ರೈತರ ಅಭಿವೃದ್ಧಿಗೆ ಸಹಕಾರ ಸಂಘ ಶ್ರಮಿಸಬೇಕು

| Published : Sep 28 2024, 01:23 AM IST / Updated: Sep 28 2024, 01:24 AM IST

ಸಾರಾಂಶ

ಸೂಲಿಬೆಲೆ: ಸಹಕಾರ ಸಂಘ ಸಂಸ್ಥೆಗಳು ರೈತರ ಶ್ರೇಯೊಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಬೇಕು ಎಂದು ಮಾಜಿ ಸಂಸದ ಬಿ.ಎನ್. ಬಚ್ಚೇಗೌಡ ಹೇಳಿದರು.

ಸೂಲಿಬೆಲೆ: ಸಹಕಾರ ಸಂಘ ಸಂಸ್ಥೆಗಳು ರೈತರ ಶ್ರೇಯೊಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಬೇಕು ಎಂದು ಮಾಜಿ ಸಂಸದ ಬಿ.ಎನ್. ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ೪೯ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ನಿಂದ ಜಿಲ್ಲಾ ಬ್ಯಾಂಕ್‌ಗಳಿಗೆ ಅನುದಾನಗಳು ಬರುತ್ತವೆ. ಇದನ್ನು ಸ್ಥಳಿಯ ಸಹಕಾರ ಸಂಘಗಳು ಷೇರುದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಸವಲತ್ತು ನೀಡಬೇಕು. ರೈತಾಪಿ ವರ್ಗದ ಅಭಿವೃದ್ಧಿಗೆ ಹೆಚ್ಚಿನ ಕೃಷಿ ಸಾಲಗಳನ್ನು ನೀಡಬೇಕು ಎಂದು ಹೇಳಿದರು.

ಸಹಕಾರ ಬ್ಯಾಂಕಿನ ಅಧ್ಯಕ್ಷ ಬಿ.ವಿ. ಸತೀಶಗೌಡ ಮಾತನಾಡಿ, ಸಹಕಾರ ಬ್ಯಾಂಕ್‌ ಪ್ರಸ್ತುತ ೪೦೩೭ ಷೇರುದಾರರನ್ನು ಹೊಂದಿದ್ದು ೧೨೭.೪೮ ಲಕ್ಷ ರು. ಷೇರು ಬಂಡವಾಳವನ್ನು ಹೊಂದಿದೆ, ೨೦೨೩-೨೪ನೇ ಸಾಲಿನಲ್ಲಿ ೭ ಕೋಟಿ ೬೩ ಲಕ್ಷ ರು. ಕೆಸಿಸಿ ಸಾಲ ನೀಡಲಾಗಿದೆ, ೫ ಕೋಟಿ ೧೫ ಲಕ್ಷ ರು. ಆಭರಣ ಸಾಲ ನೀಡಿದ್ದೇವೆ, ೩ ಕೋಟಿ ೮೯ ಲಕ್ಷ ರು. ವ್ಯಾಪಾರ ಸಾಲ, ೧೫ ಲಕ್ಷ ರು. ವೇತನ ಅಧಾರ ಸಾಲ ಹಾಗೂ ೩ ಕೋಟಿ ೭೧ ಲಕ್ಷ ರು. ಠೇವಣಿ ಅಧಾರದ ಸಾಲ ನೀಡಲಾಗಿದೆ, ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಸದಸ್ಯರ ಶ್ರಮಿಸುತ್ತಿದ್ದಾರೆ. ಪ್ರಸ್ತುತ ೧ ಕೋಟಿ ೮೯ ರು. ಸಾವಿರ ನಿವ್ವಳ ಲಾಭ ಗಳಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ನೀಡಲು ಸಹಕಾರಿಯಾಗಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ್‌ ಮಾತನಾಡಿ, ಸೂಲಿಬೆಲೆ ಸಹಕಾರ ಸಂಘವು ಅಧ್ಯಕ್ಷರಾದ ಬಿ.ವಿ. ಸತೀಶಗೌಡ ನೇತೃತ್ವದಲ್ಲಿ ಪ್ರಸಕ್ತ ಸಾಲಿನಲ್ಲಿ ೧ ಕೋಟಿ ೮೯ ಸಾವಿರ ರು. ನಿವ್ವಳ ಲಾಭ ಗಳಿಸಿರುವುದು ಹೆಮ್ಮೆಯ ವಿಚಾರ. ಅಧ್ಯಕ್ಷರು ಮತ್ತು ನಿರ್ದೇಶಕರ ಆಡಳಿತ ಮಂಡಳಿ ಸಿಬ್ಬಂದಿ ವರ್ಗದ ಸಾಧನೆ ಶ್ಲಾಘನೀಯ ಎಂದರು.

ಸಹಕಾರ ಬ್ಯಾಂಕಿನ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಾಹಕ ಶ್ರೀನಿವಾಸಮೂರ್ತಿ ಓದಿ ಅನುಮೋದಿಸಿದರು, ೨೦೨೪-೨೫ನೇ ಸಾಲಿನ ಅಯವ್ಯಯ ಪತ್ರವನ್ನು ೯೭ ಲಕ್ಷ ೪೦ ಸಾವಿರ ರು.ಗೆ ಮಂಡಿಸಿ ಸಭೆಯ ಅನುಮೋದನೆ ಪಡೆದರು.

ಸಹಕಾರ ಸಂಘದ ವ್ಯಾಪ್ತಿಯ ಪ್ರಗತಿ ಪರ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಷೇರುದಾರ ಮಕ್ಕಳಿಗೆ ಗೌರವ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸೂಲಿಬೆಲೆ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ಬಿ.ಎನ್. ಗೋಪಾಲಗೌಡ, ನಿರ್ದೇಶಕ ಬಿ. ತಮ್ಮೇಗೌಡ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ್, ಅಧ್ಯಕ್ಷ ಬಿ.ವಿ.ಸತೀಶಗೌಡ, ಉಪಾಧ್ಯಕ್ಷ ಮುನಿಯಪ್ಪ, ಕಸಭಾ ಅಧ್ಯಕ್ಷ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಪ್ರಧಾನ ವ್ಯವಸ್ಥಾಪಕ ಪಿಳ್ಳೇಗೌಡ, ಹಾಪ್‌ಕಾಮ್ಸ್ ನಿರ್ದೆಶಕ ಎಂ.ಬಿ.ವೆಂಕಟೇಶ್, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಭಾರತಿ ದೇವರಾಜ್, ಡಾ.ಡಿ.ಟಿ.ವೆಂಕಟೇಶ್, ಮೇಲ್ವಿಚಾರಕ ಎಸ್.ಕೆ.ವಸಂತಕುಮಾರ್, ಲೆಕ್ಕಿಗ ಜಿ.ಎಂ.ನಾಗೆಶ್, ನಿರ್ದೇಶಕರಾದ ನಂಜಮ್ಮ, ವಿಜಯಲಕ್ಷ್ಮೀ, ಪಿಳ್ಳೇಗೌಡ, ನಾರಾಯಣಸ್ವಾಮಿ, ಮುತ್ತುರಾಜ್, ಮುನಿಶಾಮಿಗೌಡ, ಸೈಯದ್ ಮಹಬೂಬ್, ಮುನಿರಾಜು, ನಾರಾಯಣಪ್ಪ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಅಂಬರೀಷ್ ಇದ್ದರು.