ಜಗನ್ನಾಥ್ ಶೆಟ್ಟಿ ದೂರು ಕೊಟ್ಟ ಮರುದಿನದ ಮತ್ತೆ ಅದೇ ಕಾಫಿ ತೋಟಕ್ಕೆ ಗುರುವಾರ ಮುಂಜಾನೆ ಸುಮಾರು 4.30ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಕಳ್ಳರ ಗುಂಪು ಪುನಃ ಕಾಫಿ ದೋಚಲು ಯತ್ನಿಸಿದ್ದಾರೆ. ಈ ವೇಳೆಗೆ ಕಾರಿನಲ್ಲಿ ಕಾಫಿ ಬೀಜ ಕಾಯುತ್ತಾ ಮಲಗಿದ್ದ ಜಗನ್ನಾಥ್ ಶೆಟ್ಟಿ ಶಬ್ಧ ಕೇಳಿ ಎಚ್ಚೆತ್ತು ಕಾರಿನಿಂದ ಹೊರಗೆ ಬರಲು ಯತ್ನಿಸಿದ್ದಾರೆ. ಆಗ ಕಳ್ಳರ ಗುಂಪು ಮಚ್ಚಿನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಸುಮಾರು100 ಕೇಜಿ ತೂಕದ ಕಾಫಿಯನ್ನು ದೋಚಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಬೆಳೆಗಾರ ಜಗನ್ನಾಥ್ ಶೆಟ್ಟಿ ಸಾವು ಬದುಕಿನ ಜೊತೆ ಹೋರಾಟ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಅರೇಹಳ್ಳಿ ಸಮೀಪ ಮತ್ತೆ ಕಾಫಿ ಕಳ್ಳತನ ಮರುಕಳಿಸಿದ್ದು ತೋಟದ ಮಾಲೀಕನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಸುಮಾರು 100 ಕೇಜಿ ತೂಕದ ಕಾಫಿಯನ್ನು ದೋಚಿ ಪರಾರಿಯಾಗಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ. ಹಲ್ಲೆಗೊಳಗಾದ ಬೆಳೆಗಾರ ಜಗನ್ನಾಥ್ ಶೆಟ್ಟಿ ಸಾವು ಬದುಕಿನ ಜೊತೆ ಹೋರಾಟ ನಡೆಸುತ್ತಿದ್ದಾರೆ.ಕಳೆದ ಎರಡು ದಿನಗಳ ಹಿಂದೆ ಮೂರ್ನಾಲ್ಕು ಜನರ ಕಳ್ಳರ ಗುಂಪು ಸುಮಾರು 2 ಲಕ್ಷ ರುಪಾಯಿ ಮೌಲ್ಯದ ಕಾಫಿಯನ್ನು ಅರೇಹಳ್ಳಿ ಸಮೀಪದ ಜಗನ್ನಾಥ್ ಶೆಟ್ಟಿ ತೋಟದಲ್ಲಿ ಕಳುವು ಮಾಡಿದ್ದರು. ಈ ಬಗ್ಗೆ ಸ್ಥಳೀಯ ಕಾಫಿ ಬೆಳೆಗಾರ ಸಂಘದ ಸಹಕಾರದೊಂದಿಗೆ ಪೊಲೀಸ್ ಠಾಣೆಗೆ ಮಾಲೀಕರು ತೆರಳಿ ದೂರು ಸಲ್ಲಿಸಿ ತ್ವರಿತವಾಗಿ ಕಳ್ಳರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದರು. ವಿಪರ್ಯಾಸವೆಂದರೆ ಜಗನ್ನಾಥ್ ಶೆಟ್ಟಿ ದೂರು ಕೊಟ್ಟ ಮರುದಿನದ ಮತ್ತೆ ಅದೇ ಕಾಫಿ ತೋಟಕ್ಕೆ ಗುರುವಾರ ಮುಂಜಾನೆ ಸುಮಾರು 4.30ರ ಸಮಯದಲ್ಲಿ ಮೂರ್ನಾಲ್ಕು ಜನರಿದ್ದ ಕಳ್ಳರ ಗುಂಪು ಪುನಃ ಕಾಫಿ ದೋಚಲು ಯತ್ನಿಸಿದ್ದಾರೆ. ಈ ವೇಳೆಗೆ ಕಾರಿನಲ್ಲಿ ಕಾಫಿ ಬೀಜ ಕಾಯುತ್ತಾ ಮಲಗಿದ್ದ ಜಗನ್ನಾಥ್ ಶೆಟ್ಟಿ ಶಬ್ಧ ಕೇಳಿ ಎಚ್ಚೆತ್ತು ಕಾರಿನಿಂದ ಹೊರಗೆ ಬರಲು ಯತ್ನಿಸಿದ್ದಾರೆ. ಆಗ ಕಳ್ಳರ ಗುಂಪು ಮಚ್ಚಿನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಅಲ್ಲಿಂದ ಸುಮಾರು100 ಕೇಜಿ ತೂಕದ ಕಾಫಿಯನ್ನು ದೋಚಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಬೆಳೆಗಾರ ಜಗನ್ನಾಥ್ ಶೆಟ್ಟಿ ಸಾವು ಬದುಕಿನ ಜೊತೆ ಹೋರಾಟ ನಡೆಸುತ್ತಿದ್ದಾರೆ.
ಮಾಜಿ ಜಿಪಂ ಸದಸ್ಯ ಅಮಿತ್ ಶೆಟ್ಟಿ ಮಾತನಾಡಿ ಪೊಲೀಸ್ ಇಲಾಖೆ ತಪ್ಪಿತಸ್ಥರನ್ನು ಅದಷ್ಟು ಬೇಗ ಪತ್ತೆ ಹಚ್ಚಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಎರಡು ದಿನಗಳ ಹಿಂದೆ ಕಳ್ಳರ ಗುಂಪು ಸುಮಾರು 2 ಲಕ್ಷ ರು. ಮೌಲ್ಯದ ಕಾಫಿಯನ್ನು ಅರೇಹಳ್ಳಿ ಸಮೀಪದ ಜಗನ್ನಾಥ್ ಶೆಟ್ಟಿ ತೋಟದಲ್ಲಿ ಕಳುವು ಮಾಡಿದ್ದರು. ಅದೇ ಸ್ಥಳದಲ್ಲಿ ಮತ್ತೆ ಇಂದು ಕಾಫಿ ಕಳವು ನಡೆದಿದ್ದು ಕಳ್ಳರಿಗೆ ಯಾವುದೇ ರೀತಿಯ ಭಯ ಇಲ್ಲ ಎಂದು ಸಾಬೀತಾಗಿದೆ. ಪೊಲೀಸರಿಗೆ ಕಳ್ಳರ ಬಗ್ಗೆ ತೋಟದ ಮಾಲೀಕ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ ನಂತರವೂ ಮತ್ತೆ ಅದಕ್ಕಿಂತಲೂ ಕ್ರೌರ್ಯ ಮನಸ್ಸಿನಿಂದ ಅದೇ ತೋಟಕ್ಕೆ ತೆರಳಿ ಮಾಲೀಕನ ಮೇಲೆ ಹಲ್ಲೆ ಮಾಡಿ ಕಾಫಿ ದೋಚಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಮತ್ತೆ ಮತ್ತೆ ಕಾಫಿ ಕಳುವಿನ ಪ್ರಕರಣಗಳು ಮರುಕಳಿಸುತ್ತಿದ್ದು ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಸಾದ್ಯವಾಗದಿದ್ದರೆ ಮುಂದಿನ ದಿನದಲ್ಲಿ ಕಾಫಿ ಬೆಳೆಗಾರರ ಪ್ರಾಣಕ್ಕೆ ಸಂಚಕಾರ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪ್ರಕರಣ ಕುರಿತ ಹೆಚ್ಚಿನ ಮಾಹಿತಿ ಪಡೆದಿದ್ದಾರೆ. ಹಾಗೂ ಶ್ವಾನದಳ ವಿಶೇಷ ತನಿಖಾ ತಂಡದಿಂದ ತನಿಖೆ ಮುಂದುವರೆದಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.