ಸಾರಾಂಶ
ಬಾದಾಮಿ; ಶ್ರೀ ಮಧ್ವನವಮಿ ನಿಮಿತ್ತ ಬಾದಾಮಿ ನಗರದಲ್ಲಿ ಶ್ರೀ ಮಧ್ವಾಚಾರ್ಯರ ಭಾವಚಿತ್ರದ ಪಾಲಕಿ ಮೆರವಣಿಗೆ ಜೊತೆಗೆ ವಿಜಯೀಂದ್ರಾಚಾರ್ಯ ಇನಾಮದಾರ ನೇತೃತ್ವದಲ್ಲಿ ಕುಟುಂಬದವರು ಭಾನುವಾರ ಬೆಟ್ಟದ ಮೇಲಿರುವ ಶ್ರೀ ಬತ್ತೇರೇಶನ (ಹನುಮಂತ) ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಬಾದಾಮಿ
ಶ್ರೀ ಮಧ್ವನವಮಿ ನಿಮಿತ್ತ ಬಾದಾಮಿ ನಗರದಲ್ಲಿ ಶ್ರೀಮಧ್ವಾಚಾರ್ಯರ ಭಾವಚಿತ್ರದ ಪಾಲಕಿ ಮೆರವಣಿಗೆ ಜೊತೆಗೆ ವಿಜಯೀಂದ್ರಾಚಾರ್ಯ ಇನಾಮದಾರ ನೇತೃತ್ವದಲ್ಲಿ ಕುಟುಂಬದವರು ಭಾನುವಾರ ಬೆಟ್ಟದ ಮೇಲಿರುವ ಶ್ರೀ ಬತ್ತೇರೇಶನ (ಹನುಮಂತ) ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.ಬೆಳಗ್ಗೆ ಹನುಮಂತ ದೇವರಿಗೆ ಅಭ್ಯಂಗಸ್ನಾನ, ಪಂಚಾಮೃತ ಅಭಿಷೇಕ ಸೇರಿದಂತೆ ಫಲ-ಪುಷ್ಪ, ಮಂತ್ರ ಪುಷ್ಪಗಳ ಪೂಜೆ ಹಾಗೂ ಮಧ್ಯಾಹ್ನದ ಹೊತ್ತಿಗೆ ನೂರಾರು ಜನ ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಣೆ, ಡಾ.ವಿ.ವೈ. ಭಾಗವತ ಅವರಿಂದ ಪುರಾಣ ಮಂಗಲೋತ್ಸವ ಜರುಗಿತು.
ಸ್ವಯಂ ಸೇವಕರಾಗಿ ರಂಗನಾಥ, ಜಯತೀರ್ಥ, ಪ್ರಲ್ಹಾದ, ಮುರಳೀಧರ, ಪವನ ಕುಲಕರ್ಣಿ, ರವಿ ದೇಸಾಯಿ, ಮನೋಹರ, ಗುರುರಾಜ, ಪುನೀತ, ಪ್ರಸನ್ನ, ರಜನಿ, ಸತೀಶ, ಸುಧನ್ವ, ಸುಜಯ, ವಾದಿರಾಜ, ಆದಿತ್ಯ, ಶ್ರೀನಿಧಿ, ಶ್ರೀಹರಿ ಸೇವೆ ಸಲ್ಲಿಸಿದರು. ನೂರಾರು ಜನ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.