ಪಶುವೈದ್ಯಕೀಯ ಮಹಾವಿದ್ಯಾಲಯದ ಉನ್ನತಿಗಾಗಿ ಸಹಕರಿಸಿ: ಶಾಸಕ ಬೆಲ್ದಾಳೆ ಮನವಿ

| Published : Nov 15 2024, 12:34 AM IST

ಪಶುವೈದ್ಯಕೀಯ ಮಹಾವಿದ್ಯಾಲಯದ ಉನ್ನತಿಗಾಗಿ ಸಹಕರಿಸಿ: ಶಾಸಕ ಬೆಲ್ದಾಳೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‌ನ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್ಪಶುವೈದ್ಯರು ಜಾನುವಾರುಗಳ ಅನಾರೋಗ್ಯ ಅರೀತು ತಾವೇ ಚಿಕಿತ್ಸೆ ನೀಡುತ್ತಾರೆ ಹಾಗೂ ಈ ಮಹಾವಿದ್ಯಾಲಯವು ಹೆಚ್ಚಿನ ಉನ್ನತಿಗಾಗಿ ಎಲ್ಲರು ಸಹಕಾರ ನೀಡಿಬೇಕಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದರು. ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‌ನ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಠಾಟಿಸಿ ಮಾತನಾಡಿ, ಮಹಾವಿದ್ಯಾಲಯದ ಆವರಣಕ್ಕೆ ಶುದ್ಧ ನೀರಿನ ಘಟಕ, ಹೈ ಮಾಸ್ಕ್‌ ಲ್ಯಾಂಪ್‌ ಹಾಗೂ ಶಾಸಕರ ಅನುದಾನದಿಂದ 5 ಲಕ್ಷ ರು. ವಿದ್ಯಾಲಯದ ಅಭಿವೃದ್ಧಿ ಕಾರ್ಯಗಳಿಗೆ ನೀಡುವುದಾಗಿ ಆಶ್ವಾಸನೆ ನೀಡಿದರು. ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ.ಕೆ.ಸಿ.ವೀರಣ್ಣ ಮಾತನಾಡಿ, ನಾನು 1992 ರಿಂದ ಈ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿರುತ್ತೇನೆ ಈ ಮಹಾವಿದ್ಯಾಲವು ನನ್ನ ಏಳಿಗೆಗೆ ಸಾಕಷ್ಟು ಕೊಡುಗೆ ನೀಡಿದೆ. ವಿಶ್ವವಿದ್ಯಾಲಯದ ಕುಲಸಚಿವನಾಗಿ ಮತ್ತು ಸದ್ಯ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದೇನೆ, ಇದು ನನಗೆ ಹೆಮ್ಮೆಯ ವಿಷಯ ಎನಿಸುತ್ತಿದೆ. ಹುಬ್ಬಳಿ/ಧಾರವಾಡ ಜಿಲ್ಲೆಯಲ್ಲಿ ಆರೂ ಜನ ಉನ್ನತ ಆಡಳಿತ ಆಧಿಕಾರಿಗಗಳು ಈ ಮಹಾವಿದ್ಯಾಲಯದವರು ಹಾಗೂ ನನ್ನ ವಿದ್ಯಾರ್ಥಿಗಳೆಂದು ತಿಳಿಸಿದರು. ಡಾ.ಸುರೇಶ್‌ ಎಸ್‌. ಹೊನ್ನಪ್ಪಗೊಳ ಅವರ ಮಹಾವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಗೆ ಶುಭಾಷಯ ತಿಳಿಸಿದ್ದಾರೆ ಎಂದರು. ಡಿನ್ ಡಾ.ಎಮ್.‌ ಕೆ.ತಾಂದಳೆ ಪ್ರಾಸ್ತಾವಿಕ ಮಾತನಾಡಿ, 1984ರಿಂದ ಮಹಾವಿದ್ಯಾಲಯ ನಡೆದು ಬಂದ ದಾರಿ, ಇಲ್ಲಿಯವರೆಗೆ ದುಡಿದ ಎಲ್ಲಾ ವರ್ಗದವನ್ನು ನೆನೆಪಸಿಕೊಂಡರು. ವಿಶ್ವವಿದ್ಯಾಲಯ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಡಾ. ವೆಂಕಟಾಚಲ, ಡಾ. ಎಮ್‌.ಎಮ್‌.ಜಯಪ್ರಕಾಶ, ಸಂಗಮೇಶ ಡಿ. ವಾಲಿಕರ, ಬಸವರಾಜ ಭತಮೂರ್ಗೆ ಅವರು ಮಹಾವಿದ್ಯಾಲಯದ 41 ಸಂಸ್ಥಾಪನಾ ದಿನಾಚರಣೆಗೆ ಶುಭಾಶಯ ತಿಳಿಸಿ ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯದ ಏಳಿಗೆಗಾಗಿ ಸಹಕರಿಸುವುದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಲ್ಲಿ ಕಾಮಧೇನು ಕನ್ನಡ ಸಂಘವನ್ನು ಉದ್ಘಾಟಿಸಲಾಯಿತು. ಹಳೆಯ ವಿದ್ಯಾರ್ಥಿಗಳ ಸಂಘದಿಂದ ಡಾ.ಶಶಿಧರ ಟಿ. ಉಪ ನಿರ್ದೇಶಕರು ಮುನಿರಬಾದ್‌ ಇವರ ಸಾಧನೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಪಶುವೈದ್ಯಾಧಿಕಾರಿಗಳಿಗೆ “ಕರ್ನಾಟಕದಲ್ಲಿನ ಘನಿಕೃತ ವೀರ್ಯ ಸಂಸ್ಕರಣಾ ವ್ಯವಸ್ಥೆಯ ಒಳ ನೋಟ” ಒಂದು ದಿನದ ತಾಂತ್ರಿಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಜಿಲ್ಲೆಯ 50 ಪಶು ವೈದ್ಯಾಧಿಕಾರಿಗಳು, ಶಿಕ್ಷಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದರು.