ಜಂಟಿ ಅಧಿವೇಶನನ್ನು ಉದ್ದೇಶಿಸಿ ರಾಜ್ಯಪಾಲರು ಆರಂಭ ಹಾಗೂ ಕೊನೆಯ ಸಾಲು ಓದಿದರೆ ಇಡೀ ಭಾಷಣವನ್ನೇ ಓದಿದಂತೆ. ಇದು ಸಂವಿಧಾನಾತ್ಮಕವಾಗಿ ಸರಿಯಾಗಿಯೇ ಇದೆ. ಆದರೆ ಸಾಂವಿಧಾನಿಕ ಹುದ್ದೆಯ ರಾಜ್ಯಪಾಲರಿಗೆ ಅಗೌರವ ತೋರಿಸಿರುವ ಪರಿಷತ್‌ ಸದಸ್ಯರಾದ ಬಿ.ಕೆ.ಹರಿಪ್ರಸಾದ್‌ ಮತ್ತು ಎಸ್‌. ರವಿ ವಿರುದ್ಧ ಸ್ಪೀಕರ್‌ ಅಮಾನತಿನ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌

ಮಂಗಳೂರು: ಜಂಟಿ ಅಧಿವೇಶನನ್ನು ಉದ್ದೇಶಿಸಿ ರಾಜ್ಯಪಾಲರು ಆರಂಭ ಹಾಗೂ ಕೊನೆಯ ಸಾಲು ಓದಿದರೆ ಇಡೀ ಭಾಷಣವನ್ನೇ ಓದಿದಂತೆ. ಇದು ಸಂವಿಧಾನಾತ್ಮಕವಾಗಿ ಸರಿಯಾಗಿಯೇ ಇದೆ. ಆದರೆ ಸಾಂವಿಧಾನಿಕ ಹುದ್ದೆಯ ರಾಜ್ಯಪಾಲರಿಗೆ ಅಗೌರವ ತೋರಿಸಿರುವ ಪರಿಷತ್‌ ಸದಸ್ಯರಾದ ಬಿ.ಕೆ.ಹರಿಪ್ರಸಾದ್‌ ಮತ್ತು ಎಸ್‌. ರವಿ ವಿರುದ್ಧ ಸ್ಪೀಕರ್‌ ಅಮಾನತಿನ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ ಆಗ್ರಹಿಸಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸದನಕ್ಕೆ ಆಗಮಿಸಿ ತೆರಳುವ ವರೆಗೆ ಅವರಿಗೆ ಸಾಂವಿಧಾನಿಕ ಗೌರವ ನೀಡಬೇಕಾದ್ದು ಶಾಸಕರ ಆದ್ಯ ಕರ್ತವ್ಯ. ಅದರ ಬದಲು ಹಿರಿಯ ಅನುಭವಿ ಸದಸ್ಯರಾದ ಬಿ.ಕೆ.ಹರಿಪ್ರಸಾದ್‌ ಮತ್ತು ರವಿ ಅವರು ರಾಜ್ಯಪಾಲರನ್ನೇ ತಡೆಯಲು ಮುಂದಾಗಿ ಹೈಡ್ರಾಮಾ ಸೃಷ್ಟಿಸಿರುವುದು ಸರಿಯಲ್ಲ ಎಂದರು.

ಮರು ಪರಿಶೀಲನೆ ತಿರಸ್ಕರಿಸಿ:

ಬಿ.ಕೆ.ಹರಿಪ್ರಸಾದ್‌ ಮತ್ತು ರವಿ ಅವರ ವರ್ತನೆ ವಿರುದ್ಧ ಸ್ಪೀಕರ್‌ಗೆ ವಿಪಕ್ಷ ಬಿಜೆಪಿ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಸದನದ ನೀತಿ ನಿರೂಪಣೆ ಸಮಿತಿಗೆ ದೂರನ್ನು ಸ್ಪೀಕರ್‌ ವರ್ಗಾಯಿಸಿದ್ದಾರೆ. ಈಗ ಆಡಳಿತ ಪಕ್ಷದ ಸಚೇತಕರು ಈ ಬಗ್ಗೆ ಮರು ಪರಿಶೀಲಿಸುವಂತೆ ಸ್ಪೀಕರ್‌ ಅವರನ್ನು ಕೋರಿದ್ದು, ಮಂಗಳವಾರ ತೀರ್ಮಾನವನ್ನು ತಿಳಿಸುವುದಾಗಿ ಸ್ಪೀಕರ್‌ ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನೀತಿ ನಿರೂಪಣೆ ಸಮಿತಿಗೆ ನೀಡಿರುವುದನ್ನು ಮರು ಪರಿಶೀಲಿಸಿ ವಾಪಸ್‌ ಪಡೆಯಲು ಸ್ಪೀಕರ್‌ ಮುಂದಾಗಬಾರದು ಎಂದರು.ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಪುತ್ತೂರು, ಮುಖಂಡರಾದ ರಾಜಗೋಪಾಲ ರೈ, ಸುಜಿತ್‌ ಪ್ರತಾಪ್‌, ರವೀಂದ್ರ ಶೆಟ್ಟಿ ಉಳಿದೊಟ್ಟು, ಶೋಭೇಂದ್ರ ಸಸಿಹಿತ್ಲು, ವಸಂತ ಪೂಜಾರಿ ಇದ್ದರು.