ಸಾರಾಂಶ
ಕಡೂರು, ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳಿಗೆ ಹಣಕಾಸು ನೀಡಲು ಆಯೋಗ ಸಿದ್ಧವಿದೆ ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಹೇಳಿದರು.
ಕಡೂರು ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಐದನೇ ಹಣಕಾಸು ಆಯೋಗದ ಸಭೆ
ಕನ್ನಡಪ್ರಭ ವಾರ್ತೆ, ಕಡೂರುನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳಿಗೆ ಹಣಕಾಸು ನೀಡಲು ಆಯೋಗ ಸಿದ್ಧವಿದೆ ಎಂದು ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಹೇಳಿದರು.
ಕಡೂರು ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಐದನೇ ಹಣಕಾಸು ಆಯೋಗದ ಸಭೆಯಲ್ಲಿ ಮಾತನಾಡಿದರು. ಪಟ್ಟಣಕ್ಕೆ ಸಧ್ಯ ಕುಡಿಯುವ ನೀರಿಗೆ ಭದ್ರಾ ನೀರು ಮತ್ತು ಕೊಳವೆ ಭಾವಿಯನ್ನು ಅವಲಂಬಿಸಲಾಗಿದೆ. ಅದಕ್ಕಾಗಿ ಪರ್ಯಾಯ ವ್ಯವಸ್ಥೆಯೂ ಇರುವುದು ಅಗತ್ಯ ಅದಕ್ಕಾಗಿ ಕೂಡಲೇ ಪರ್ಯಾಯ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಸೂಚಿಸಿದರು.ಯಾವುದೇ ತೊಂದರೆಯಿದ್ದರೂ ಅದನ್ನು ಪರಿಹರಿಸಿ ಸಾರ್ವಜನಿಕರಿಗೆ ಅತ್ಯುತ್ತಮ ಸೌಲಭ್ಯ ನೀಡುವುದು ರಾಜ್ಯ ಸರ್ಕಾರದ ಗುರಿಯಾಗಿದೆ. ಆ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಪೂರ್ಣ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕಾರ್ಯವನ್ನು ಆಯೋಗ ಮಾಡುತ್ತಿದೆ. ಅಗತ್ಯ ಸೌಲಭ್ಯಗಳನ್ನು ಸರ್ಕಾರ ನೀಡುವುದ ರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಮಧಗದ ಕೆರೆಯಿಂದ ವೇದಾ ಪಂಪ್ ಹೌಸ್ ಗೆ ನೀರು ಹರಿಸಿ ಅಲ್ಲಿಂದ ಕಡೂರು ಪಟ್ಟಣಕ್ಕೆ ನೀರನ್ನು ಸಮರ್ಪಕವಾಗಿ ನೀಡಬಹುದು. ಈ ಕುರಿತು ಯೋಜನಾ ವರದಿ ತಯಾರಿಸಿ ಕಳುಹಿಸುತ್ತೇವೆ. ಇಡೀ ಪಟ್ಟಣಕ್ಕೆ ರಾಜ ಕಾಲುವೆ, ಹೆಚ್ಚಿನ ಪೌರ ಕಾರ್ಮಿಕರ ಅಗತ್ಯವಿದೆ. ಅದರ ಬಗ್ಗೆಯೂ ಗಮನ ಹರಿಸ ಬೇಕೆಂದು ಕೋರಿ ಮನವಿ ಪತ್ರವನ್ನು ನಾರಾಯಣಸ್ವಾಮಿ ಅವರಿಗೆ ಸಲ್ಲಿಸಿದರು.ಆಯೋಗದ ಸದಸ್ಯರಾದ ಆರ್.ಎಸ್.ಫೋಂಡೆ, ಮಹಮದ್ ಸನಾವುಲ್ಲಾ, ಸಮಾಲೋಚಕರಾದ ಕೆಂಪೇಗೌಡ ಮತ್ತು ಏಲಕ್ಕಿಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಚಂದ್ರಮ್ಮ, ಎಇಇ ಎಸ್.ಎಸ್.ಮತ್ತಿಕಟ್ಟಿ, ಪುರಸಭಾ ಸದಸ್ಯರಾದ ಸೈಯ್ಯದ್ ಯಾಸೀನ್, ಇಕ್ಬಾಲ್, ಸಂದೇಶ್ ಕುಮಾರ್, ಮೋಹನ್ ಕುಮಾರ್ ನಾಯ್ಕ, ಪುರಸಭೆ ಸಿಬ್ಬಂದಿ ಇದ್ದರು.---- ಬಾಕ್ಸ್ ---ಪಟ್ಟಣದಲ್ಲಿ ಹಲವಾರು ಅನಧಿಕೃತ ಆಸ್ತಿಗಳಿದ್ದು, ಅವುಗಳನ್ನು ಸಕ್ರಮಗೊಳಿಸಿ ಇ- ಸ್ವತ್ತು ನೀಡಿ ತೆರಿಗೆ ಸಂಗ್ರಹಿಸಿ ಪುರಸಭೆ ಆದಾಯ ಹೆಚ್ಚಳ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಡಾ.ನಾರಾಯಣಸ್ವಾಮಿ ಕಡೂರು ಪುರಸಭಾ ವ್ಯಾಪ್ತಿಯಲ್ಲಿ 18 ಸ್ಲಂ ಗಳಿದ್ದು, 12655 ಜನರಿದ್ದಾರೆಂದು ಮಾಹಿತಿ ನೀಡಿದ್ದೀರಿ. ಆದರೆ ಅಲ್ಲಿ ಯಾವುದೇ ಅಭಿವೃದ್ಧಿ ಕಾರಣಕ್ಕೆ ಖರ್ಚು ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು.ವಾರ್ಡುಗಳ ಅಭಿವೃದ್ಧಿ ಮಾಡುವಾಗ ಆ ವ್ಯಾಪ್ತಿಯ ಸ್ಲಂಗಳೂ ಸಹ ಒಳಪಡುತ್ತದೆ. ಪ್ರತ್ಯೇಕವಾಗಿ ಸ್ಲಂಗಳಿಗೆಂದೇ ಖರ್ಚು ಮಾಡುತ್ತಿಲ್ಲ ಎಂದು ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.ಪುರಸಭೆ ಸಮಗ್ರ ಮಾಹಿತಿಗೆ ಹಲವಾರು ಪ್ರಶ್ನೆಗಳನ್ನು ಒದಗಿಸಲಾಗಿತ್ತು. ಆದರೆ ಅದರ ಬಗ್ಗೆ ಗಮನವಿಟ್ಟು ಉತ್ತರ ನೀಡಿಲ್ಲ. ಉಡಾಫೆಯಾಗಿ ಉತ್ತರಿಸಿರುವಂತೆ ಕಾಣುತ್ತದೆ ಎಂದು ಪುರಸಭಾ ಮುಖ್ಯಾಧಿಕಾರಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.ಪುರಸಭೆ ಎಲೆಕ್ಟ್ರಿಕಲ್ ಎಂಜಿನಿಯರ್ ಜಗದೀಶ್, ಪಟ್ಟಣಕ್ಕೆ ಭದ್ರಾ ನದಿ ನೀರು ಪ್ರಮುಖ ಮೂಲವಾಗಿದ್ದು, ಈಗ ಬಹಳಷ್ಟು ಗ್ರಾಮಗಳು ಸಹ ಭದ್ರಾ ಕುಡಿಯುವ ನೀರಿನ ಯೋಜನೆಗೆ ಸೇರಿರುವುದರಿಂದ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಯಾಗಿದೆ. ಮಧಗದ ಕೆರೆಯಿಂದ ಪೈಪ್ ಲೈನ್ ಮಾಡಿದರೆ ಗುರುತ್ವಾಕರ್ಷಣ ಶಕ್ತಿಯಿಂದಲೇ ನೀರು ತರಲು ಅವಕಾಶವಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಕುಡಿಯುವ ನೀರಿಗೆ ದೂರದೃಷ್ಟಿಯಿಟ್ಟುಕೊಂಡು ಸಂಭವನೀಯ ಯೋಜನೆ ಯನ್ನು ರೂಪಿಸಿ ವರದಿ ಕಳುಹಿಸಿದರೆ ಅದನ್ನು ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ ಎಂದರು.26ಕೆಕೆಡಿಯು2
ಕಡೂರು ಪಟ್ಟಣಕ್ಕೆ ರಾಜ ಕಾಲುವೆ ಅಗತ್ಯವಿದೆ. ಹೆಚ್ಚಿನ ಪೌರ ಕಾರ್ಮಿಕರ ಅಗತ್ಯವಿದೆ. ಅದರ ಬಗ್ಗೆಯೂ ಗಮನ ಹರಿಸ ಬೇಕೆಂದು ಕೋರಿ ಸದಸ್ಯ ಭಂಡಾರಿ ಶ್ರೀನಿವಾಸ್ ಮನವಿ ಪತ್ರವನ್ನು ನಾರಾಯಣಸ್ವಾಮಿಗೆ ಸಲ್ಲಿಸಿದರು.