ಸಾರಾಂಶ
ತುರುವೇಕೆರೆ: ತಾಲೂಕಿನ ತಾವರೆಕೆರೆ ಗ್ರಾಮದ ರಾಮಕೃಷ್ಣಪ್ಪ ಎಂಬುವರಿಗೆ ಸೇರಿದ ಕಾಯಿ ಶೆಡ್ಡಿಗೆ ಬೆಂಕಿ ತಗಲಿ ಶೆಡ್ಡಿನಲ್ಲಿದ್ದ ಸುಮಾರು 18 ಸಾವಿರ ಕೊಬ್ಬರಿ 12 ಸಾವಿರ ತೆಂಗಿನ ಕಾಯಿ ಸುಟ್ಟು ಭಸ್ಮವಾಗಿದೆ.
ತುರುವೇಕೆರೆ: ತಾಲೂಕಿನ ತಾವರೆಕೆರೆ ಗ್ರಾಮದ ರಾಮಕೃಷ್ಣಪ್ಪ ಎಂಬುವರಿಗೆ ಸೇರಿದ ಕಾಯಿ ಶೆಡ್ಡಿಗೆ ಬೆಂಕಿ ತಗಲಿ ಶೆಡ್ಡಿನಲ್ಲಿದ್ದ ಸುಮಾರು 18 ಸಾವಿರ ಕೊಬ್ಬರಿ 12 ಸಾವಿರ ತೆಂಗಿನ ಕಾಯಿ ಸುಟ್ಟು ಭಸ್ಮವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಶೆಡ್ಡಿನೊಳಗಿದ್ದ ಮಹೇಂದ್ರ ಜಿಯೋ ನೂತನ ವಾಹನವು ಸಹ ಸಂಪೂರ್ಣವಾಗಿ ಭಸ್ಮಗೊಂಡಿದೆ. ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿ ತಾವರೆಕೆರೆ ಗ್ರಾಮಸ್ಥರ ಸಹಕಾರದಿಂದ ಬೆಂಕಿಯನ್ನು ಶಮನಗೊಳಿಸಿದರು. ಸುಮಾರು 15 ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತ ರಾಮಕೃಷ್ಣರವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮ ಪಂಚಾಯಿತಿಯ ಸದಸ್ಯ ಕೆಂಪೇಗೌಡರು ಒತ್ತಾಯಿಸಿದ್ದಾರೆ.