ಸಾರಾಂಶ
ಅಂಕೋಲಾ: ಹಳೆ ವಿದ್ಯಾರ್ಥಿಗಳ ಸಂಘದ ನೆರವಿನಿಂದ ಸರ್ಕಾರಿ ಶಾಲೆಗಳ ಉನ್ನತೀಕರಣ ಸಾಧ್ಯ. ಈ ನಿಟ್ಟಿನಲ್ಲಿ ಕೋಡ್ಸಣಿ ಹಳೆಯ ವಿದ್ಯಾರ್ಥಿ ಸಂಘದವರು ವಿನೂತನ ಪರಿಕಲ್ಪನೆಯಲ್ಲಿ, ಗ್ರಾಮದ ಸುತ್ತಮುತ್ತಲಿನ ಎಲ್ಲ ಶಾಲೆಗಳ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ವೇದಿಕೆ ಕಲ್ಪಿಸಿರುವುದು ಮಾದರಿಯಾಗಿದೆ ಎಂದು ವಾಸರಕುದ್ರಗಿ ಗ್ರಾಪಂ ಅಧ್ಯಕ್ಷ ಪ್ರದೀಪ ನಾಯಕ ವಾಸರೆ ತಿಳಿಸಿದರು.ಕೋಡ್ಸಣಿ ಹಳೆಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ಮಾತನಾಡಿ, ಹಳೆಯ ವಿದ್ಯಾರ್ಥಿ ಸಂಘ ಕ್ರಿಯಾಶೀಲವಾಗಿ ತೊಡಗಿಸಿಕೊಂಡಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಶಾಲೆಯ ಭೌತಿಕ ಅಭಿವೃದ್ಧಿ ಸಾಧ್ಯ. ಈ ಶಾಲೆಯ ಹಳೆಯ ವಿದ್ಯಾರ್ಥಿ ಸಂಘ ತಾಲೂಕಿನಲ್ಲೆ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿರುವುದು ಹರ್ಷ ತಂದಿದೆ ಎಂದರು. ತಾಪಂ ಮಾಜಿ ಅಧ್ಯಕ್ಷ ಸುಜಾತಾ ಗಾಂವಕರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಅನೇಕ ಮಹತ್ವದ ಹುದ್ದೆ, ಅಧಿಕಾರದಲ್ಲಿ ಇದ್ದು ಸೇವೆ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಭಾವನೆ ಬೇಡ ಎಂದರು.ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಾಯ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿದರು.ಕೋಡ್ಸಣಿ ಹಿ.ಪ್ರಾ. ಶಾಲೆಯ ಮುಖ್ಯಾಧ್ಯಾಪಕಿ ಸಾವಿತ್ರಿ ನಾಯಕ, ಬಲಿಗದ್ದೆ ಕಿ.ಪ್ರಾ. ಶಾಲೆಯ ಮುಖ್ಯಾಧ್ಯಾಪಕ ಸಣ್ಣಪ್ಪ ನಾಯಕ, ಶಿರಗುಂಜಿ ಹಿ.ಪ್ರಾ. ಶಾಲೆಯ ಮುಖ್ಯಾಧ್ಯಾಪಕ ಪ್ರಶಾಂತ ನಾಯಕ, ವಾಸರೆ ಶಾಲೆಯ ಮುಖ್ಯಾಧ್ಯಾಪಕ ಅರುಣ ಓಮು ನಾಯ್ಕ, ಕೋಡ್ಸಣಿ ಶಾಲೆಯ ಶಿಕ್ಷಕಿ ನಾಗವೇಣಿ ನಾಯಕ, ಅರ್ಚಕ ಶ್ರೀಕಾಂತ ಗುನಗಾ, ಕೋಡ್ಸಣಿಯ ಊರ ಗೌಡರಾದ ಬೊಮ್ಮ ಬೀರಾ ಗೌಡ, ಅರ್ಚಕರಾದ ರಾಮ ಬೀರಾ ಗಾಮವಕರ, ಮಾಬ್ಲು ಲಕ್ಷ್ಮಣ ಗೌಡ, ಗ್ರಾಪಂ ಮಾಜಿ ಸದಸ್ಯ ಹುಲಿಯಪ್ಪ ಗೌಡ, ಊರ ಬುಧವಂತ ವಾಸು ತುಳಸು ಗೌಡ, ಕುದ್ರಗಿ ಶಾಲೆಯ ಮುಖ್ಯಾಧ್ಯಾಪಕಿ ಚಂದ್ರಮತಿ ನಾಯಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹುಲಿಯಪ್ಪ ಗೌಡ ಕೋಡ್ಸಣಿ, ನಿವೃತ್ತ ಯೋಧ ಸಂಜೀವ ನಾಯಕ ವಾಸರೆ, ಕುಸುಮಾ ಲಕ್ಷ್ಮೇಶ್ವರ, ರಾಮನಾಥ ಜೆ. ನಾಯ್ಕ ಅವರನ್ನು ಗೌರವಿಸಲಾಯಿತು. ನಾಗರಾಜ್ ಭಟ್ಕಳ ನಿರೂಪಿಸಿದರು. ಸುಪ್ರೀತಾ ಬಡಿಗೇರ, ಪೃಥ್ವಿ ಮಾಜಾಳಿ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.ಪಂ. ಎಂ.ಪಿ. ಹೆಗಡೆ ಪಡಿಗೇರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ
ಶಿರಸಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ. ೨೭ರಿಂದ ೨೯ರ ವರೆಗೆ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸಾಯಿ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಪಂಡಿತ ಎಂ.ಪಿ. ಹೆಗಡೆ ಪಡಿಗೇರಿ ಅವರಿಗೆ ಹವ್ಯಕ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಇವರು ಕಳೆದ ಅನೇಕ ದಶಕಗಳಿಂದ ಸಂಗೀತ ಕ್ಷೇತ್ರಕ್ಕೆ ನೀಡದ ಮಹೋನ್ನತ ಕೊಡುಗೆ ಹಾಗೂ ಸಾಯಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ, ಅನೇಕ ಸಂಗೀತಾಸಕ್ತರಿಗೆ ಸಂಗೀತಾಭ್ಯಾಸಕ್ಕೆ ಅನುಕೂಲ ಕಲ್ಪಿಸಿರುವುದನ್ನು ಪರಿಗಣಿಸಿದ ಅಖಿಲ ಹವ್ಯಕ ಮಹಾಸಭಾವು ಡಿ. ೨೭ರಂದು ಹವ್ಯಕ ಸಾಧಕರತ್ನ ಪ್ರಶಸ್ತಿ ನೀಡಿ, ಸನ್ಮಾನಿಸುತ್ತಿದೆ.