ಸಾರಾಂಶ
ಸವಣೂರು: ಬಿ.ಕಾಂ. ನಂತರದಲ್ಲಿ ವಿಫುಲವಾದ ಅವಕಾಶಗಳಿವೆ. ಆದರೆ, ಇಂದು ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿಲ್ಲ ಎಂದು ದಾವಣಗೆರೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಮಂಜುನಾಥ ಜೆ.ಎಂ. ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀಮತಿ ಲಿಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಪದವಿ ಕಾಲೇಜಿನ ಸಭಾ ಭವನದಲ್ಲಿ ಐಕ್ಯೂಎಸಿ ಹಾಗೂ ವಾಣಿಜ್ಯ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಬಿ.ಎ. ಮತ್ತು ಬಿಕಾಂ ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ನಾವಿಂದು ಕೇವಲ ಆದಾಯ ತೆರಿಗೆ ಎಂದರೇನು? ೫ ಅಂಶಗಳ ಆದಾಯದ ಕುರಿತು ಮಾತ್ರ ಬೋಧಿಸುತ್ತಿದ್ದೇವೆ ಹೊರತು ಅದರಾಚೆಗೆ ವಿದ್ಯಾರ್ಥಿಗಳಿಗೆ ನಾವೇನನ್ನು ಕಲಿಸುತ್ತಿಲ್ಲ. ಈ ಹಿಂದೆ ನಾವು ಆದಾಯ ತೆರಿಗೆ ಪಾವತಿಸಲು ಲೆಕ್ಕ ಪರಿಶೋಧಕರಲ್ಲಿ ಅಥವಾ ಚಾರ್ಟೆಡ್ ಅಕೌಂಟಟ್ ಬಳಿ ತೆರಳುತ್ತಿದ್ದೇವು. ಬದಲಾಗಿ ನಾವೆ ಸ್ವತಃ ಆದಾಯ ತೆರಿಗೆಯನ್ನು ಯಾರ ಸಹಾಯಗಳಿಲ್ಲದೆ. ಆದಾಯ ತೆರಿಗೆಯನ್ನು ಹೇಗೆ ಫೈಲ್ ಮಾಡಬೇಕು ಎಂಬುದನ್ನು ತಿಳಿಸುತ್ತಾ, ಇಂದು ನಮ್ಮ ಸರ್ಕಾರಗಳು ನಡೆಯುತ್ತಿರುವುದೇ ನಮ್ಮ ಆದಾಯ ತೆರಿಗೆಯಿಂದಲೇ ನಾವು ಅದರ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಪ್ರವೀಣ ಮಹಾಬಲೇಶ್ವರ ಆನಂದಕಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮುಖ್ಯವಾಗಿ ನಿಮ್ಮ ತಂದೆ ತಾಯಿಗಳಿಗೆ ಉತ್ತಮ ಮಕ್ಕಳಾಗಿ, ನಿಮಗೆ ಯಾವುದೇ ಸಂದಿಗ್ಧತೆ ಎದುರಾದರೂ ಅವರೊಂದಿಗೆ ಹಂಚಿಕೊಂಡಲ್ಲಿ ನಿಮ್ಮಲ್ಲಿನ ಆತ್ಮಸ್ಥೈರ್ಯ ಹೆಚ್ಚುತ್ತದೆ. ಕಾಲೇಜು ಸಮಯದಲ್ಲಿ ಸಮಪಾಲನೆ ಅನುಸರಿಸಿ, ವಿದ್ಯಾರ್ಥಿಗಳು ಮುಂಬರುವ ಮೂರು ವರ್ಷಗಳಲ್ಲಿ ಪ್ರಾಧ್ಯಾಪಕರ ಬೋಧನೆಗೆ ಸ್ಪಂದಿಸಿ ನಿಮ್ಮ ಭವಿಷ್ಯ ರೂಪಿಸಿಕೊಂಡು. ನಿಮ್ಮ ಪಾಲಕರ ಹಾಗೂ ಕಾಲೇಜಿನ ಗರಿಮೆ ಹೆಚ್ಚಿಸಿ ಎಂದು ಕರೆ ನೀಡಿದರು.ಪ್ರಾಧ್ಯಾಪಕರಾದ ಡಾ. ಎಂ.ಎಚ್ ಹೆಬ್ಬಾಳ, ಡಾ. ರಘು ಎಸ್, ಐಕ್ಯೂಎಸಿ ಸಂಯೋಜಕರಾದ ಡಾ. ವಿಶ್ವನಾಥ ಯತ್ನಳ್ಳಿ, ಎಫ್.ಬಿ. ನಾಯ್ಕರ್, ದಿವ್ಯಶ್ರೀ ಬಿ.ಎನ್., ಗಂಗಾ ನಾಯ್ಕ್ ಎಲ್., ಅಜ್ಯಯ್ಯ ಹಿರೇಮಠ, ಮಹೇಂದ್ರ ದೊಡ್ಡಮನಿ, ಕಾರ್ತಿಕ ಪಾಟೀಲ, ಅನಿಲಕುಮಾರ ಹಾಗೂ ಇತರರು ಪಾಲ್ಗೊಂಡಿದ್ದರು.
ಸಿದ್ಧು ಕವಟಗಿಮಠ, ಪ್ರಿಯದರ್ಶಿನಿ ಪಾಟೀಲ ಹಾಗೂ ರುದ್ರಪ್ಪ ಕೆ.ಜಿ. ಕಾರ್ಯಕ್ರಮ ನಿರ್ವಹಿಸಿದರು.