ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 8ನೇ ತಂಡದ ತರಬೇತಿಯ ಸಮಾರೋಪ ಸಮಾರಂಭ ಮಲ್ಪೆಯ ಸಿ.ಎಸ್.ಪಿ. ಕೇಂದ್ರ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಪ್ರತಿಯೊಂದು ಇಲಾಖೆಯಲ್ಲಿ ಸಿಬ್ಬಂದಿ ಕಾಲಕಾಲಕ್ಕೆ ಇಲಾಖೆಯ ಆಧುನಿಕ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಹೊಂದಿಲು ತರಬೇತಿ ಮತ್ತು ಕೌಶಲ್ಯ ಅಗತ್ಯವಿದೆ. ದೇಶದ ರಕ್ಷಣೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದ ಪಾತ್ರ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಪಡೆದ ತರಬೇತಿಯ ಅಂಶಗಳನ್ನು ಸಾರ್ವಜನಿಕರ ಮತ್ತು ದೇಶದ ರಕ್ಷಣೆಗೆ ಉಪಯೋಗಿಸಬೇಕು ಎಂದರು.ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಮಿಥುನ್ ಎಚ್.ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ಉಪಾಧೀಕ್ಷಕ ಟಿ.ಎಸ್. ಸುಲ್ಫಿ, ಸಿಎಸ್ಪಿ ಕೇಂದ್ರದ ಸಹಾಯಕ ಆಡಳಿತಾಧಿಕಾರಿ ಮಂಜುಳಾ ಗೌಡ, ಪಿಎಸ್ಐ ಡಿ.ಎನ್. ಕುಮಾರ್, ಆರ್.ಜಿ. ಬಿರಾದಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಸುಮಾ ನಿರೂಪಿಸಿದರು. ಗಣಕಯಂತ್ರ ವಿಭಾಗದ ಪಿಎಸ್‌ಐ ಮುಕ್ತಾ ಬಾಯಿ ವಂದಿಸಿದರು.ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದ ಗಂಗೊಳ್ಳಿ ಠಾಣೆಯ ಸಿಎಸ್‌ಪಿ ಯುವರಾಜ್, ದ್ವೀತಿಯ ಸ್ಥಾನ ಪಡೆದ ಹೊನ್ನಾವರ ಠಾಣೆಯ ಸಿಎಸ್‌ಪಿ ವಿನಾಯಕ ನಾಯ್ಕ್ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸುಮನಾ ಎಂ. ಗೌಡ ಅವರನ್ನು ಗೌರವಿಸಲಾಯಿತು.ತರಬೇತಿಯಲ್ಲಿ ಭಾಗವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಯೋಗ, ಈಜು, ಬೋಟ್ ಪೆಟ್ರೋಲಿಂಗ್, ಬೋರ್ಡಿಂಗ್ ಆಪರೇಷನ್, ನೇವಲ್ ಬೇಸ್ ಭೇಟಿ, ಕೋಸ್ಟ್ಗಾಗಾರ್ಡ್ ಭೇಟಿ ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಯಿತು.