ಸಾರಾಂಶ
ತೆಂಗಿನ ನಾರು ತಯಾರು ಮಾಡುವ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಭಸ್ಮವಾಗಿರುವ ಘಟನೆ ಸಮೀಪದ ದೊಡ್ಡಮಲ್ಲಿಗೆರೆ ಗೇಟ್ ಬಳಿ ನಡೆದಿದೆ.
ತುರುವೇಕೆರೆ: ತೆಂಗಿನ ನಾರು ತಯಾರು ಮಾಡುವ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಭಸ್ಮವಾಗಿರುವ ಘಟನೆ ಸಮೀಪದ ದೊಡ್ಡಮಲ್ಲಿಗೆರೆ ಗೇಟ್ ಬಳಿ ನಡೆದಿದೆ. ತಾಲೂಕಿನ ಮಾಯಸಂದ್ರ ಹೋಬಳಿಯ ದೊಡ್ಡಮಲ್ಲಿಗೆರೆಯ ಗೇಟ್ ಬಳಿ ಇರುವ ಹನುಮಂತರಾಜು ಎಂಬುವವರ ಜಮೀನಿನಲ್ಲಿ ತಮಿಳುನಾಡಿನ ಮೂರ್‍ನಲ್ಕು ಮಂದಿ ಮಾಲೀಕತ್ವದಲ್ಲಿ ತೆಂಗಿನ ನಾರಿನ ಉತ್ಪನ್ನ ತಯಾರು ಮಾಡುವ ಘಟಕವನ್ನು ಪ್ರಾರಂಭಿಸಲಾಗಿತ್ತು. ಗುರುವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಯಂತ್ರಗಳು, ಸಿದ್ಧಪಡಿಸಲಾಗಿದ್ದ ನಾರು, ತೆಂಗಿನ ಮಟ್ಟೆ ಸೇರಿದಂತೆ ಲಕ್ಷಾಂತರ ರು.ಗಳ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ದಳ ಮತ್ತು ಕಾರ್ಖಾನೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿ ಎಲ್ಲರೂ ಹರ ಸಾಹಸ ಪಟ್ಟು ಕಾರ್ಖಾನೆಗೆ ತಲುಗಿದ್ದ ಬೆಂಕಿಯನ್ನು ನಂದಿಸಿದರು. ಆ ವೇಳೆಗಾಗಲೇ ಕಾರ್ಖಾನೆಯ ಎಲ್ಲಾ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಸುಮಾರು ೧೫ ಲಕ್ಷಕ್ಕೂ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.