ಪರಿಸರ ಸಂರಕ್ಷಣೆ ವಿಚಾರದಲ್ಲಿ ಬದ್ಧತೆ ಅಗತ್ಯ

| Published : Jun 07 2024, 12:35 AM IST

ಪರಿಸರ ಸಂರಕ್ಷಣೆ ವಿಚಾರದಲ್ಲಿ ಬದ್ಧತೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಹಾಗೂ ಹಣಕಾಸು ಸಾಕ್ಷರತೆ ಕಾರ್ಯಕ್ರಮ ನಡೆಯಿತು. ಜೀವ ವೈವಿಧ್ಯತೆಗಳನ್ನು ಉಳಿಸಿ ಜೀವವನ್ನು ಉಳಿಸಿಕೊಳ್ಳೋಣ ಎಂದು ಹಾವೇರಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಕರೆ ನೀಡಿದರು.

ಬ್ಯಾಡಗಿ: ಪ್ರಸ್ತುತ ಜಗತ್ತಿನಲ್ಲಿ ಅರಣ್ಯ ನಾಶದಿಂದ ಮಾಲಿನ್ಯ ಮತ್ತು ಜೀವ ವೈವಿಧ್ಯಗಳು ನಷ್ಟವಾಗುತ್ತಿದ್ದು, ಹವಾಮಾನ ಬದಲಾವಣೆ ಪರಿಣಾಮ ಅಸಂಖ್ಯಾತ ಸವಾಲು ಎದುರಿಸುವಂತಾಗಿದೆ. ಜೀವ ವೈವಿಧ್ಯತೆಗಳನ್ನು ಉಳಿಸಿ ಜೀವವನ್ನು ಉಳಿಸಿಕೊಳ್ಳೋಣ ಎಂದು ಹಾವೇರಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪರಿಸರ ದಿನಾಚರಣೆ ಹಾಗೂ ಹಣಕಾಸು ಸಾಕ್ಷರತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ವಿಚಾರದಲ್ಲಿ ನಮ್ಮ ಬದ್ಧತೆ ತೋರಿಸಬೇಕಾಗಿದೆ. ಇದರಿಂದ ಮಾತ್ರ ವಿಶ್ವದಲ್ಲಿಯೇ ಬಹುದೊಡ್ಡ ವ್ಯತ್ಯಾಸವೊಂದನ್ನು ಕಾಣಬಹುದಾಗಿದ್ದು, ಎಲ್ಲರಿಗೂ ಸಮರ್ಥ, ಆಶಾದಾಯಕ ಭವಿಷ್ಯವನ್ನು ನಾವೆಲ್ಲರೂ ನೀಡಬಹುದಾಗಿದೆ ಎಂದರು.

ಭೂಮಿ ಮತ್ತು ಒಕ್ಕಲುತನ ಕುರಿತು ಉಪನ್ಯಾಸ ನೀಡಿದ ನಬಾರ್ಡ್ ಬ್ಯಾಂಕ್ ಅಧಿಕಾರಿ ರಂಗನಾಥ ಮಾತನಾಡಿ, ಅರಣ್ಯ ಬೆಳೆಸುವ ವಿಷಯದಲ್ಲಿ ಭೂಮಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ. ಕ್ಷೀಣಿಸಿದ ಭೂಮಿಯನ್ನು ಮರುಸ್ಥಾಪಿಸಿ ಬರಡು ಅಥವಾ ಬಂಜರುಭೂಮಿ ಸ್ಥಿತಿಸ್ಥಾಪಕತ್ವಕ್ಕೆ ವಿಚಾರದಲ್ಲಿ ಸಾರ್ವಜನಿಕರು ಮತ್ತು ಸರ್ಕಾರಗಳು ಸಾಮೂಹಿಕ ಹೊಣೆಗಾರಿಕೆ ತೋರಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ ಮಾತನಾಡಿ, ಮೈಕ್ರೋಪ್ಲಾಸ್ಟಿಕ್‌ಗಳು, ಕಲುಷಿತ ಗಾಳಿ ಮತ್ತು ಹಾನಿಕಾರಕ ವಿಕಿರಣಗಳ ನಿರಂತರ ಹೆಚ್ಚಳದೊಂದಿಗೆ ಪರಿಸರದಲ್ಲಿ ಏರುಪೇರುಗಳಾಗಿದ್ದು ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಬಂದಿದೆ. ಮುಂಬರುವ ದಿನಗಳಲ್ಲಿನ ಸವಾಲುಗಳನ್ನು ಸಂಘಟಿತ ಪ್ರಯತ್ನದಿಂದ ಎದುರಿಸುವ ಅಗತ್ಯವಿದೆ ಎಂದರು.

ಡಾ. ಮಂಜುನಾಥ ಕಮ್ಮಾರ, ಡಾ. ಬಿ.ಎಸ್. ಗಿಡ್ಡಣ್ಣವರ, ಚಿಕ್ಕಣ್ಣ ಮುಳಗುಂದ, ರಾಧಿಕಾ, ಲೀಲಾವತಿ, ಸುರೇಶ, ಅಪ್ಪಾಜಿ ಉಪಸ್ಥಿತರಿದ್ದರು. ಡಾ. ಬಿ.ಎನ್. ದೇವೇಂದ್ರ ಸ್ವಾಗತಿಸಿದರು. ಸಣ್ಣಗೌಡರ ಕಾರ್ಯಕ್ರಮ ನಿರೂಪಿಸಿದರು. ಚೇತನ ಮಂಜುನಾಥ ವಂದಿಸಿದರು.