ಹಾಡವಳ್ಳಿಯಲ್ಲಿ ಕರಾವಳಿ ಸೌಹಾರ್ದ ಸಹಕಾರಿಯ ಶಾಖೆ ಉದ್ಘಾಟನೆ

| Published : Sep 07 2025, 01:00 AM IST

ಹಾಡವಳ್ಳಿಯಲ್ಲಿ ಕರಾವಳಿ ಸೌಹಾರ್ದ ಸಹಕಾರಿಯ ಶಾಖೆ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿ ಸೌಹಾರ್ದ ಸಹಕಾರಿ ಸಂಘದ ಶಾಖೆಯ ಸದುಪಯೋಗವನ್ನು ಸ್ಥಳೀಯರು ಪಡೆದು ಉತ್ತಮ ಆರ್ಥಿಕ ವ್ಯವಹಾರ ನಡೆಸಿ, ಶಾಖೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು.

ಭಟ್ಕಳ: ತಾಲೂಕಿನ ಹಾಡವಳ್ಳಿಯಲ್ಲಿ ಶನಿವಾರ ಭಟ್ಕಳದ ಕರಾವಳಿ ಸೌಹಾರ್ದ ಸಹಕಾರಿ ಸಂಘದ ಎರಡನೇ ಶಾಖೆಯನ್ನು ಮಾಜಿ ಸಚಿವ ಶಿವಾನಂದ ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಹಾಡವಳ್ಳಿಯಲ್ಲಿ ಆರಂಭಗೊಂಡ ಕರಾವಳಿ ಸೌಹಾರ್ದ ಸಹಕಾರಿ ಸಂಘದ ಶಾಖೆಯ ಸದುಪಯೋಗವನ್ನು ಸ್ಥಳೀಯರು ಪಡೆದು ಉತ್ತಮ ಆರ್ಥಿಕ ವ್ಯವಹಾರ ನಡೆಸಿ, ಶಾಖೆಯ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಭದ್ರತಾ ಕೊಠಡಿಯನ್ನು ಹಿರಿಯರಾದ ಸೋಮಯ್ಯ ಗೊಂಡ ಕುಂಟವಾಣಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಅಧ್ಯಕ್ಷ ಪರಮೇಶ್ವರ ದೇವಡಿಗ, ಉಪಾಧ್ಯಕ್ಷ ಗೋವಿಂದ ನಾಯ್ಕ, ನಿರ್ದೇಶಕರಾರ ಮಾದೇವ ಗೊಂಡ, ಪದ್ಮರಾಜ ಜೈನ್, ನಾಗೇಶ ನಾಯ್ಕ, ಗೋವಿಂದ ಬಾಗಲ್, ನಾಗರಾಜ ದೇವಾಡಿಗ ನೆರೆಕುಳಿ, ಕುಮಾರ ನಾಯ್ಕ ಹನುಮಾನ್‌ನಗರ, ಗೌರಿ ಮೋಗೇರ, ವಂದನಾ ನಾಯ್ಕ, ಜ್ಯೋತಿ ನಾಯ್ಕ, ನಾಗರಾಜ ದೇವಾಡಿಗ ಹೆಬ್ಳೆ, ಪ್ರಮುಖರಾದ ನಾಗೇಂದ್ರ ಶೆಟ್ಟಿ, ಈರಪ್ಪ ನಾಯ್ಕ, ಗಣೇಶ ನಾಯ್ಕ, ಪರಮೇಶ್ವರ ಮರಾಠಿ, ಮುಖ್ಯ ಕಾರ್ಯ ನಿರ್ವಾಹಕ ತುಳಸಿದಾಸ ದೇವಾಡಿಗ, ಕೋಟಖಂಡದ ಶಿವಶಾಂತಿಕ ಸೌಹಾರ್ದ ಸಹಕಾರಿ ಸಂಘದ ಅದ್ಯಕ್ಷ ರಾಘವೇಂದ್ರ ಹೆಬ್ಬಾರ ಹಾಗೂ ಊರ ನಾಗರಿಕರಿದ್ದರು.

ಭಟ್ಕಳದ ಹಾಡವಳ್ಳಿಯಲ್ಲಿ ಕರಾವಳಿ ಸೌಹಾರ್ದ ಸಹಕಾರಿಯ ಎರಡನೇ ಶಾಖೆಯನ್ನು ಮಾಜಿ ಸಚಿವ ಶಿವಾನಂದ ನಾಯ್ಕ ಲೋಕಾರ್ಪಣೆಗೊಳಿಸಿದರು.