ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಶೇಕಡವಾರು ಉತ್ತಮ ಸಾಧನೆ ಮಾಡಿದರೂ ಕಳೆದ ಬಾರಿಗೆ ಹೋಲಿಸಿದರೆ ಒಂದು ಸ್ಥಾನ ಕುಸಿತ ಕಂಡಿದೆ.ಕಳೆದ ವರ್ಷ ಶೇ.79.56ರಷ್ಟು ಫಲಿತಾಂಶ ಪಡೆದು 9ನೇ ಸ್ಥಾನದಲ್ಲಿದ್ದ ಚಿಕ್ಕಮಗಳೂರು ಈ ಬಾರಿ ಶೇ.90.80ರಷ್ಟು ಫಲಿತಾಂಶ ಪಡೆದರೂ 10ನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆ ಒಟ್ಟು 8692 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 7616 ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ. 87.63 ರಷ್ಟು ಫಲಿತಾಂಶ ಬಂದಿದೆ.
ಇದರಲ್ಲಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ 8,149 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 7,399 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪ್ರಕಾರ ಜಿಲ್ಲೆಗೆ ಶೇ. 90.80ರಷ್ಟು ಫಲಿತಾಂಶ ಬಂದಿದೆ.ಕಲಾ ವಿಭಾಗದಲ್ಲಿ 2,044 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿ, 1,682 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಮೂಲಕ ಕಲಾ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಶೇ. 82.29 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 2,688 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಬರೆದು 2,486 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ. ಈ ಮೂಲಕ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಶೇ. 92.49 ರಷ್ಟು ಫಲಿತಾಂಶ ಬಂದಿದೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ, ಹಿಂದಿನಿಂದಲೂ ವಿಜ್ಞಾನ ವಿಭಾಗದಲ್ಲಿ ತನ್ನ ಪ್ರಾಬಲ್ಯ ತೋರುತ್ತಲೇ ಬಂದಿದೆ. ಈ ಬಾರಿ ವಿಜ್ಞಾನ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆ ಶೇ.94.56ರಷ್ಟು ಫಲಿತಾಂಶ ಪಡೆದಿರುವುದು ವಿಶೇಷ. 3,417 ಹೊಸ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 3,231 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.ಮೊದಲ ಬಾರಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಶೇಕಡವಾರು ಆಧಾರದ ಮೇಲೆ ಚಿಕ್ಕಮಗಳೂರು ಜಿಲ್ಲೆ ಹತ್ತನೇ ಸ್ಥಾನ ದಲ್ಲಿದ್ದರೂ, ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಪರಿಗಣಿಸಿದರೆ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿಯೇ 7ನೇ ಸ್ಥಾನದಲ್ಲಿದೆ.
-- ಬಾಕ್ಸ್....
ಅಂಕಿ ಅಂಶವಿವರ. ಪರೀಕ್ಷೆ ಬರೆದವರು ಉತ್ತೀರ್ಣ. ಶೇ
ಒಟ್ಟು ಪರೀಕ್ಷೆ ವಿದ್ಯಾರ್ಥಿ 8692. 7616 87.63ಹೊಸ ವಿದ್ಯಾರ್ಥಿ 8149. 7399. 90.8
ಖಾಸಗಿ ವಿದ್ಯಾರ್ಥಿ 192. 106. 55.21ಪುನರಾವರ್ತಿತ ವಿದ್ಯಾರ್ಥಿ 351. 112. 31.91...ಬಾಕ್ಸ್...
ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈಪರೀಕ್ಷೆ ಬರೆದ ಒಟ್ಟು 4051 ಹೊಸ ವಿದ್ಯಾರ್ಥಿಗಳಲ್ಲಿ 3827 ವಿದ್ಯಾರ್ಥಿಗಳು ಪಾಸ್ ಆಗಿದ್ದು, ಶೇ.94.47 ರಷ್ಟು ಫಲಿತಾಂಶ ಪಡೆದಿದ್ದಾರೆ. ನಗರದ ಪ್ರದೇಶದ 4098 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ 3572 ವಿದ್ಯಾರ್ಥಿಗಳಷ್ಟೇ ಪಾಸ್ ಆಗಿದ್ದು, ಕೇವಲ ಶೇ. 87.16 ರಷ್ಟು ಫಲಿತಾಂಶ ಬಂದಿದೆ......ಬಾಕ್ಸ್....ಹುಡುಗಿಯರೇ ಟಾಪ್
ಪರೀಕ್ಷೆ ಬರೆದ 4974 ಬಾಲಕಿಯರಲ್ಲಿ 4473 ಮಂದಿ ತೇರ್ಗಡೆಆಗುವ ಮೂಲಕ ಶೇ.89.93 ರಷ್ಟು ಫಲಿತಾಂಶ ಬಂದಿದೆ. ಆದರೆ, ಪರೀಕ್ಷೆ ಬರೆದ 3718 ಹುಡುಗರ ಪೈಕಿ 3144 ಮಾತ್ರ ಪಾಸ್ ಆಗಿದ್ದು, ಶೇ.84.56ರಷ್ಟು ಫಲಿತಾಂಶ ಬಂದಿದೆ. ಈ ಮೂಲಕ ಹುಡುಗಿಯರು ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.