ಕಾಫಿಯಲ್ಲಿ ಮೌಲ್ಯವರ್ಧನೆಗೆ ಹೆಚ್ಚು ಅವಕಾಶಗಳು ಇದ್ದು, ಪ್ರಸಕ್ತದಲ್ಲಿ ಗ್ರಾಹಕರ ರುಚಿ ಮತ್ತು ಅಭಿರುಚಿಗಳು ಬದಲಾಗುತ್ತಿದೆ. ಇದಕ್ಕೆ ಅನುಗುಣವಾಗಿ ಯಾವುದೇ ಕೃಷಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಗ್ರಾಹಕರ ಬೇಡಿಕೆ ಪೂರೈಸಬೇಕು. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ದೊಡ್ಡ ಸವಾಲಾಗಿ ಕೃಷಿಕರಿಗೆ ಸಂಕಷ್ಟ ತರುತ್ತಿದೆ. ಇವುಗಳನ್ನು ಎದುರಿಸಲು ಕಾಫಿ ಬೆಳೆಗಾರರು ತಮ್ಮ ಜ್ಞಾನದೊಂದಿಗೆ ವೈಜ್ಞಾನಿಕತೆಯನ್ನು ಆಳವಡಿಸಿಕೊಳ್ಳುವ ಮುಖಾಂತರ ಬೆಳೆಗಾರರನ್ನು ಸದೃಢ ಮಾಡುವ ಗುರಿಯನ್ನು ೭ ಬಿನ್ ಟೀಮ್ ಹೊಂದಿದ್ದು ೨೦೨೪ ರಲ್ಲಿ ಆರಂಭವಾದ ಸಂಸ್ಥೆ, ೨೦೨೫ರಲ್ಲಿ ಮೊದಲ ಘಟಿಕೋತ್ಸವ ನಡೆಸಿದ್ದು ಇದು ಎರಡನೇಯದ್ದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಭಾರತೀಯ ಕಾಫಿ ಉತ್ಪಾದನೆ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಸದೃಢಗೊಳಿಸುವ ನಿಟ್ಟಿನಲ್ಲಿ ಕಾಫಿ ಸಂಸ್ಕೃತಿ-2 ಹಾಗೂ ಘಟಿಕೋತ್ಸವ ಸಮಾರಂಭವನ್ನು 7 ಬಿನ್ ಟೀಮ್ ಹಮ್ಮಿಕೊಂಡಿದೆ ಎಂದು ಟೀಮ್‌ನ ಮುಖಂಡ ಡಾ. ಪ್ರದೀಪ್ ಹೇಳಿದರು.ಕಾಫಿಯಲ್ಲಿ ಮೌಲ್ಯವರ್ಧನೆಗೆ ಹೆಚ್ಚು ಅವಕಾಶಗಳು ಇದ್ದು, ಪ್ರಸಕ್ತದಲ್ಲಿ ಗ್ರಾಹಕರ ರುಚಿ ಮತ್ತು ಅಭಿರುಚಿಗಳು ಬದಲಾಗುತ್ತಿದೆ. ಇದಕ್ಕೆ ಅನುಗುಣವಾಗಿ ಯಾವುದೇ ಕೃಷಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಮತ್ತು ಗ್ರಾಹಕರ ಬೇಡಿಕೆ ಪೂರೈಸಬೇಕು. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ದೊಡ್ಡ ಸವಾಲಾಗಿ ಕೃಷಿಕರಿಗೆ ಸಂಕಷ್ಟ ತರುತ್ತಿದೆ. ಇವುಗಳನ್ನು ಎದುರಿಸಲು ಕಾಫಿ ಬೆಳೆಗಾರರು ತಮ್ಮ ಜ್ಞಾನದೊಂದಿಗೆ ವೈಜ್ಞಾನಿಕತೆಯನ್ನು ಆಳವಡಿಸಿಕೊಳ್ಳುವ ಮುಖಾಂತರ ಬೆಳೆಗಾರರನ್ನು ಸದೃಢ ಮಾಡುವ ಗುರಿಯನ್ನು ೭ ಬಿನ್ ಟೀಮ್ ಹೊಂದಿದ್ದು ೨೦೨೪ ರಲ್ಲಿ ಆರಂಭವಾದ ಸಂಸ್ಥೆ, ೨೦೨೫ರಲ್ಲಿ ಮೊದಲ ಘಟಿಕೋತ್ಸವ ನಡೆಸಿದ್ದು ಇದು ಎರಡನೇಯದ್ದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೭ ಬಿನ್ ಟೀಮ್‌ನ ಅಧ್ಯಕ್ಷ ಧರ್ಮರಾಜ್ ಹೊಂಕರವಳ್ಳಿ ಮಾತನಾಡಿ, ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಜನವರಿ ೧೬ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಕಾಫಿ ಕೃಷಿ ಸಂಸ್ಕೃತಿ- ೨ರ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಲತಾಕುಮಾರಿ, ಕಾಫಿ ಮಂಡಳಿ ಅಧ್ಯಕ್ಷ ಎಂ. ಜೆ ದಿನೇಶ್, ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊರ್ಮರಾವ್, ಖ್ಯಾತ ವಿಜ್ಞಾನಿ ವೇಣುಗೋಪಾಲ್,ಮೊದಲ ಕಾಫಿ ಕಪ್ ಸಂಶೋಧಕಿ ಸುನಾಲಿನ್ ಮೆನನ್, ಪೂರ್ಣೇಶ್ ಸೇರಿದಂತೆ ಹಲವು ಖ್ಯಾತ ವಿಜ್ಞಾನಿಗಳು ಆಗಮಿಸಲಿದ್ದು ಕಾರ್ಯಕ್ರಮದ ಸದುಪಯೋಗವನ್ನು ಬೆಳೆಗಾರರು ಪಡೆದುಕೊಳ್ಳಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಸುಬ್ರಮಣ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.