾಗೂ ಇತರೇ ಉತ್ಪನ್ನಗಳನ್ನು ಮಾರಾಟ ಮಾಡಿ ನಷ್ಟವನ್ನು ಸರಿದೂಗಿಸುವ ಚಿಂತನೆ ನಮ್ಮದಾಗಿದೆ. ಹಾಲಿನ ಪೌಡರ್ ದರ ಇಳಿಕೆಯಾಗಿರುವುದು ಮತ್ತೊಂದು ಕಾರಣವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿರುವ ಡೇರಿಗಳ ಕಾರ್ಯನಿರ್ವಾಹಕರು ಆಡಳಿತ ಮಂಡಳಿಗೆ ಯಾರೇ ಬಂದರು ಅವರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಂಘದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು.

ಅವರಿಗೆ ಕಾಲ ಕಾಲಕ್ಕೆ ಲೆಕ್ಕ ಪತ್ರಗಳ ನಿರ್ವಹಣೆ ಮತ್ತು ಇತರೇ ಖರ್ಚುಗಳ ಬಗ್ಗೆ ಚರ್ಚಿಸುವುದು. ಗುಣಮಟ್ಟ ಹಾಲು ಶೇಖರಣೆ ನಿಮ್ಮ ಮೊದಲ ಆದ್ಯತೆಯಾಗಬೇಕು. ಆಗ ಮಾತ್ರ ಡೇರಿ ಲಾಭ ಕಾಣಲು ಸಾಧ್ಯವಿದೆ. ನಿಮ್ಮೆಲ್ಲರ ಹಿತ ಕಾಯಲು ಜಿಲ್ಲಾ ಸಹಕಾರ ಯೂನಿಯನ್ ಒಕ್ಕೂಟ ಸದಾ ಬದ್ಧವಾಗಿದೆ ಎಂದರು.

ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳ ಬಲವರ್ಧನೆ ಮತ್ತು ಉತ್ತಮ ಕಾರ್ಯನಿರ್ವಣೆಗೆ ಕಾರ್ಯಗಾರ ಸೂಕ್ತವಾಗಿದೆ. ಡೇರಿ ಸಿಇಒಗಳ ನಿವೃತ್ತಯಿಂದ ಸಾಕಷ್ಟು ಮಂದಿ ಯುವಕರು ಡೇರಿಗೆ ಬರುತ್ತಿದ್ದಾರೆ. ಅವರಿಗೆ ಇಂಥ ಶಿಬಿರಗಳು ವೃತ್ತಿ ನೈರ್ಪುಣ್ಯತೆಯನ್ನು ಹೆಚ್ಚಿಸುತ್ತದೆ. ಸಹಕಾರ ಇಲಾಖೆ ಮತ್ತು ಕಾಯ್ದೆಗೆ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವವರು ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದಾರೆ. ಅವರ ಅನುಭವ ಮತ್ತು ಸಂಘದ ನಿರ್ವಹಣೆಗೆ ಬಗ್ಗೆ ತಿಳಿದು ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದರು.

ಸಹಕಾರ ಸಂಘಗಳ ಉಪ ನಿಬಂಧಕರಾದ ಜ್ಯೋತಿ ಅರಸು ಮಾತನಾಡಿ, ಸರ್ಕಾರ ಯಶಸ್ವಿ ವಿಮೆ ಯೋಜನೆ ನೋಂದಾಣಿಗೆ ಫೆ. ೮ ರವರೆಗೆ ಕಾಲವಕಾಶ ನೀಡಿದ್ದು, ಕಳೆದ ಬಾರಿಯಿಂದ ಹೆಚ್ಚು ಮಂದಿಯನ್ನು ಯಶಸ್ವಿನಿ ವ್ಯಾಪ್ತಿಗೆ ತರುವ ಮೂಲಕ ಡೇರಿ ಸಿಇಒಗಳು ಶ್ರಮಿಸಬೇಕು ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಹಿರಿಯ ನಿರ್ದೇಶಕ ಎಂ. ಬಸವಣ್ಣ ಮಾತನಾಡಿ, ಸರ್ಕಾರ ಯಶಸ್ವಿನಿ ಯೋಜನೆ ಅನುಷ್ಟಾನ ಮಾಡಿ, ಬಳಿಕ ಅವರಿಗೆ ನೊಂದಾಣಿ ಕಾರ್ಡುಗಳು ಇಲಾಖೆಯಿಂದ ವಿತರಣೆಯಾಗುತ್ತಿಲ್ಲ. ಈ ವಿಳಂಬ ದೋರಣೆಯನ್ನು ಬಿಟ್ಟು ಯಶಸ್ವಿನಿ ನೊಂದಣಿಯಾದ ವಾರದಲ್ಲಿ ಕಾರ್ಡುಗಳು ಹಂಚಿಕೆಯಾಗಬೇಕು ಎಂದರು.

ಕೆಎಂಎಫ್‌ನ ನಿವೃತ್ತ ಹಿರಿಯ ಉಪ ನಿರ್ದೇಶಕ ಆರ್.ರಾಜಣ್ಣ, ನಿವೃತ್ತ ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಎನ್. ನಾಗಭೂಷಣ್ ಸಹಕಾರಿ ಸಂಘಗಳ ಜವಾಬ್ದಾರಿ ಲೆಕ್ಕ ಪತ್ರಗಳ ನಿರ್ವಹಣೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಮಲೆಯೂರು ನಾಗರಾಜು, ಎಚ್.ಎಂ. ಮಹದೇವಪ್ರಭು, ಅಮಚವಾಡಿ ನಾಗಸುಂದರ, ದಾಕ್ಷಾಯಿಣಿ, ಎಆರ್ ದಯಾನಂದ, ಚಾಮುಲ್ ಉಪ ವ್ಯವಸ್ಥಾಪಕ ಡಾ. ಅಮರ್, ಯೂನಿಯನ್ ಸಿಇಓ ಯೋಗೇಂದ್ರನಾಯಕ್, ಮ್ಯಾನೇಜರ್ ಮಲ್ಲಿಕಾರ್ಜುನ್, ಮಲ್ಲೇಶ್, ಕೆಂಡಗಣ ಹಾಗೂ ಡೇರಿಗಳ ಕಾರ್ಯನಿರ್ವಹಕರು ಭಾಗವಹಿಸಿದ್ದರು.

------------------------12ಸಿಎಚ್‌ಎನ್‌11

ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯ ಜವಾಬ್ದಾರಿ, ಇತ್ತೀಚಿನ ಸಹಕಾರ ಕಾಯ್ದೆ ತಿದ್ದುಪಡಿ ಹಾಗೂ ಲೆಕ್ಕ ಪುಸ್ತಕ ದಾಖಲಾತಿ ನಿರ್ವಹಣೆ ಕುರಿತು ನಡೆದ ಜಿಲ್ಲಾ ಮಟ್ಟದ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ಯೂನಿಯನ್ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್ ಮಾತನಾಡಿದರು.ಚಿತ್ರ ಸುದ್ದಿ ಪ್ಯಾನೆಲ್‌.....

12ಸಿಎಚ್‌ಎನ್‌11

ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯ ಜವಾಬ್ದಾರಿ ಇತ್ತೀಚಿನ ಸಹಕಾರ ಕಾಯ್ದೆ ತಿದ್ದುಪಡಿ ಹಾಗು ಲೆಕ್ಕ ಪುಸ್ತಕ ದಾಖಲಾತಿ ನಿರ್ವಹಣೆ ಕುರಿತು ನಡೆದ ಜಿಲ್ಲಾ ಮಟ್ಟದ ಒಂದು ದಿನ ವಿಶೇಷ ತರಬೇತಿ ಕಾರ್ಯಕ್ರಮವನ್ನು ಚಾಮುಲ್‌ ನಿರ್ದೇಶಕ ಸದಾಶಿವಮೂರ್ತಿ ಉದ್ಘಾಟಿಸಿದರು.