ಇಂದು ತೆಂಗಿನ ಸಸಿ ವಿತರಣಾ ಕಾರ್ಯಕ್ರಮ

| Published : Oct 28 2024, 12:51 AM IST

ಸಾರಾಂಶ

ಶಾಲಾ ಹಂತದಲ್ಲಿಯೇ ಸಾವಯವ ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ ರಾವಣಿ, ಆಲದಹಳ್ಳಿ, ಮಾರಗೌಡನಹಳ್ಳಿ ಮತ್ತು ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಗಳ ಸುಮಾರು ೧೦೦೦ ಮಕ್ಕಳಿಗೆ ಉಚಿತವಾಗಿ ೨೦೦೦ ತೆಂಗಿನ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಲಕ್ಷ ಕಲ್ಪವೃಕ್ಷ ಮಹಾಮೇಳ ಯೋಜನೆಯಡಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಬೆಂಗಳೂರಿನ ರೋಟರಿ ಸಂಸ್ಥೆ ಹಾಗೂ ಸಂಪೂರ್ಣ ಸಾವಯವ ಕೃಷಿಕರ ಸಂಘದ ಸಹಯೋಗದೊಂದಿಗೆ ಅ.೨೮ರಂದು ಸರ್ಕಾರಿ ಶಾಲಾ ಮಕ್ಕಳಿಗೆ ತೆಂಗಿನ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ತಿಳಿಸಿದರು.

ಪಟ್ಟಣದ ಸಾವಯವ ಅಂಗಡಿ ಮಳಿಗೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಹಂತದಲ್ಲಿಯೇ ಸಾವಯವ ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ ರಾವಣಿ, ಆಲದಹಳ್ಳಿ, ಮಾರಗೌಡನಹಳ್ಳಿ ಮತ್ತು ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಗಳ ಸುಮಾರು ೧೦೦೦ ಮಕ್ಕಳಿಗೆ ಉಚಿತವಾಗಿ ೨೦೦೦ ತೆಂಗಿನ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ನುಡಿದರು.

ಅಂದು ಬೆಳಗ್ಗೆ ೧೦ಗಂಟೆಗೆ ದೊಡ್ಡಭೂವಳ್ಳಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೋಟರಿಯ ಬೆಂಗಳೂರು ಬ್ರಿಗೇಡ್, ರೋಟರಿ ಇಂದಿರಾನಗರ, ರೋಟರಿ ಪ್ಲಾಟಿನಂ ಸಿಟಿ, ರೋಟರಿ ಸ್ಕೈವೇ, ರೋಟರಿ ಯಲಹಂಕ ಸಂಸ್ಥೆಗಳು ಸಹಕಾರ ನೀಡಲಿವೆ. ರೋಟರಿಯ ಗವರ್ನರ್‌ಗಳಾದ ಎನ್.ಎಸ್.ಮಹದೇವಪ್ರಸಾದ್, ಬಿ.ಕೆ.ಕೃಷ್ಣಮೂರ್ತಿ ಸೇರಿ ಅನೇಕರು ಭಾಗಿಯಾಗಲಿದ್ದಾರೆ. ಮಳವಳ್ಳಿಯಲ್ಲಿ ಸಾವಯವ ಅಂಗಡಿ ಮಳಿಗೆಗಳನ್ನು ತೆರೆದು ಅಪ್ಪಟ ಸಾವಯವದಿಂದ ಬೆಳೆದ ಅಕ್ಕಿ, ರಾಗಿ, ಗೋದಿ, ಬೆಲ್ಲ, ಶುದ್ಧ ಹಸುವಿನ ತುಪ್ಪ, ಸೋಪು ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ೯೪೪೮೨೭೩೪೪೫ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಚಿಕ್ಕಣ್ಣ, ನಿರ್ದೇಶಕರಾದ ಡಾ.ಕಪನಿಗೌಡ, ಶಿವಕುಮಾರ್, ಕೇಶವಮೂರ್ತಿ ಇದ್ದರು.