ಸಾರಾಂಶ
ಸರ್ವ ಧರ್ಮಗಳಿಗೆ ಸೇರಿದ ಭಕ್ತರ ಆಡಳಿತ ಮಂಡಳಿಯಿಂದ ಬೆಳ‍್ಳಿ ಮಹೋತ್ಸವ ಆಚರಣೆ
ಕನ್ನಡಪ್ರಭ ವಾರ್ತೆ ಮಡಿಕೇರಿಚೆಟ್ಟಳ್ಳಿ ಕಾಫಿ ಬೋರ್ಡ್‌ನಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಾಲಯದ 25ನೇ ವರ್ಷದ ಬೆಳ್ಳಿ ಮಹೋತ್ಸವ ಮತ್ತು ದೇವಾಲಯ ನವೀಕರಣ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಮಾರ್ಚ್ 29 ಮತ್ತು 30ರಂದು ನೆರವೇರಲಿದೆ.ಎರಡೂ ದಿನ ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ಟ ಶುಳುವಾಲಮೂಲೆ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಲಿದೆ. ಮಾರ್ಚ್ 29ರಂದು ಬೆಳಗ್ಗೆ 9 ಗಂಟೆಗೆ ಸಪ್ತಶುದ್ಧಿ ಪುಣ್ಯಕ್ಷ ದೇವತಾ ಪ್ರಾರ್ಥನೆ, ಆಚಾರ್ಯ ಪಠಣ, ಪ್ರಸಾದಶುದ್ಧಿ, ಅನುಜ್ಞ ಕಳಶ, ಕಳಶ ಪ್ರತಿಷ್ಠಾಪನೆ, ವೇದಪಾರಾಯಾಣ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರುತ್ತದೆ.
ಸಂಜೆ 5 ಗಂಟೆಗೆ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ರಕ್ತೋಘ್ನ ಹವನ, ವಾಸ್ತು ಪೂಜೆ, ವಾಸ್ತು ಬಲಿ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗುತ್ತದೆ.30ರಂದು ಬೆಳಗ್ಗೆ 6 ಗಂಟೆಯಿಂದ 48 ತೆಂಗಿನಕಾಯಿ ಅಷ್ಟದ್ರವ್ಯದಿಂದ ಗಣಪತಿ ಹವನ, ಗಣಪತಿ ಅಥರ್ವ ಶೀರ್ಷ ಹವನ, ಬಿಂಬ ಸಾನ್ನಿಧ್ಯ ಹವನ, ಬೆಳಗ್ಗೆ 9 ಗಂಟೆಗೆ ಪೂರ್ಣಾಹುತಿ, 9.40ರ ನಂತರ ವೃಷಭ ಲಗ್ನದಲ್ಲಿ ಗಣಪತಿಗೆ ಕಲಶಾಭಿಷೇಕ, ನಂತರ ನಾಗದೇವರಿಗೆ ಕಳಶಾಭಿಷೇಕ, ಕಷೋಕ್ತ ಪೂಜೆ, ಮಂಗಳಾರತಿ, ಪ್ರಸಾದ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಮಹೇಶ್ ಮತ್ತು ಕಾರ್ಯದರ್ಶಿ ಅಪ್ಪುಕುಟ್ಟನ್ ಮಾಹಿತಿ ನೀಡಿದ್ದಾರೆ.
ಕಾಫಿ ಬೋರ್ಡ್‌ನಲ್ಲಿ 25 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ದೇವಾಲಯದ ಬೆಳ್ಳಿ ಮಹೋತ್ಸವವು ಸರ್ವ ಧರ್ಮಗಳಿಗೆ ಸೇರಿದ ಭಕ್ತರ ಆಡಳಿತ ಮಂಡಳಿಯಿಂದ ನೆರವೇರುತ್ತಿರುವುದು ವಿಶೇಷ.