ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಎಲ್ಲರೂ ಸಿದ್ಧಗಂಗೆಯ ಡಾ,. ಶಿವಕುಮಾರ ಸ್ವಾಮಿಗಳ ಆದರ್ಶ ಪಾಲಿಸಬೇಕು ಎಂದು ಬೇಬಿ ಬೆಟ್ಟ ಶ್ರೀ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಕರೆ ನೀಡಿದರು.ಅಖಿಲ ಕರ್ನಾಟಕ ಡಾ.ಶಿವಕುಮಾರ ಸ್ವಾಮಿಗಳ ಭಕ್ತವೃಂದವು ನಗರದ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಶಿವಕುಮಾರ ಸ್ವಾಮಿಗಳ ಆರನೇ ವರ್ಷದ ಪುಣ್ಯಸ್ಮರಣೆ ಹಾಗೂ ದಾಸೋಹ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಗಳು ಸತತ 86 ವರ್ಷಗಳ ಕಾಲ ಅಕ್ಷರ, ಅನ್ನ, ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು. ಸಹಸ್ರಾರು ಮಕ್ಕಳಿಗೆ ಉಚಿತವಾಗಿ ಊಟ, ವಸತಿ ನೀಡಿ. ವಿದ್ಯಾರ್ಜನೆಗೆ ಕಾರಣಕರ್ತರಾದವರು ಎಂದು ಅವರು ಸ್ಮರಿಸಿದರು.ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಹುಲ್ಲಿನಬೀದಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಹಲಸಹಳ್ಳಿ ಕಲ್ಯಾಣ ಬಸವೇಶ್ವರ ಮಠದ ಶ್ರೀ ಓಂಕಾರೇಶ್ವರ ಸ್ವಾಮೀಜಿ, ಸಾನ್ನಿಧ್ಯ ವಹಿಸಿದ್ದರು., ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು. ಹೂಟಗಳ್ಳಿ ಶ್ರೀ ಅನಂತೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ನಾಗರಾಜ ವಿ. ಬೈರಿ ಅಧ್ಯಕ್ಷತೆ ವಹಿಸಿದ್ದರು.
ಬಸವ ಮಾರ್ಗ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಎಸ್. ಬಸವರಾಜು, ಮಂಡ್ಯ ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ. ಶಿವಕುಮಾರ್, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ್, ಏಷಿಯನ್‌ಇಂಟರ್‌ನ್ಯಾಷನಲ್ ಅಕಾಡೆಮಿ ಮಾಲೀಕ ಪಿ. ನಂಬಿರಾಜ್, ಕರಾಟೆ ಇಂಟರ್ ಏಷಿಯನ್ ನ್ಯಾಷನಲ್ ಕಲ್ಚರ್ ಯೂನಿವರ್ಸಿಟಿಯ ಎ.ಪಿ. ಶ್ರೀನಾಥ್, ಭದ್ರಾವತಿ ಜಿಪಂ ಮಾಜಿ ಸದಸ್ಯ ಮಣಿ ಶೇಖರ್, ಅಪೇಕ್ಷ ನೃತ್ಯ ಕಲಾವೃಂದದ ಅಧ್ಯಕ್ಷೆ, ಭಾರತಿ ಗೋವಿಂದಸ್ವಾಮಿ, ಮೈಸೂರಿನ ಅಲಯನ್ಸ್ ಕ್ಲಬ್ ಪಿಆರ್‌ಒ ಎನ್. ಬೆಟ್ಟೇಗೌಡ, ಜ್ಞಾನ ದಾಸೋಹ ಟ್ರಸ್ಟ್ ಅಧ್ಯಕ್ಷ ಸಿ.ಎನ್. ಸದಾಶಿವ, ಕೆಂಗೇರಿಯ ಸಮಾಜ ಸೇವಕ ಪಾಂಡುರಂಗ ವಿಶೇಷ ಆಹ್ವಾನಿತರಾಗಿದ್ದರು.ಭಕ್ತವೃಂದ ಸಮಿತಿಯ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಗೌರವಾಧ್ಯಕ್ಷ ನ.ಗಂಗಾಧರಪ್ಪ, ಉಪಾಧ್ಯಕ್ಷ ಶಿವಕುಮಾರ್ ಪಾಟೀಲ್ತೇಗಂಪೂರ, ಪ್ರಧಾನ ಸಂಘಟಕ ಮೆಣಸಿಗೆರೆ ಶಿವಲಿಂಗಪ್ಪ, ಸಂಚಾಲಕ ಮಾರುತಿ ಎಸ್. ಬೀದರ್, ಮಹಿಳಾಧ್ಯಕ್ಷೆ ಸ್ವಾತಿ ಬಸಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಕೆ. ರಾಮಸ್ವಾಮಿ, ಅಧ್ಯಕ್ಷ ಆರ್.ಎಸ್. ರಾಜು ಇದ್ದರು. ಜಾನಪದ ವಿವಿ ಸಿಂಡಿಕೇಟ್ಮಾಜಿ ಸದಸ್ಯ ಡಾ.ಕೆ. ವಸಂತಕುಮಾರ್ಸ್ವಾಗತಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಪ್ರಜಾಕಿರಣ ಚಾರಿಟಬಲ್‌ಟ್ರಸ್ಟ್‌ದೇವರ ಮಕ್ಕಳ ವತಿಯಿಂದ ಸಿದ್ಧಗಂಗಾ ಶ್ರೀಗಳ ಜೀವನ ಚರಿತ್ರೆ ಕಿರು ನಾಟಕ ಪ್ರದರ್ಶಿಸಲಾಯಿತು. ಅಪೇಕ್ಷ ನೃತ್ಯ ಕಲಾತಂಡದಿಂದ ಭಕ್ತಿ ಸಂಗಮ, ಭಕ್ತಿಗೀತೆ, ಹಾಗೂ ಭರತನಾಟ್ಯ ಪ್ರದರ್ಶನ ನಡೆಯಿತು.
-- ಬಾಕ್ಸ್---- ಪ್ರಶಸ್ತಿ ಪ್ರದಾನ --ಬೆಂಗಳೂರಿನ ಸಮಾಜ ಸೇವಕ ಜಿ. ನಾಗೇಶ ರಾವ್, ಮೈಸೂರಿನ ನಿಶಾ ಮುಳಗುಂದ, ಪಾಂಡವಪುರ ಜ್ಞಾನಬಂಧು ವಿದ್ಯಾಸಂಸ್ಥೆಯ ಸಂಸ್ಥಾಪಕ ಎಂ.ಆರ್. ಕುಮಾರಸ್ವಾಮಿ, ಹಾಸನದ ಕಾರ್ಯಪಾಲಕ ಎಂಜಿನಿಯರ್ಎಚ್.ವಿ. ನಂಜೇಶಯ್ಯ,., ಭದ್ರಾವತಿ ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಂಸ್ಥಾಪಕ ಶಿವಕುಮಾರ್ ಅವರಿಗೆ ಡಾ.ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಲ್ಲದೇ ಸಾಧಕರಿಗೆ ಬಸವಶ್ರೀ, ಶಿಕ್ಷಣ ರತ್ನ, ಸಾಹಿತ್ಯ ರತ್ನ, ಧಾರ್ಮಿಕ ರತ್ನ, ಸಮಾಜ ಸೇವಾ ರತ್ನ, ಕಲಾ ಸೇವಾ ರತ್ನ, ಕಾಯಕ ರತ್ನ, ಯೋಗ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.