ಚಾಮರಾಜನಗರದಲ್ಲಿ ನಟ ಪುನೀತ್ ಪುಣ್ಯಸ್ಮರಣೆ
KannadaprabhaNewsNetwork | Published : Oct 31 2023, 01:16 AM IST
ಚಾಮರಾಜನಗರದಲ್ಲಿ ನಟ ಪುನೀತ್ ಪುಣ್ಯಸ್ಮರಣೆ
ಸಾರಾಂಶ
ಕರುನಾಡಿನ ಅಸಂಖ್ಯಾತ ಹೃದಯಗಳ ಸಾಮ್ರಾಟ, ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ ಎರಡು ವರ್ಷದ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಪ್ಪು ಸವಿ ನೆನಪಿನಲ್ಲಿ ಪುಣ್ಯಸ್ಮರಣೆ ಮಾಡಲಾಯಿತು
ಕನ್ನಡಪ್ರಭ ವಾರ್ತೆ ಚಾಮರಾಜನಗರ ಕರುನಾಡಿನ ಅಸಂಖ್ಯಾತ ಹೃದಯಗಳ ಸಾಮ್ರಾಟ, ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ ಎರಡು ವರ್ಷದ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಪ್ಪು ಸವಿ ನೆನಪಿನಲ್ಲಿ ಪುಣ್ಯಸ್ಮರಣೆ ಮಾಡಲಾಯಿತು. ಅದರಂತೆ ಚಾಮರಾಜನಗರದ ಶ್ರೀ ವೆಂಕಟೇಶ್ವರ ಹಿಂದೂ ಮಿಲಿಟರಿ ಹೋಟಲ್, ವೆಂಕಟೇಶ್ವರ ಫ್ಯಾಷನ್ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 2 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಲಾಯಿತು. ಪುಷ್ಷಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಹೊಟೇಲ್ ಮಾಲೀಕ ಶ್ರೀನಿವಾಸ ಮಾತನಾಡಿ, ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯ ಅಪ್ಪು ಡಾಕ್ಟರ್ ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಅವರಿಗೆ ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಕೈಗೊಂಡ ಜನಸೇವೆಯನ್ನು ವರ್ಣಿಸಲು ಪದಗಳೇ ಸಾಲದು. ನಮ್ಮ ಪ್ರೀತಿಯ ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ಕೋರಿದರು. ಕಾರ್ಯಕ್ರಮದಲ್ಲಿ ಲಕ್ಷ್ಮೀ, ವೆಂಕಟೇಶ್, ಬಾಲಾಜಿ, ಚೇತನ್, ಉಮೇಶ್, ಮಹೇಶ್ ಇತರರು ಹಾಜರಿದ್ದರು. ಚಾಮರಾಜನಗರದಲ್ಲಿ ಅಪ್ಪು 2ನೇ ವರ್ಷದ ಪುಣ್ಯಸ್ಮರಣೆ ಮಾಡಲಾಯಿತು.