ಸಾರಾಂಶ
ದೋಟಿಹಾಳ,ಕೇಸೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಯುವಕರು, ಯುವತಿಯರು ಮಹಿಳೆಯರು ಬಣ್ಣದಲೋಕದ ಆಟದಲ್ಲಿ ಮಿಂದೆದ್ದರು
ಕುಷ್ಟಗಿ: ಯುಗಾದಿ ಪಾಡ್ಯದ ಮರುದಿನ ಸೋಮವಾರದಂದು ತಾಲೂಕಿನ ದೋಟಿಹಾಳ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯುವಕರು, ಮಹಿಳೆಯರು ಬಣ್ಣದ ಓಕುಳಿ ಆಟ ಆಡಿ ಪರಸ್ಪರ ಬಣ್ಣ ಹಚ್ಚಿಕೊಂಡು ಯುಗಾದಿಯ ಹೊಸವರ್ಷವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ದೋಟಿಹಾಳ,ಕೇಸೂರು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಯುವಕರು, ಯುವತಿಯರು ಮಹಿಳೆಯರು ಬಣ್ಣದಲೋಕದ ಆಟದಲ್ಲಿ ಮಿಂದೆದ್ದರು. ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು. ಜನರು ಓಕುಳಿಯಾಟವಾಡಿ ಸಂಭ್ರಮಿಸಿದರು.ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆಯಿಂದ ಯುವಕರು, ಮಕ್ಕಳು ತಂಡೋಪತಂಡವಾಗಿ ಪರಸ್ಪರ ನಾನಾ ತರಹದ ಬಣ್ಣಗಳನ್ನು ಎರಚಿದರು. ಬೈಕ್‌ಗಳಲ್ಲಿ ತಿರುಗುತ್ತಾ ತಮ್ಮ ಪರಿಚಯಸ್ಥರಿಗೆ ಬಣ್ಣ ಹಾಕಿದರು. ಗುಲಾಲ್ ಜತೆ ಕೆಲವರು ಆಯಿಲ್ ಪೇಂಟ್ ಬಳಕೆ ಮಾಡಿದ್ದಲ್ಲದೆ ಕೆಲ ಯುವಕರು ಮೊಟ್ಟೆ ಕೂಡ ಒಡೆದರು. ನಾನಾ ವೇಷಭೂಷಣ ತೊಟ್ಟು ಸಂಭ್ರಮದಿಂದ ಮಧ್ಯಾಹ್ನದವರೆಗೆ ಬಣ್ಣದಾಟ ಆಡಿದರು. ಕೆಲವರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆಗಟ್ಟಿ ಬಣ್ಣ ಎರಚುತ್ತಿದ್ದರು. ಕೆಲವರು ಹಣ ನೀಡಿ ಬಣ್ಣದಿಂದ ತಪ್ಪಿಸಿಕೊಂಡು ಹೋಗುತ್ತಿರುವುದು ಕಂಡು ಬಂತು.