ಶಿಬರೂರು- ಕಟೀಲು ಸಂಪರ್ಕಿಸುವ ಅಣೆಕಟ್ಟು ಕುಸಿತ

| Published : May 05 2024, 02:10 AM IST / Updated: May 05 2024, 12:49 PM IST

ಶಿಬರೂರು- ಕಟೀಲು ಸಂಪರ್ಕಿಸುವ ಅಣೆಕಟ್ಟು ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 18 ವರ್ಷಗಳ ಹಿಂದೆಯೇ ಈ ಅಣೆಕಟ್ಟು ನಿರ್ಮಾಣವಾಗಿದ್ದು ಇದರ ಮೂಲಕ ಶಿಬರೂರಿನಿಂದ ಕಟೀಲಿಗೆ ನಡೆದುಕೊಂಡು ಬರಲು ತೀರಾ ಹತ್ತಿರದ ದಾರಿಯಾಗಿದೆ.

 ಮೂಲ್ಕಿ :  ಶಿಬರೂರು ಹಾಗೂ ಕಟೀಲು ಪರಿಸರದ ಕೃಷಿಕರಿಗೆ ಹಾಗೂ ಗ್ರಾಮಸ್ಥರಿಗೆ ಬಹುಪಯೋಗಿಯಾಗಿದ್ದ ಶಿಬರೂರು ಮತ್ತು ಕಟೀಲಿಗೆ ಸಂಪರ್ಕ ಕಲ್ಪಿಸುವ ಮೂಡುಮಠ ಬಳಿಯ ಅಣೆಕಟ್ಟು ಶುಕ್ರವಾರ ರಾತ್ರಿ ಕುಸಿದು ಬಿದ್ದಿದೆ.

ಕಳೆದ 18 ವರ್ಷಗಳ ಹಿಂದೆಯೇ ಈ ಅಣೆಕಟ್ಟು ನಿರ್ಮಾಣವಾಗಿದ್ದು ಇದರ ಮೂಲಕ ಶಿಬರೂರಿನಿಂದ ಕಟೀಲಿಗೆ ನಡೆದುಕೊಂಡು ಬರಲು ತೀರಾ ಹತ್ತಿರದ ದಾರಿಯಾಗಿದೆ.

ಅಕ್ರಮ ಮರಳುಗಾರಿಕೆಯೇ ಅಣೆಕಟ್ಟು ಕುಸಿದು ಬೀಳಲು ಕಾರಣವಾಗಿದೆ ಎಂದು ದೂರಲಾಗಿದೆ. ಎರಡು ತಿಂಗಳ ಹಿಂದೆಯೇ ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಈ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿ, ಗಣಿಗಾರಿಕೆ ಹಾಗೂ ಪೊಲೀಸ್‌ ಇಲಾಖೆಗೆ ನೀಡಿದ್ದಾರೆ. ಆದರೂ ಇಲ್ಲಿ ಮರಳುಗಾರಿಕೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ.

ಕುಸಿತವಾಗಿರುವ ಸ್ಥಳಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಿರಿಕುರಲ್ ರೈತ ಉತ್ಪಾದಕ ಸಂಸ್ಥೆ ನಿರ್ದೇಶಕ ರತ್ನಾಕರ ಶೆಟ್ಟಿ ಎಕ್ಕಾರು, ಪ್ರವೀಣ್‌ ಮಾಡ, ಸುರೇಶ್ ಶೆಟ್ಟಿ ಎಕ್ಕಾರು, ಕಟೀಲು ಪಂಚಾಯತ್ ಮಾಜಿ ಸದಸ್ಯ ಅರುಣ ಕುಮಾರ್ ಮಲ್ಲಿಗೆಯಂಗಡಿ, ಸೂರಿಂಜೆ ಪಂಚಾಯಿತಿ ಸದಸ್ಯ ಜಿತೇಂದ್ರ ಶೆಟ್ಟಿ, ಗ್ರಾಮಸ್ಥ ಪುರುಷೋತ್ತಮ ಕೋಟ್ಯಾನ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.