ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಉತ್ಪಾದನೆ ಹೆಚ್ಚಿಸುವುದು ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು, ಸಂಘಗಳಲ್ಲಿ ಸದಸ್ಯರು, ಸಿಬ್ಬಂದಿ ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡಲು ಹಾಲು ಒಕ್ಕೂಟದ ಅಧ್ಯಕ್ಷ ಆರ್ ಕೆ ಪಾಟೀಲ್ ಸಂಕಲ್ಪ ಮಾಡಿದರು.
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಉತ್ಪಾದನೆ ಹೆಚ್ಚಿಸುವುದು ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು, ಸಂಘಗಳಲ್ಲಿ ಸದಸ್ಯರು, ಸಿಬ್ಬಂದಿ ಯೋಗಕ್ಷೇಮಕ್ಕೆ ಹೆಚ್ಚಿನ ಒತ್ತು ನೀಡಲು ಹಾಲು ಒಕ್ಕೂಟದ ಅಧ್ಯಕ್ಷ ಆರ್ ಕೆ ಪಾಟೀಲ್ ಸಂಕಲ್ಪ ಮಾಡಿದರು.ಕಲಬುರಗಿ ನಗರದಲ್ಲಿ ಗುರುವಾರ ನಡೆದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ 2025-26 ನೇ ಸಾಲಿನ ಒಕ್ಕೂಟದ 41ನೇ ವಾರ್ಷಿಕ ಸಾಮಾನ್ಯ ಸಭೆಯ ಉದ್ಘಾಟಿಸಿ ಮಾತನಾಡಿದರು.ಹಾಲು ಉತ್ಪಾದಕ ರೈತರು ಮೃತಪಟ್ಟರೆ ಕಲ್ಯಾಣ ರೈತ ನಿಧಿಯಿಂದ ನೀಡಲಾಗುತ್ತಿದ್ದ ನೆರವಿನ ಮೊತ್ತ 25 ಸಾವಿರ ರು.ನಿಂದ 50 ಸಾವಿರಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ರೈತ ನಿಧಿಯಲ್ಲಿಯೇ ಹಾಲು ಉತ್ಪಾದಕ ರೈತರು, ಸಂಘಧ ಸಿಬ್ಬಂದಿ ಅಪಘಾತಕ್ಕೀಡಾದರೆ, ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದರೆ ಅಂತಹವರ ಆಸ್ಪತ್ರೆ ಬಿಲ್ ರೂಪದಲ್ಲಿ 15 ಸಾವಿರ ರು ನೀಡುವುದಾಗಿ ಅಧ್ಯಕ್ಷರು ಘೋಷಿಸಿದರು.ನಾನು ಕಲಬುರಗಿ, ಬೀದರ್, ಯಾದಗಿರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಅನೇಕ ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದೇನೆ. ಈಗಾಲೇ ಇಲ್ಲಿನ ಯಂತ್ರೋಪಕರಣ ಬದಲಿಸಿ ಸುಧಾರಣೆ ನಡೆಸಲಾಗುತ್ತಿದೆ. ಡೈರಿ ಉತ್ಪನ್ನಗಳ ಗುಣಮಟ್ಟ ವೃದ್ದಿಯಾಗಿದ್ದು, ಡೈರಿ ನಷ್ಟ, ಸಾಲಸೋಲದಿಂದ ಹೊರಬಂದಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ ಆರ್ ಕೆ ಪಾಟೀಲ್ ಮಾಹಿತಿ ನೀಡಿದರು.ಹೈನುಗಾರಿಕೆಗೆ ಯುವಕರ ಸೆಳೆತ: ಕಲಬುರಗಿ ಡೈರಿ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ಹೆಚ್ಚಳಕ್ಕೆ ಸಂಕಲ್ಪಿಸಿದ್ದಾಗಿ ಹೇಳಿದ ಅಧ್ಯಕ್ಷರು, ಈ ದಿಶೆಯಲ್ಲಿ ಹಾಲು ಉತ್ಪಾದನೆಗೆ ನೆರವಾಗುವಂತೆ ಯುವಕರನ್ನು ಹೆಚ್ಚಿಗೆ ಹೈನುಗಾರಿಕೆಯಲ್ಲಿ ತೊಡಗಿಸುವುದಾಗಿ ಭರವಸೆ ನೀಡಿದರು.ಹಸಿ ಮೇವು ಬೆಳೆಸುವಂತೆ ಕರೆ ನೀಡಿದ ಆರ್ ಕೆ ಪಾಟೀಲ್, ಅವರು ಹಳ್ಳಿಗಾಡಲ್ಲಿ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಲ್ಲಿ 10 ಯುವಕರನ್ನು ಗುರುತಿಸಿ ಅವರಿಗೆ ಆ ಭಾಗದ ಎಲ್ಲ ಲಭ್ಯ ರೈತರ 2 ಹಸುಗಳನ್ನು 1 ಎಕರೆ ಜಾಗದಲ್ಲಿ ಕಟ್ಟಿ ಪೋಷಿಸುವ ಹೊಣೆಗಾರಿಕೆ ನೀಡುವ ಯೋಜನೆ ರೂಪಿಸುವ ಚಿಂತನೆ ನನ್ನದು ಎಂದರು.ಇದರಿಂದಾಗಿ ಯುವಕರಿಗೆ ಹೈನುಗಾರಿಕೆಯಲ್ಲಿ ಆಸಕ್ತಿ ಹೆಚ್ಚುವುದರ ಜತೆಗೆ ಹಾಲು ಉತ್ಪಾದನೆಯೂ ಹೆಚ್ಚಿಸಿದಂತಾಗುತ್ತದೆ ಎಂದರು. ಯುವಕರು, ರೈಯತರು ಇಂತಹ ಹೊಸ ಯೋಜನೆಗಳಿಗೆ ಹೆಚ್ಚಿಗೆ ಸ್ಪಂದಿಸುವಂತೆ ಕೋರಿದರು.ರಾಜ್ಯ ಹಾಲು ಉತ್ಪಾಕರ ಫೆಡರೇಷನ್‌ನ ನಿರ್ದೇಶಕರಾಗಿ ನಾನು ಇರೋದರಿಂದ ಈ ಭಾಗದಲ್ಲಿ ಹಾಲು ಉತ್ಪಾದನೆ ಹೆಚ್ಚಳಕ್ಕೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು, ಸಲಹೆ ಸೂಚನೆ ಕೊಡಲು ತಜ್ಞರ ಸಮೀತಿ ರಚಿಸಬೇಕು ಎಂಬ ಪ್ರಸ್ತಾವನೆ ಹೊಂದಿದ್ದೇನೆ. ಇದನ್ನು ಫೆಡರೇಷನ್ ಸಭೆಯಲ್ಲಿ ಮಂಡಿಸುತ್ತೇನೆ ಎಂದು ಹೇಳಿದರು.ರೈತರಿಗೆ ಹೈನುಗಾರಿಕೆ ತರಬೇತಿ ನೀಡಲು ಸವಲತ್ತು ಇದ್ದರೂ ಕಲಬುರಗಿ, ಬೀದರ್, ಯಾದಗಿರಿ ಸಹಿತ ಡೈರಿ ವ್ಯಾಪ್ತಿಯ ರೈತರು , ರೈತ ಮಹಿಳೆಯರು ಇಲ್ಲಿ ಬಂದು ತರಬೇತಿ ಹೊಂದಲು ಆಸಕ್ತಿ ತೋರುತ್ತಿಲ್ಲ. ಇದು ವಿಷಾದದ ಸಂಗತಿ. ಹಾಲು ಉತ್ಪಾದಕರಿಗೆ ಇನ್ನೂ ಹೆಚ್ಚಿನ ಹಣ ಪ್ರತಿ ಲೀಟರ್‌ಗೆ ನೀಡಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಫೆಡರೇಷನ್ ಗಮನಕ್ಕೆ ತಂದು ಸೂಕ್ತ ನಿರ್ಣಯ ಬೇಗ ಪ್ರಕಟಿಸಲಾಗುವುದು ಎಂದು ಆರ್ ಕೆ ಪಾಟೀಲ್ ಭರವಸೆ ನೀಡಿದರು.
ಕೆಕೆಆರ್‌ಡಿಬಿಯಿಂದ ಅನುದಾನ:ಈಗಾಗಲೇ ಮೆಗಾ ಡೈರಿಗೆ ಕೆಕೆಆರ್‌ಡಿಬಿಯಿಂದ 50 ಕೋಟಿ ಬಜೆಟ್ ತಂದಿರುವೆ. ಇದೀಗ ಕೆಕೆಆರ್‌ಡಿಬಿಯಂದ ಮತ್ತೆ ಡೈರಿಗೆ 25 ಕೋಟಿ ರು ಬಜೆಟ್ ತರುವೆ. 10 ಕೋಟಿ ರು ಒಕ್ಕೂಟದ ಕೆಲಸಕ್ಕೆ, ಸಂಘದ, ಮಶೀನರಿ ಸಮಸ್ಯೆ, ಗಣಕೀಕರಣ, ಸಾಫಟವೇರ್ ಅಪ್‌ಡೇಟ್ ಇವಕ್ಕೆಲ್ಲ ಈ ನಿಧಿ ಬಳಸಲು ಯೋಜನೆ ರೂಪಿಸಲಾಗುತ್ತದೆ ಎಂದು ಆರ್‌ಕೆ ಪಾಟೀಲ್ ಹೇಳಿದರು.
-----ಬಾಕ್ಸ್--------ಬಿಎಸ್ಸಿ ಅಗ್ರೀ, ವೆಟರ್ನರಿ ಓದಿಗೆ ನೆರವುಸಂಘದ ಸದಸ್ಯರು ಎಲ್ಲರು ಹಾಲು ಉತ್ಪಾದನೆಗೆ ಸಹಕರಿಸಬೇಕು. ಸಂಘದ ಸದಸ್ಯರ ಮಕ್ಕಳು ಬಿಎಸ್‌ಸಿ ಅಗ್ರಿ, ವೆಟರ್ನರಿ ಓದುತ್ತಿದ್ದರೆ ಅವರಿಗೆ ಕಲ್ಯಾಣ ರೈತ ನಿಧಿಯಿಂದ ಆರ್ಥಿಕ ನೆರವು ನೀಡಲಾಗುತ್ತದೆ ಎಂದು ಆರ್.ಕೆ. ಪಾಟೀಲ್ ಹೇಳಿದರು. ಆಳಂದಲ್ಲೇ ಅಧಿಕ ನಂದಿನಿ ಪಾರ್ಲರ್ ಇವೆ ಎಂಬ ಆರೋಪಗಳನ್ನು ಅಲ್ಲಗಳೆದ ಆರ್ ಕೆ ಪಾಟೀಲರು 3 ಪಾರ್ಲರ್ ಇವೆ. ಚೆನ್ನಾಗಿ ಬೇಡಿಕೆ ಇದೆ. ತಪ್ಪು ಗ್ರಹಿಕೆ ಬೇಡ ಎಂದು ಸ್ಪಷ್ಟಪಡಿಸಿದರು.ಪಶುಗಳ ಮೇವು ಹಾಗೂ ಹಸಿರು ಮೇವು ಹೊಂದಲು ನಮಗೆ ಹೆಚ್ಚಿನ ನೆರವು ಕೊಡುವಂತೆ ಉಸ್ತುವಾರಿ ಸಚಿವರ ಗಮನ ಸೆಳೆಯುವೆ ಎಂದು ಆರಕೆ ಪಾಟೀಲ್ ಭರವಸೆ ನೀಡಿದರು. ಈಗಾಗಲೇ ಮೆಗ ಡೈರಿಗೆ 50 ಕೋಟಿ ರು. ವೆಚ್ಚದಲ್ಲಿ ಅಡಿಗಲ್ಲಿಡಲಾಗಿದೆ. ಸಿಎಂ ಶಿವಕುಮಾರ್ ಅವರು ಇದಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ ಎಂದರು.ಡೈರಿಯಿಂದ ಹಾಲು ಉತ್ಪಾದಕರ ಮಕ್ಕಳು ಎಸ್ಸೆಸಸ್ಸೆಲ್ಸಿ, ಪಿಯುಸಿ ಸಹಿತ ಹಲವು ಪದವಿಗಳಲ್ಲಿ ಹೆಚ್ಚಿನ ಅಂಕ ಪಡೆದವರನ್ನು ಸತ್ಕರಿಸಲಾಯ್ತು. ಹಾಲು ಒಕ್ಕೂಟದ ಆಡಳಿ ಮಂಡಳಿಯ ನಿರ್ದಶಕರಾದ ರೇವಣಸಿದ್ದಪ್ಪ, ಮಲ್ಲಿಕಾರ್ಜುನ, ಬಂಡೇರಾವ ಕುಲಕರ್ಣಿ, ವೀರಣ್ಣ ಝಳಕಿ. ಬಸವರಾಜ, ಮಲ್ಲೀನಾಥ, ನಾಗರಾಜ್, ಸಂತೋಷ, ವ್ಯವಸ್ಥಾಪಕ ರವಿಕಿರಣ ಹಾಗೂ ಮೂರು ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಸದಸ್ಯರು ಇದ್ದರು.
-------ಫೋಟೊ-------ಫೋಟೋ- ನಂದಿನಿ 1ಕಲಬುರಗಿಯಲ್ಲಿ ಗುರುವಾರ ನಡೆದ ಹಾಲು ಒಕ್ಕೂಟದ ಸರ್ವ ಸದಸ್ಯರ 41ನೇ ಸಭೆಯಲ್ಲಿ ಅಧ್ಯಕ್ಷ ಆರ್ ಕೆ ಪಾಟೀಲರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಹಾಲು ಉತ್ಪಾದಕರ ಮಕ್ಕಳನ್ನು ಸತ್ಕರಿಸಿದರು.
ಫೋಟೋ- ನಂದಿನಿ 2ಕಲಬುರಗಿ ನಗರದಲ್ಲಿ ಕಲಬುರಗಿ, ಬೀದರ ಹಾಗೂ ಯಾದಗಿರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ 2025-26 ನೇ ಸಾಲಿನ ಒಕ್ಕೂಟದ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಅಧ್ಯಕ್ಷ ಆರ್ ಕೆ ಪಾಟೀಲ್ ಮಾತನಾಡಿದರು.ಫೋಟೋ- ನಂದಿನಿ 3-----------------------
