ಸಹಕಾರ ಸಂಘಗಳ ಕೆಲವೇ ಜಾತಿಗೆ ಸೀಮಿತವಾಗದಿರಲಿ: ಪ್ರಗತಿಪರ ಚಿಂತಕ ಕೆ.ದೊರೈರಾಜು

| Published : Sep 23 2024, 01:18 AM IST

ಸಹಕಾರ ಸಂಘಗಳ ಕೆಲವೇ ಜಾತಿಗೆ ಸೀಮಿತವಾಗದಿರಲಿ: ಪ್ರಗತಿಪರ ಚಿಂತಕ ಕೆ.ದೊರೈರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರಿ ಸಂಘಗಳು ಕೆಲವೇ ಜಾತಿ ಸಮುದಾಯಗಳಿಗೆ ಸೀಮಿತವಾಗಿವೆ ಎಂದು ಪ್ರಗತಿಪರ ಚಿಂತಕ ಕೆ. ದೊರೈರಾಜು ಹೇಳಿದರು. ತುಮಕೂರಿನಲ್ಲಿ ಸಹಕಾರಿ ಸಂಘದ 2023-24 ನೇ ಸಾಲಿನ 3ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಹಕಾರಿ ಸಂಘಗಳು ಕೆಲವೇ ಜಾತಿ ಸಮುದಾಯಗಳಿಗೆ ಸೀಮಿತವಾಗಿವೆ ಎಂದು ಪ್ರಗತಿಪರ ಚಿಂತಕ ಕೆ. ದೊರೈರಾಜು ಹೇಳಿದರು.ನಗರದ ಸಂಘಮಿತ್ರ ಸ್ಲಂ ನಿವಾಸಿಗಳ ಸೌಹಾರ್ದ ಸಹಕಾರಿ ಸಂಘದ 2023-24 ನೇ ಸಾಲಿನ 3ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು.ತುಮಕೂರು ಸ್ಲಂ ನಿವಾಸಿಗಳ ಈ ಪ್ರಯತ್ನ ಕರ್ನಾಟಕಕ್ಕೆ ಮಾದರಿಯಾಗಿದೆ. ಏಕೆಂದರೆ ಸಹಕಾರ ಸಂಘಗಳು ಕೆಲವೇ ಜಾತಿಗಳಿಗೆ ಸೀಮಿತವಾಗಿದೆ. ಹಾಗಾಗಿ ಬಡವರು ನಡೆಸುವ ಸಹಕಾರ ಸಂಘಗಳು ಸಾಮಾನ್ಯ ಜನರೇ ನಡೆಸುವ ಸಹಕಾರಿ ಸಂಘಗಳಾಗಿವೆ ಎಂದರು.ಸ್ಲಂಗಳಲ್ಲಿ ಹೆಚ್ಚು ಹೆಣ್ಣುಮಕ್ಕಳು ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ಅವರ ಬದುಕು ಮತ್ತು ಕುಟುಂಬದ ಭವಿಷ್ಯವನ್ನು ನಿರ್ಧಾರ ಮಾಡಿಕೊಳ್ಳಬಹುದು. ಬಡವರು ಸೌಹಾರ್ದಯುತವಾಗಿ ಸಹಕಾರಿ ತ್ವತಗಳನ್ನು ಪಾಲಿಸಬೇಕು. ಇದರಿಂದ ಸಕ್ರಿಯವಾಗಿ ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಂಡು ನಮ್ಮ ಬದುಕು ಮತ್ತು ಭವಿಷ್ಯದ ಜೊತೆಗೆ ಸಮುದಾಯದ ಅಭಿವೃದ್ಧಿಗೊಳ್ಳಬಹುದು ಎಂದರು.ಹಣ ವ್ಯವಹಾರದಲ್ಲಿ ನಾವು ಭಾಗವಹಿಸಿದರೇ ಮಾತ್ರ ಬೇರೆಯವರು ನಮ್ಮ ಹತ್ತಿರ ಬರುತ್ತಾರೆ. ಆದ್ದರಿಂದ ಸ್ಲಂ ಯುವಜನರು ಮತ್ತು ಮಹಿಳೆಯರು ಉದ್ಯಮಶೀಲತೆಯಲ್ಲಿ ಪಾಲ್ಗೊಳ್ಳಬೇಕು, ಇದು ನಾವು ಆರ್ಥಿಕವಾಗಿ ಸಧೃಡವಾಗಲು ಸಾಧ್ಯವಾಗುತ್ತದೆ. ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.ಸೂಫಿಯಾ ಕಾನೂನು ಕಾಲೇಜು ಪ್ರಾಂಶುಪಾಲ ಎಸ್. ರಮೇಶ್ ಮಾತನಾಡಿ, ಸಂಘಮಿತ್ರ ಸಂಘಕ್ಕೆ ಭವಿಷ್ಯವಿದೆ ಸ್ಲಂ ನಿವಾಸಿಗಳು ಆರ್ಥಿಕ ವಿಮೋಚನೆಗೆ ಈ ಸಹಕಾರಿ ತತ್ವ ಮುಖ್ಯವಾಗಿದೆ. ಬಡವರು ಸೊಸೈಟಿಗಳನ್ನು ಕಟ್ಟಿ ಬೆಳಸುವುದು ಸುಲಭದ ಮಾತಲ್ಲ. ಆದರೆ ಇದನ್ನು ದೃಢವಾಗಿ ನಿಂತು 3ನೇ ವರ್ಷದತ್ತ ಕಾಲಿಟ್ಟಿರುವುದು ಒಳ್ಳೆಯ ಸಂಗತಿ. ಆರ್ಥಿಕ ವ್ಯವಹಾರಗಳನ್ನು ಹಣವಿಲ್ಲದವರು ಮಾಡಬೇಕಿದೆ. ಮೈಕ್ರೋ ಫೈನಾನ್ಸ್‌ಗಳಿಗೆ ಪರ್ಯಾಯವಾಗಿ ಸಂಘಮಿತ್ರ ಸಹಕಾರಿ ಸ್ಲಂ ಮಧ್ಯದಲ್ಲಿ ಪ್ರಾರಂಭವಾಗಬೇಕು. ೫ನೇ ವರ್ಷಕ್ಕೆ ಕನಿಷ್ಟ 2 ಸ್ಲಂಗಳಲ್ಲಿ ಶಾಖೆಗಳನ್ನು ಪ್ರಾರಂಭಿಸಬೇಕು. ನಾವು ಆರ್ಥಿಕವಾಗಿ ಒಗ್ಗೂಡಿದರೇ ರಾಜಕೀಯ ಪ್ರಾತಿನಿಧ್ಯತೆ ಪಡೆಯಲು ಸಾಧ್ಯವಾಗುತ್ತದೆ ಎಂದರು. ಸಂಘದ ಅಧ್ಯಕ್ಷ ಎ.ನರಸಿಂಹಮೂರ್ತಿ ಮಾತನಾಡಿ, ಆರ್ಥಿಕ ಬೆಳವಣಿಗೆಗೆ ನಗರದಲ್ಲಿನ ಬಡಜನರು ಮತ್ತು ಶ್ರಮಿಕ ವರ್ಗವಾಗಿರುವ ಸ್ಲಂ ನಿವಾಸಿಗಳ ಕೊಡುಗೆ ಅಪಾರವಾಗಿದೆ. ಅದರ ಪರಿಚಲನೇ ಕೂಡ ಆಗಿದ್ದಾರೆ. ಇಂದಿನ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಲು ಸಂಘಟಿತವಾದ ಮತ್ತು ಸೌಹಾರ್ಧತಯುತವಾಗಿ ಒಟ್ಟುಗೂಡಿ ಮುನ್ನಡೆಯುತ್ತಿರುವುದು ಒಂದು ಮಹತ್ತರವಾದ ಹೆಜ್ಜೆ ಗುರುತಾಗಿದೆ. ಸ್ಲಂ ನಿವಾಸಿಗಳ ಮತ್ತು ನಗರ ಬಡಜನರ ಬೆಂಬಲದೊಂದಿಗೆ 3ನೇ ವರ್ಷಕ್ಕೆ ನಾವು ಕಾಲಿಟ್ಟಿದ್ದು ಭವಿಷ್ಯದಲ್ಲಿ ಸ್ಲಂವಾರು ಬ್ರಾಂಚ್‌ಗಳನ್ನು ಪ್ರಾರಂಭಿಸಲಾಗುವುದೆಂದರು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ತಿರುಮಲಯ್ಯ 2023-24ನೇ ಸಾಲಿನ ಆಹ್ವಾನ, ಆಡಿಟ್ ವರದಿ, ಜಮಾ-ಖರ್ಚು, ಲಾಭ, ಆಸ್ತಿ ಜವಾಬ್ದಾರಿಗಳ ತಃಖ್ತೆಗಳನ್ನು ಓದುವ ಮೂಲಕ ಸದಸ್ಯರಿಂದ ಅಂಗೀರಿಸಿದರು.ನಿರ್ದೇಶಕರಾದ ಅನುಪಮಾ, ಶಂಕರಯ್ಯ, ಕಣ್ಣನ್, ಜಾಬೀರ್‌ಖಾನ್, ಮೋಹನ್ ಟಿ.ಎನ್, ಮಂಗಳಮ್ಮ.ಬಿ, ಭಾಗ್ಯ.ಎಂ, ಶಾರದಮ್ಮ, ಮಂಗಳಮ್ಮ, ನಿರ್ಮಲ.ಸಿ, ಮಾರಿಮುತ್ತು ಹಾಗೂ ಮಾರಿಯಮ್ಮ ಯುವಕ ಸಂಘದ ಪದಾಧಿಕಾರಿಗಳಾದ ರಾಜ, ಕೃಷ್ಣ, ಕಾತಿರಾಜು, ಮುರುಘ, ಮಾರಿ ಮತ್ತು ಕೋಡಿಹಳ್ಳ ಶಾಖೆಯ ಗೋವಿಂದರಾಜ್, ಅಶ್ವತ್, ನಿರ್ವಾಣಿ ಲೇಔಟ್‌ನ ಪುಟ್ಟರಾಜು, ಭಾಗ್ಯಮ್ಮ, ಭದ್ರಿ, ರಾಮಕೃಷ್ಣಯ್ಯ ಪಾಲ್ಗೊಂಡಿದ್ದರು.ಪೋಟೋ

ತುಮಕೂರಿನ ಸಂಘಮಿತ್ರ ಸ್ಲಂ ನಿವಾಸಿಗಳ ಸೌಹಾರ್ಧ ಸಹಕಾರಿ ಸಂಘದ 3ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.