ಕನ್ನಡ ರಾಜ್ಯೋತ್ಸವ ಆಚರಿಸದ ಕಾಲೇಜು, ಕಸಬಾ ಸೊಸೈಟಿ; ಸರ್ಕಾರಿ ಆದೇಶ ಉಲ್ಲಂಘನೆ

| Published : Nov 02 2024, 01:30 AM IST

ಕನ್ನಡ ರಾಜ್ಯೋತ್ಸವ ಆಚರಿಸದ ಕಾಲೇಜು, ಕಸಬಾ ಸೊಸೈಟಿ; ಸರ್ಕಾರಿ ಆದೇಶ ಉಲ್ಲಂಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಲಾಗಿದೆ. ಅದೇ ರೀತಿ ಹಣ ದುರ್ಬಳಕೆ ಆರೋಪ ಹೊತ್ತಿರುವ ಪಟ್ಟಣ ಕಸಬಾ ಸೊಸೈಟಿಯಲ್ಲೂ ಸಹ ಕನ್ನಡ ಧ್ವಜಾರೋಹಣ ನೆರವೇರಿಸದೆ ಅವಮಾನ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸದೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಲಾಗಿದೆ.

ಅದೇ ರೀತಿ ಹಣ ದುರ್ಬಳಕೆ ಆರೋಪ ಹೊತ್ತಿರುವ ಪಟ್ಟಣ ಕಸಬಾ ಸೊಸೈಟಿಯಲ್ಲೂ ಸಹ ಕನ್ನಡ ಧ್ವಜಾರೋಹಣ ನೆರವೇರಿಸದೆ ಅವಮಾನ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಾಡ ಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಶಾಲಾ-ಕಾಲೇಜುಗಳಲ್ಲಿ ಆಚರಣೆ ಮಾಡಬೇಕೆಂಬ ಸರ್ಕಾರದ ಆದೇಶವಿದೆ. ಆದರೆ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ದಿನದೊಂದು ಧ್ವಜಾರೋಹಣ ನೆರವೇರಿಸದೆ ಸರ್ಕಾರಿ ಆದೇಶವನ್ನು ಉಲ್ಲಂಘಿಸಲಾಗಿದೆ.

ಧ್ವಜಾರೋಹಣ ನೆರವೇರಿಸುವುದಿರಲಿ. ಕನಿಷ್ಠ ಪಕ್ಷ ಕಾಲೇಜಿಗೆ ಆಗಮಿಸಿ ಕನ್ನಡಾಂಭೆ ಭಾವಚಿತ್ರಕ್ಕೆ ಪೂಜೆಯನ್ನು ಸಹಸಲ್ಲಿಸಿಲ್ಲ ಎಂದು ಹಿರಿಯ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.

ಅದೇರೀತಿ ಹಣ ದುರ್ಬಳಕೆ ಆರೋಪ ಎದುರಿಸುತ್ತಿರುವ ಪಟ್ಟಣದ ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲೂ ಸಹ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಲ್ಲ. ಸಂಘದ ಸಂಘದ ಆವರಣದಲ್ಲಿರುವ ಧ್ವಜಾಕಂಬದಲ್ಲೂ ಸಹ ಧ್ವಜಾರೋಹಣ ನೆರವೇರಿಸದೆ ಅವಮಾನ ಮಾಡಿದ್ದಾರೆ.

ಪಟ್ಟಣದ ಸೆಸ್ಕ್ ಕಚೇರಿಯಲ್ಲಿ ಯಾವುದೇ ಮೇಲಾಧಿಕಾರಿಗಳು ಇಲ್ಲದೆ ಕೇವಲ ಕಚೇರಿ ಕೆಲವು ಸಿಬ್ಬಂದಿ, ವಾಚ್‌ಮನ್‌ಗಳು ಸೇರಿ ಕಚೇರಿ ಆಚರಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಮಟ್ಟದ ಅಧಿಕಾರಿ ಧ್ವಜಾರೋಹಣದಲ್ಲಿ ಭಾಗವಹಿಸಿದೆ ನಾಡಹಬ್ಬಕ್ಕೆ ಅವಮಾನ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.