ಸಾರಾಂಶ
ಮುಂಡಗೋಡ: ರೈತರಿಗೆ ಆರ್ಥಿಕಯಾಗಿ ಬೆಂಬಲಿಸುವ ದೃಷ್ಟಿಯಿಂದ ಪ್ರಾರಂಭವಾಗಿರುವ ವನಜಾ ಸೌಹಾರ್ದ ಸಹಕಾರಿ ಸಂಸ್ಥೆಯು ಈ ಭಾಗದ ರೈತರಿಗೆ ವಿನೂತನ ಯೋಜನೆಯನ್ನು ನೀಡಿ ಸಹಕರಿಸಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.ಇತ್ತೀಚೆಗೆ ಪಟ್ಟಣದಲ್ಲಿ ವನಜಾ ಸೌಹಾರ್ದ ಸಹಕಾರಿ ಸಂಸ್ಥೆಯ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ದೇಶಕ್ಕೆ ಅನ್ನ ನೀಡುವ ರೈತರಿಗೆ ನೆರವಾಗುವ ಉದ್ದೇಶದಿಂದ ಪ್ರಾರಂಭವಾಗಿರುವ ವನಜಾ ಸೌಹಾರ್ದ ಸಹಕಾರಿ ಸಂಸ್ಥೆಯು ಈ ಭಾಗದ ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸಲಿ ಹಾಗೂ ಗ್ರಾಹಕರಿಗೆ ವಿನೂತನ ಸೇವೆಗಳನ್ನು ನೀಡಿ ಹೆಚ್ಚಿನ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.ವನಜಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿವೇಕ್ ಹೆಬ್ಬಾರ್ ಮಾತನಾಡಿ, ರೈತರಿಗಾಗಿ ಕೃಷಿ ಉಪಕರಣ ಖರೀದಿ ಸಾಲ, ಕೃಷಿ ಬೀಜ, ಗೊಬ್ಬರ, ರಾಸಾಯನಿಕವನ್ನು ಖರೀದಿಸಲು ಕಡಿಮೆ ಬಡ್ಡಿದರಲ್ಲಿ ವಿಶೇಷ ಸಾಲ ಸೌಲಭ್ಯಗಳನ್ನು ನೀಡುವ ಯೋಜನೆಯನ್ನು ನೀಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಶಾಸಕರ ಪತ್ನಿ ವನಜಾಕ್ಷಿ ಶಿವರಾಮ ಹೆಬ್ಬಾರ್, ಉಪಾಧ್ಯಕ್ಷ ಪ್ರಕಾಶ ಹೆಗಡೆ, ಮಾಜಿ ಶಾಸಕ ವಿ.ಎಸ್. ಪಾಟೀಲ, ಮುಂಡಗೋಡ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಮೋದ ಢವಳೆ, ಸಿ.ಎಫ್. ನಾಯ್ಕ, ರವಿಗೌಡ ಪಾಟೀಲ, ಆರ್.ಜಿ. ನಾಯ್ಕ, ವಿಜಯ ಮಿರಾಶಿ, ದ್ಯಾಮಣ್ಣ ದೊಡ್ಮನಿ, ಎಚ್.ಎಂ. ನಾಯ್ಕ ದೇವು ಪಾಟೀಲ್ ಇತರರು ಇದ್ದರು.ಬೆಂಗಳೂರು ಚಲೋದಲ್ಲಿ ಭಾಗವಹಿಸಲು ಮನವಿ
ಸಿದ್ದಾಪುರ: ಕೇಂದ್ರ ಸರ್ಕಾರವು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಮತ್ತು ಅರಣ್ಯ ಭೂಮಿ ಹಕ್ಕಿನ ಸಮಸ್ಯೆಗಳ ಬಗೆಹರಿಸಲು ಆಗ್ರಹಿಸಿ ತಾಲೂಕಿನ ಸಹಸ್ರಾರು ಅರಣ್ಯವಾಸಿಗಳು ನ. ೨೧ರಂದು ಬೆಂಗಳೂರಿನಲ್ಲಿ ಜರುಗಲಿರುವ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಾಗವಹಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಪಟ್ಟಣದ ಬಾಲಭವನದಲ್ಲಿ ತಾಲೂಕಿನ ಗ್ರೀನ್ ಕಾರ್ಡ್(ಪ್ರಮುಖರು) ಅವರನ್ನುದ್ದೇಶಿಸಿ ಮಾತನಾಡಿ, ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದು, ಮಂಜೂರು ಪ್ರಕ್ರಿಯೆಯಲ್ಲಿ ಇರುವ ಕಾನೂನಾತ್ಮಕ ಸಮಸ್ಯೆ ಬಗೆಹರಿಸಲು ಅತ್ಯವಶ್ಯವಾಗಿದ್ದು, ಅರಣ್ಯ ಭೂಮಿ ಹಕ್ಕಿಗಾಗಿ ಸರ್ಕಾರದ ಗಮನ ಸೆಳೆಯಲಾಗುವುದು.ಕಸ್ತೂರಿರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವುದು. ಅರಣ್ಯ ಭೂಮಿ ಹಕ್ಕಿನ ಮುಂದಿನ ಹೋರಾಟಕ್ಕೆ ಸಂಘಟನಾತ್ಮಕ ಶಕ್ತಿ ನೀಡಲು ಜಿಲ್ಲಾದ್ಯಂತ ೧,೦೦೦ ಹೋರಾಟದ ಪ್ರಮುಖರಿಗೆ ಗ್ರೀನ್ ಕಾರ್ಡ್ ವಿತರಿಸಲಾಗುವುದು. ಅಲ್ಲದೇ ಈ ಸಂಘಟನೆಗೆ ಹುರುಪು ನೀಡಲಾಗುವುದು ಎಂದರು.
ಮಾಬ್ಲೇಶ್ವರ ನಾಯ್ಕ ಸ್ವಾಗತಿಸಿದ್ದರು. ಕೆ.ಟಿ. ನಾಯ್ಕ, ವಿನಾಯಕ ನಾಯ್ಕ, ಚೌಡು ತಿಮ್ಮಣ್ಣ ಗೌಡ್ರು, ಜಯಂತ ನಾಯ್ಕ, ರವೀಂದ್ರ ನಾಯ್ಕ, ಭಾಸ್ಕರ ನಾಯ್ಕ, ಮೋಹನ ನಾಯ್ಕ, ಹಜರಾ ಬೇಗಂ, ಮಂಜುಳಾ ನಾಯ್ಕ, ರಾಧಾ ಹಾಸಿಕಟ್ಟಾ, ತಿಮ್ಮಪ್ಪ ನಾಯ್ಕ, ಡಿ.ಕೆ. ಹಾಸಣಗಿ, ಮೋಹನಾ ನಾಯ್ಕ, ಕಾರ್ಲಿಸ್ ಫರ್ನಾಂಡಿಸ್, ಎ.ಬಿ. ನಾಯ್ಕ, ರಾಮಚಂದ್ರ ನಾಯ್ಕ ಉಪಸ್ಥಿತರಿದ್ದರು.