ಸಾರಾಂಶ
ಕನ್ನಡಪ್ರಭ ವಾರ್ತೆ ತಿಕೋಟಾ
ಮಾಧ್ಯಮಿಕ ಶಾಲೆಗಳು ಕೆಲವೊಮ್ಮೆ ತಮ್ಮ ಮತದಾನದ ವಯಸ್ಸನ್ನು ತಲಪುವ ಮೊದಲು ಯುವ ಜನರು ಚುನಾವಣೆಯ ಪರಿಕಲ್ಪನೆ ಪರಿಚಯಿಸಲು ಅಣಕು ಚುನಾವಣೆಗಳನ್ನು ಆಯೋಜಿಸಲಾಗುತ್ತದೆ ಎಂದು ರಾಜ್ಯಶಾಸ್ತ್ರ ಉಪನ್ಯಾಸಕಿ ಕವಿತಾ ಹೊಸಟ್ಟಿ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಜತ್ತಿ ಪದವಿ ಪೂರ್ವ ಕಾಲೇಜಿನಲ್ಲಿ 2024/25 ಸಾಲಿನ ಕಾಲೇಜು ಸಂಸತ್ತು ಸೋಮವಾರ ಚುನಾವಣೆ ಅಣಕು ಪ್ರದರ್ಶನದಲ್ಲಿ ಮಾತನಾಡಿದ ಅವರು, ಸರ್ಕಾರ ಮತ್ತು ಸಂಸತ್ತಿನ ಪಾತ್ರದ ಬಗ್ಗೆ ತಿಳಿವಳಿಕೆ ನೀಡುವ ಗುರಿಯನ್ನು ಹೊಂದಿವೆ. ಭವಿಷ್ಯದ ಯುವ ಮತದಾರರನ್ನು ಮತ ಚಲಾಯಿಸಲು ಪ್ರೋತ್ಸಾಹಿಸಲು ಅನುಭವವು ಸಹಾಯ ಮಾಡುತ್ತದೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಚುನಾವಣೆ ಪ್ರಕ್ರೀಯೆ ಹೇಗೆ ಜರಗುತ್ತದೆ ಎಂಬುವುದರ ಕುರಿತು ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕವಾಗಿ ಅರಿವು ಮೂಡಿಸಿದರು.ಮತಗಟ್ಟೆಯ ಅಧಿಕಾರಿಗಳು ಪಿಆರ್‌ಒ ಮತಗಟ್ಟೆ ಸಹಾಯಕರಾಗಿ ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾಗಿ ದ್ವಿತೀಯ ವರ್ಷದ ಸಾಬು ಸೋಲಂಕರ ಹಾಗೂ ಆಯಾ ವರ್ಗದ ಮಹಿಳಾ ಮತ್ತು ಪುರುಷ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಪ್ರಾಚಾರ್ಯ ಕೆ.ಪಿ.ಆರ್. ಸದಾಶಿವ ಮಾತನಾಡಿ, ಸೋಲು ಮತ್ತು ಗೆಲವು ಮುಖ್ಯವಲ್ಲ, ಸ್ಪರ್ಧಿಸುವುದು ಮುಖ್ಯ. ಕಾಲೇಜಿನ ಎಲ್ಲ ಕೆಲಸಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಉತ್ಸಾಹದಿಂದ ಭಾಗಿಯಾಗಬೇಕು ಎಂದು ತಿಳಿಸಿದರು. ಕಾಲೇಜಿನ ಉಪನ್ಯಾಸಕರಾದ ಡಿ.ಎಂ.ಪಾಟೀಲ, ಸಿ.ಬಿ.ಪಾಟೀಲ, ಎಂ.ಕೆ.ತುಂಗಳ, ಎಲ್.ಕೆ.ಪಾಟೀಲ, ಎಸ್.ಡಿ ಕರ್ಕಿ, ಆರ್.ಪಿ.ಕಟ್ಟಿಮನಿ, ಎಂ.ಎಂ.ಗಡಾಲೋಟಿ, ನಿರಂಜನ ಕೋರೆ, ಎಸ್.ಎಂ.ವಾಗಮೋರೆ, ಎಸ್.ಬಿ. ಜೋತೆಖಾನ ಎಲ್ಲ ಉಪನ್ಯಾಸಕ ವರ್ಗ ಹಾಗೂ ಕಾಲೇಜ ಕಚೇರಿ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.