ಸಹಕಾರಿ ಸಂಘಗಳು ಗ್ರಾಹಕರ ಹಿತ ಕಾಪಾಡಲಿ

| Published : Dec 24 2023, 01:45 AM IST

ಸಹಕಾರಿ ಸಂಘಗಳು ಗ್ರಾಹಕರ ಹಿತ ಕಾಪಾಡಲಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಥಮಿಕ ಸಹಕಾರಿ ಸಂಘಗಳು ತನ್ನ ಗ್ರಾಹಕರ ಹಿತ ಕಾಪಾಡುವತ್ತ ಗಮನ ಕೊಡುತ್ತಲೇ ಸಂಘದ ಅಭಿವೃದ್ಧಿ ಬಯಸಬೇಕು. ಆವಾಗಲೇ ಗ್ರಾಹಕರಿಗೆ ಸಂಘಗಳ ಮೇಲೆ ನಂಬಿಕೆ ಜೊತೆಗೆ ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ: ಜೆ.ಜಿ. ಸವದಿ

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಪ್ರಾಥಮಿಕ ಸಹಕಾರಿ ಸಂಘಗಳು ತನ್ನ ಗ್ರಾಹಕರ ಹಿತ ಕಾಪಾಡುವತ್ತ ಗಮನ ಕೊಡುತ್ತಲೇ ಸಂಘದ ಅಭಿವೃದ್ಧಿ ಬಯಸಬೇಕು. ಆವಾಗಲೇ ಗ್ರಾಹಕರಿಗೆ ಸಂಘಗಳ ಮೇಲೆ ನಂಬಿಕೆ ಜೊತೆಗೆ ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ ಜೆ.ಜಿ. ಸವದಿ ಹೇಳಿದರು.

ಪಟ್ಟಣದ ಪಶ್ಚಿಮ ಭಾಗದ ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಬಳಿಕ ಆಯ್ಕೆಗೊಂಡ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಸಬಲರಾಗಲು ಸಾಕಷ್ಟು ಉತ್ತಮ ಕಾರ್ಯಕ್ರಮಗಳು ಬರುತ್ತಲಿವೆ. ಅವೆಲ್ಲವುಗಳನ್ನು ಚೆನ್ನಾಗಿ ಬಳಸಿಕೊಂಡು ಸಂಸ್ಥೆ ಬೆಳೆಸಬೇಕು. ಜೊತೆಗೆ ಗ್ರಾಹಕರಿಗೂ ತಿಳಿಸಬೇಕು. ವಿಶೇಷವಾಗಿ ಸಹಕಾರಿ ಕ್ಷೇತ್ರದಲ್ಲಿ ನಂಬುಗೆ ಮತ್ತು ಪ್ರಾಮಾಣಿಕತೆಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಆ ದಿಸೆಯಲ್ಲಿ ಈ ಪಿಕೆಪಿಎಸ್ ಶ್ರಮಿಸುತ್ತಿರುವುದು ಸಂತಸದಾಯಕವಾಗಿದೆ ಎಂದರು.

ನೂತನ ಅಧ್ಯಕ್ಷ ರಮೇಶ ಕಿತ್ತೂರ, ಉಪಾಧ್ಯಕ್ಷ ರೇವಣೇಶ ಅಮ್ಮಣಗಿ ಮಾತನಾಡಿ, ಬ್ಯಾಂಕಿನ ಏಳಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕ ಸೇವೆ ಮಾಡುವುದಾಗಿ ಭರವಸೆ ನೀಡಿದರು.

ನೂತನ ನಿರ್ದೇಶಕರಾದ ಉದಯ ದೇಶಪಾಂಡೆ, ಧರೆಪ್ಪ ಕಿತ್ತೂರ, ಲಲಿತಾ ಮಿರ್ಜಿ, ಷಣ್ಮುಖ ಗಾಡದಿ, ಸುರೇಶ ಕಬಾಡಗಿ, ಚನ್ನಪ್ಪ ಆಲಗುಂಡಿ, ಪರಪ್ಪ ಡೊಂಬರ, ಶಂತವ್ವ ಕಿತ್ತೂರ, ಶ್ರೀಲತಾ ಕಬಾಡಗಿ, ಸಂಘದ ಕರ‍್ಯನಿರ್ವಾಹಕ ರಾಜೇಶ ಖವಾಸಿ ಸೇರಿದಂತೆ ಅನೇಕರಿದ್ದರು.