ಸಾರಾಂಶ
ಬೀದಿ ಬದಿ ಸುರಕ್ಷಿತವಾಗಿ ವ್ಯಾಪಾರ ಮಾಡಲಿ ಎಂದು ಮಳೆ, ಗಾಳಿ, ಬಿಸಿಲು ಬಾರದಂತೆ ಶೆಡ್ ಹಾಕಿಕೊಡಲಾಗಿದ್ದರೂ ಕೆಲ ಹಣ್ಣಿನ ಹಾಗೂ ಇತರೆ ವ್ಯಾಪಾರಸ್ಥರು ಶೆಡ್ ನಿಂದ ಹೊರಗೆ ಪಾದಚಾರಿ ಮಾರ್ಗಗಳನ್ನೂ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ನಗರಸಭೆ ಆಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಬೆಳಗ್ಗೆ ತೆರವು ಕಾರ್ಯಾಚರಣೆ ಮಾಡಲು ಮುಂದಾದರು. ಈ ವೇಳೆ ಕೆಲ ಹಣ್ಣಿನ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದರಲ್ಲದೇ ಧಮಕಿ ಕೂಡ ಹಾಕಿದರು.
ಮಹಾವೀರ ವೃತ್ತದಲ್ಲಿನ ಹಣ್ಣಿನ ವ್ಯಾಪಾರಿಗಳ ಉದ್ಧಟತನ
ಕನ್ನಡಪ್ರಭ ವಾರ್ತೆ ಹಾಸನಫುಟ್ಪಾತ್ ಮೇಲೆ ಹಣ್ಣಿನ ವ್ಯಾಪಾರ ಹಾಗೂ ಇತರೆ ಅಂಗಡಿ ಹಾಕಿರುವುದನ್ನು ತೆರವುಗೊಳಿಸಲು ಬಂದ ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿಗೇ ಕೆಲ ವ್ಯಾಪಾರಸ್ಥರು ಅವಾಝ್ ಹಾಕಿದರೂ ಪೊಲೀಸರ ನೆರವಿನೊಂದಿಗೆ ತೆರವು ಮಾಡಿದ ಘಟನೆ ಬುಧವಾರ ಬೆಳ್ಳಂಬೆಳಗ್ಗೆ ನಗರದ ಮಹಾವೀರ ವೃತ್ತದ ಬಳಿ ನಡೆದಿದೆ.
ಬೀದಿ ಬದಿ ಸುರಕ್ಷಿತವಾಗಿ ವ್ಯಾಪಾರ ಮಾಡಲಿ ಎಂದು ಮಳೆ, ಗಾಳಿ, ಬಿಸಿಲು ಬಾರದಂತೆ ಶೆಡ್ ಹಾಕಿಕೊಡಲಾಗಿದ್ದರೂ ಕೆಲ ಹಣ್ಣಿನ ಹಾಗೂ ಇತರೆ ವ್ಯಾಪಾರಸ್ಥರು ಶೆಡ್ ನಿಂದ ಹೊರಗೆ ಪಾದಚಾರಿ ಮಾರ್ಗಗಳನ್ನೂ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ನಗರಸಭೆ ಆಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಬೆಳಗ್ಗೆ ತೆರವು ಕಾರ್ಯಾಚರಣೆ ಮಾಡಲು ಮುಂದಾದರು. ಈ ವೇಳೆ ಕೆಲ ಹಣ್ಣಿನ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದರಲ್ಲದೇ ಧಮಕಿ ಕೂಡ ಹಾಕಿದರು. ನಗರಸಭೆ ಆಯುಕ್ತರ ಮಾತಿಗೆ ಬೆಲೆ ಕೊಡದೆ ಮಾತಿಗೆ ಮಾತು ಕೂಡ ಬೆಳೆಯಿತು. ನಂತರದಲ್ಲಿ ಪೊಲೀಸ್ ಇಲಾಖೆಗೆ ಕರೆ ಮಾಡಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆಯನ್ನು ಸುಗಮವಾಗಿ ನಡೆಸಿದರು.