ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಬಸವೇಶ್ವರ ದೇವಸ್ಥಾನದ ಬಸವತೀರ್ಥ ಪಕ್ಕದಲ್ಲಿರುವ, ಬಸವೇಶ್ವರ ದೇವಾಲಯ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿರುವ ಲಿಂ.ಮಲ್ಲಪ್ಪ ಶರಣರ ದೇವಸ್ಥಾನದಲ್ಲಿ ಗುರುವಾರ ಮಲ್ಲಪ್ಪ ಶರಣರ ೨೦ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಪವಾಡ ಬಸವೇಶ್ವರರ 3ನೇ ಅವತಾರ ಪುರುಷರಾಗಿದ್ದ ಲಿಂ.ಮಲ್ಲಪ್ಪ ಶರಣರ ಪುಣ್ಯಸ್ಮರಣೋತ್ಸವ ಆಚರಿಸುವ ಮೂಲಕ ಶರಣರಿಗೆ ಶ್ರದ್ಧಾ-ಭಕ್ತಿ ಭಾವದೊಂದಿಗೆ ಭಕ್ತಿ ನಮನ ಸಮರ್ಪಿಸಿದರು.ಬೆಳಗ್ಗೆ ಇಂಗಳೇಶ್ವರದ ಬೃಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕರ್ತೃ ಗದ್ದುಗೆಗೆ, ಮಲ್ಲಪ್ಪ ಶರಣರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿತು. ಪ್ರತಿ ವರ್ಷ ಮಲ್ಲಪ್ಪ ಶರಣರ ಪುಣ್ಯಸ್ಮರಣೋತ್ಸವದ ಅಂಗವಾಗಿ ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಅಪಾರ ಸಂಖ್ಯೆ ಭಕ್ತರು ಆಗಮಿಸುತ್ತಾರೆ. ಪೂಜೆ ನೆರವೇರಿದ ನಂತರ ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರಿಗೆ ಸುರಮಾ ಪ್ಯಾಕೆಟ್ ಮಾಡಿದ ಪ್ರಸಾದವನ್ನು ನೀಡಲಾಯಿತು. ಪುಣ್ಯಸ್ಮರಣೋತ್ಸವದಲ್ಲಿ ಅಶೋಕ ಕಲ್ಲೂರದೇಸಾಯಿ, ಡಾ.ಶಂಕರಗೌಡ ಪಾಟೀಲ, ಬಾಬುಗೌಡ ಮುದ್ದೇಬಿಹಾಳ, ರಾಜುಗೌಡ ಪಾಟೀಲ, ಈರಪ್ಪ ಪವಾಡಶೆಟ್ಟಿ, ಭೀಮನೌಡ ಅಂಗಡಗೇರಿ, ಬಸನಗೌಡ ಬಳವಾಟ, ಈರಣ್ಣ ಬಿದ್ನಾಳ, ನಾಗಪ್ಪ ಚಿಕ್ಕೊಂಡ, ಈರಪ್ಪ ಗೊಡಕಾರ, ಮಲ್ಲಪ್ಪ ಗುಂಡಿ, ಎಸ್.ಎಸ್.ಹಳ್ಳಿ, ನಿಂಗು ಕುಂಬಾರ, ಉಜ್ವಲಾ ಪಾಟೀಲ, ಉಷಾ ಪಾಟೀಲ, ವನಿತಾ ಪಾಟೀಲ, ಸೃಷ್ಟಿ ಪಾಟೀಲ, ಭುವನೇಶ್ವರಿ ಪಾಟೀಲ, ಬಸರಕೋಡ, ಕೊಡೆಕಲ್ಲ, ಅಂಗಡಗೇರಿ, ಮುದ್ದೇಬಿಹಾಳ, ನಾರಾಯಣಪುರ, ಗೋನಾಳ, ರಾಯಚೂರು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.