ಇಲ್ಲಿನ ಗಂಗೊಳ್ಳಿಯ ಮೀನುಗಾರಿಕಾ ಧಕ್ಕೆಯಿಂದ ಮಧ್ಯಾಹ್ನದ ನಂತರ ಮೀನುಗಾರಿಕೆಗೆ ತೆರಳಿದ ಶ್ರೀ ಬಾಲಾಂಜನೇಯ ಹೆಸರಿನ ಪರ್ಶಿನ್ ಬೋಟು ಅನತಿ ದೂರದಲ್ಲಿ ಅಳಿವೆಯ ಸಮೀಪವೇ ಮುಳುಗಡೆಯಾಗಿದೆ. ಕೂಡಲೇ ಕಾರ್ಯಚರಣೆಗೆ ಇಳಿದ ಸಮೀಪದಲ್ಲಿದ್ದ ಇತರ ಬೋಟುಗಳ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ಸಿಬಂದಿಗಳು ಹಗ್ಗಗಳ ಸಹಾಯದಿಂದ ಮುಳುಗಿದ ಬೋಟಿನಲ್ಲಿದ್ದ 27 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಒಬ್ಬ ಮೀನುಗಾರನಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ: ಇಲ್ಲಿನ ಗಂಗೊಳ್ಳಿಯ ಮೀನುಗಾರಿಕಾ ಧಕ್ಕೆಯಿಂದ ಮಧ್ಯಾಹ್ನದ ನಂತರ ಮೀನುಗಾರಿಕೆಗೆ ತೆರಳಿದ ಶ್ರೀ ಬಾಲಾಂಜನೇಯ ಹೆಸರಿನ ಪರ್ಶಿನ್ ಬೋಟು ಅನತಿ ದೂರದಲ್ಲಿ ಅಳಿವೆಯ ಸಮೀಪವೇ ಮುಳುಗಡೆಯಾಗಿದೆ. ಕೂಡಲೇ ಕಾರ್ಯಚರಣೆಗೆ ಇಳಿದ ಸಮೀಪದಲ್ಲಿದ್ದ ಇತರ ಬೋಟುಗಳ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ಸಿಬಂದಿಗಳು ಹಗ್ಗಗಳ ಸಹಾಯದಿಂದ ಮುಳುಗಿದ ಬೋಟಿನಲ್ಲಿದ್ದ 27 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಒಬ್ಬ ಮೀನುಗಾರನಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೋಟಿನ ತಳಭಾಗದ ಹಲಗೆಗಳು ನೀರಿನ ರಭಸಕ್ಕೆಕಿತ್ತು ಕೊಚ್ಚಿ ಹೋಗಿದ್ದರಿಂದ ಬೋಟಿನೊಳಗೆ ನೀರು ಮುಗ್ಗಿ ಮುಳುಗಲು ಕಾರಣವೆನ್ನಲಾಗಿದೆ. ಅವಘಡದಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದಾಗಿ ತಿಳಿದುಬಂದಿದೆ.