ಮನುಷ್ಯನಿಗೆ ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನವೇ ಮುಖ್ಯ : ಗವಿಸಿದ್ದೇಶ್ವರ ಸ್ವಾಮೀಜಿ

| N/A | Published : Feb 11 2025, 12:49 AM IST / Updated: Feb 11 2025, 12:42 PM IST

ಮನುಷ್ಯನಿಗೆ ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನವೇ ಮುಖ್ಯ : ಗವಿಸಿದ್ದೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನಿಗೆ ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನವೇ ಮುಖ್ಯ. ಅಂತಹ ಅರಿವಿನ ಸಂಸ್ಕಾರದ ಶಿಕ್ಷಣದೊಂದಿಗೆ ಎಜುಕೇರ್ ಶಾಲೆಯು ಬೆಳವಣಿಗೆ ಕಾಣಲಿ. ಈ ಭಾಗದ ಮಕ್ಕಳಿಗೆ ಆಸರೆಯಾಗಲಿ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದರು.

 ಕೊಪ್ಪಳ : ಮನುಷ್ಯನಿಗೆ ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನವೇ ಮುಖ್ಯ. ಅಂತಹ ಅರಿವಿನ ಸಂಸ್ಕಾರದ ಶಿಕ್ಷಣದೊಂದಿಗೆ ಎಜುಕೇರ್ ಶಾಲೆಯು ಬೆಳವಣಿಗೆ ಕಾಣಲಿ. ಈ ಭಾಗದ ಮಕ್ಕಳಿಗೆ ಆಸರೆಯಾಗಲಿ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನುಡಿದರು.

ನಗರದ ಕಾಯಕ ಎಜುಕೇಷನಲ್ ಟ್ರಸ್ಟ್‌ನಡಿ ನೂತನ ಶಾಲಾ ಕಟ್ಟಡದ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣವೆಂದರೆ ಏನು? ಯಾವುದು ನಿಜವಾದ ಶಿಕ್ಷಣ? ಶಾಲೆಗೆ ಬಂದವರು ಮಾತ್ರ ಶಿಕ್ಷಣವಂತರಾ? ಶಾಲೆಗೆ ಬಾರದವರು ಶಿಕ್ಷಣವಂತರು ಅಲ್ವಾ? ಎನ್ನುವ ಚಿಂತನೆ ಮಾಡಿದಾಗ, ಮನುಷ್ಯನ ಎದೆಯಲ್ಲಿ ಸದ್ಗುಣ ಇರಬೇಕು, ವಿವೇಕ ಇರಬೇಕು. ದುಡಿದು ಬದುಕುವಂತೆ ಇರಬೇಕು. ದುಡಿದು ಬದುಕುವುದನ್ನು ಕಲಿಸುವುದೇ ನಿಜವಾದ ಶಿಕ್ಷಣ. ನಮಗೆ ಅಕ್ಷರ ಜ್ಞಾನಕ್ಕಿಂತ ಅರಿವಿನ ಜ್ಞಾನ ಇರಬೇಕು. ಅದೇ ನಿಜವಾದ ಶಿಕ್ಷಣ. ಇಂದು ಪಾಲಕರು ಮಕ್ಕಳ ನೀಟ್, ಸಿಇಟಿಯ ಬಗ್ಗೆ ತುಂಬಾ ತೆಲೆಕೆಡಿಸಿಕೊಂಡಿದ್ದಾರೆ. ಆದರೆ ಮಕ್ಕಳಿಗೆ ಜೀವನದಲ್ಲಿ ನೀಟ್ ಆಗಿ ಬದುಕುವುದನ್ನ ಕಲಿಸಬೇಕು ಎಂದು ಕಿವಿಮಾತು ಹೇಳಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕಾಯಕ ಸಂಸ್ಥೆಯು ೯ ವರ್ಷದಿಂದ ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ಕೊಡುತ್ತಿದೆ. ಎಜುಕೇರ್ ಶಾಲೆಗೆ ಎಲ್ಲರ ಸಹಕಾರ ಬೇಕಿದೆ. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕಿದೆ. ಇಲ್ಲಿನ ಅಭ್ಯರ್ಥಿಗಳು ಐಎಎಸ್, ಐಪಿಎಸ್‌ನಲ್ಲಿ ಉತ್ತೀರ್ಣರಾಗಲಿ ಎಂದರು.

ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯ ಸಿ.ವಿ. ಚಂದ್ರಶೇಖರ, ಡಾ. ಬಸವರಾಜ ಕ್ಯಾವಟರ್ ಸೇರಿ ಇತರರು ಮಾತನಾಡಿದರು. ಪ್ರಾಚಾರ್ಯ ರಾಜಶೇಖರ ಎಂ. ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.

ಸಮಾರಂಭದಲ್ಲಿ ಎಂಎಲ್‌ಸಿಗಳಾದ ಬಸನಗೌಡ ಬಾದರ್ಲಿ, ಹೇಮಲತಾ ನಾಯಕ, ಗಣ್ಯರಾದ ಮುದಿಯಪ್ಪ ಕವಲೂರು, ಶಾಂತಣ್ಣ ಮುದಗಲ್, ಶ್ರೀನಿವಾಸ ಗುಪ್ತಾ, ಎಚ್.ಎಲ್. ಹಿರೇಗೌಡ್ರು, ಸುರೇಶ ಭೂಮರಡ್ಡಿ, ಬಸವರಾಜ ಪುರದ್, ಪ್ರಭು ಹೆಬ್ಬಾಳ, ಶಂಭುಲಿಂಗನಗೌಡ ಪಾಟೀಲ್, ಬಿಇಒ ಶಂಕ್ರಯ್ಯ, ಅಮ್ಜದ್ ಪಟೇಲ್, ಮಹಾಂತೇಶ ಪಾಟೀಲ್, ಬಸವರಾಜ ಬಳ್ಳೊಳ್ಳಿ, ವೆಂಕನಗೌಡ ಹಿರೇಗೌಡ್ರ, ನಾಗರಾಜ ಜುಮ್ಮಣ್ಣನವರ್, ಆರ್.ಬಿ. ಪಾನಘಂಟಿ, ಕೃಷ್ಣಾ ಇಟ್ಟಂಗಿ, ಹನುಮಂತ ಹಳ್ಳಿಕೇರಿ, ರವೀಂದ್ರ ವಿ.ಕೆ. ಸೇರಿ ಇತರರಿದ್ದರು. ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಸ್ವಾಗತಿಸಿದರು. ಡಾ. ಶ್ರೀನಿವಾಸ ಹ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಗಳು ಅವರ ಕುಟುಂಬ ವರ್ಗವನ್ನು ಸನ್ಮಾನಿಸಿದರು.

ಜೀವ ಉಳಿಸುವ ವೈದ್ಯ, ಜೀವನ ಕಲಿಸುವ ಶಿಕ್ಷಕ-ತಂಗಡಗಿ:

ಕನ್ನಡಪ್ರಭ ವಾರ್ತೆ ಕೊಪ್ಪಳಜೀವನದಲ್ಲಿ ವೈದ್ಯ ಮತ್ತು ಶಿಕ್ಷಕ ತುಂಬಾ ಪ್ರಮುಖರು. ವೈದ್ಯ ರೋಗಿಯ ಜೀವ ಉಳಿಸಿದರೆ, ಶಿಕ್ಷಕ ಮಕ್ಕಳಿಗೆ ಜೀವನದ ದಾರಿ ತೋರಿಸುತ್ತಾನೆ. ಈ ಇಬ್ಬರನ್ನ ನಾನೆಂದೂ ಮರೆಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಎಜುಕೇರ್ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸಹ ಡಾ. ಶ್ರೀನಿವಾಸ ಹ್ಯಾಟಿ ೯ ವರ್ಷದಲ್ಲಿ ಎಜ್ಯುಕೇರ್ ಶಾಲೆ ಆರಂಭಿಸಿ ಸ್ವಂತ ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳ ಕಲಿಕೆಗೆ ಆಸರೆಯಾಗಿದ್ದಾರೆ. ಶಿಕ್ಷಣ ಸಂಸ್ಥೆಯ ಬಗ್ಗೆ ಅವರಿಗಿರುವ ಕಳಕಳಿ ಶ್ಲಾಘನೀಯ. ನನ್ನ ಹಾಗೂ ಅವರೊಂದಿಗಿನ ನನ್ನ ಬಾಂಧವ್ಯ ಬಹು ವರ್ಷಗಳದ್ದು, ರಾಜಕಾರಣದಾಚೆಯೂ ನಮ್ಮ ಅವರ ಸ್ನೇಹದ ಬಾಂಧ್ಯವವು ಗಟ್ಟಿಯಾಗಿದೆ. ಈ ಶಾಲೆಯ ಉದ್ಘಾಟನೆಗೆ ೯ ವರ್ಷದ ಹಿಂದೆ ನಾನೇ ಆಗಮಿಸಿದ್ದೆ, ಈಗ ಶಾಲೆ ಕಟ್ಟಡದ ಉದ್ಘಾಟನೆಗೂ ನಾನೇ ಆಗಮಿಸಿದ್ದೇನೆ. ಎಜುಕೇರ್ ಶಿಕ್ಷಣ ಸಂಸ್ಥೆಯು ಈ ಭಾಗದ ಮಕ್ಕಳಿಗೆ ಆಸರೆಯಾಗಲಿ ಎಂದರು.