ಕಾಫಿ ಮಂಡಳಿ ಸಂಚಾರಿ ಮಣ್ಣು ಪರೀಕ್ಷಾ ಅಭಿಯಾನ

| Published : Mar 03 2024, 01:32 AM IST

ಸಾರಾಂಶ

ಮಣ್ಣು ಪರೀಕ್ಷಾ ವಿಜ್ಞಾನಿ ಪ್ರಪುಲಾ ಕುಮಾರಿ, ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಗೊಬ್ಬರದ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಕೊಟ್ಟಗೇರಿ ಸಮುದಾಯಭವನದಲ್ಲಿ ಗೊಣಿಕೊಪ್ಪ ಕಾಫಿ ಮಂಡಳಿ ಆಶ್ರಯದಲ್ಲಿ ಲಕ್ಷ್ಮಣತೀರ್ಥ ಸಂಘದ ಸಹಕಾರದೊಂದಿಗೆ ಮಣ್ಣು ಪರೀಕ್ಷಾ ಅಭಿಯಾನ ನಡೆಯಿತು. ಭಾಗವಹಿಸಿದ್ದ 43 ಬೆಳೆಗಾರರಿಗೆ ಸ್ಥಳದಲ್ಲೇ ಸುಣ್ಣದ ಪ್ರಮಾಣದ ಶಿಪಾರಸ್ಸಿನ ಫಲಿತಾಂಶ ನೀಡಲಾಯಿತು.ಮಣ್ಣು ಪರೀಕ್ಷಾ ವಿಜ್ಞಾನಿ ಪ್ರಪುಲಾ ಕುಮಾರಿ, ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಗೊಬ್ಬರದ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.ಕಾಫಿ ಮಂಡಳಿಯ ಕಿರಿಯ ಸಂಪರ್ಕ ಅಧಿಕಾರಿ ಮುಖಾರಿಬ್ ಮಾತನಾಡಿ, ಕಾಫಿ ಬೆಳೆಗಾರರಿಗೆ ಕಾಫಿ ಕಾಪತು ಮಾಡುವ ಬಗ್ಗೆ, ಕಾಫಿ ಗಿಡಗಳಿಗೆ ಬೇಕಾದ ನೀರಿನ ಪ್ರಮಾಣದ ಬಗ್ಗೆ, ಸುಣ್ಣದ ಮತ್ತು ಗೊಬ್ಬರದ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರು.

ಲಕ್ಷ್ಮಣ ತೀರ್ಥ ಸಂಘದ ಅಧ್ಯಕ್ಷ ಮಚ್ಚಮಾಡ ಅಯ್ಯಪ್ಪ, ಕಾರ್ಯದರ್ಶಿ ಮಾಚಂಗಡ ಸುಬ್ರಮಣಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅರಮನಮಾಡ ಸತೀಶ್ ದೇವಯ್ಯ ಸೇರಿದಂತೆ ಲಕ್ಷ್ಮಣತೀರ್ಥ ಸಂಘದ ಸದಸ್ಯರು ಮತ್ತು ಕಾಫಿ ಬೆಳೆಗಾರರು ಹಾಜರಿದ್ದರು.