ಬೀಳಗಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಶಾಸಕ ಜೆ.ಟಿ. ಪಾಟೀಲ

| Published : Mar 03 2024, 01:31 AM IST

ಬೀಳಗಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಶಾಸಕ ಜೆ.ಟಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬೀಳಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮತ್ತು ₹ 6.50 ಕೋಟಿ ವೆಚ್ಚದ ವಸತಿ ನಿಲಯ ಕಾಮಗಾರಿಗೆ, ₹ 2.40 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಪಟ್ಟಣದ ಅಭಿವೃದ್ಧಿಗಾಗಿ ಸುಮಾರು ₹ ೨.೪೪ ಕೋಟಿ ವೆಚ್ಚದ ಕಾಮಗಾರಿಗಳ ಭೂಮಿಪೂಜೆ ಮಾಡಲಾಗಿದೆ. ಮತ್ತೆ ₹೩.೬೮ ಕೋಟಿ ವೆಚ್ಚದ ಕಾಮಗಾರಿಗಳ ಟೆಂಡರ್ ಕರೆಯಲಾಗಿದ್ದು, ಒಟ್ಟು 6 ಕೋಟಿ ಅನುದಾನದ ಕಾಮಗಾರಿಗಳು ಪ್ರಸಕ್ತ ಸಾಲಿನಲ್ಲಿ ಮಂಜೂರು ಮಾಡಲಾಗಿದೆ. ಬೀಳಗಿ ಪಟ್ಟಣ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮತ್ತು ₹ 6.50 ಕೋಟಿ ವೆಚ್ಚದ ವಸತಿ ನಿಲಯ ಕಾಮಗಾರಿಗೆ, ₹ 2.40 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದಲ್ಲಿರುವ ಮನೆಗಳಿಗೆ ಪ್ರತಿದಿನ ನೀರು ಒದಗಿಸುವ ಯೋಜನೆ ಪ್ರಗತಿಯಲ್ಲಿದ್ದು, ವರ್ಷದೊಳಗಾಗಿ ಮುಗಿಸಲಾಗುವುದು. ರಾಜೀವಗಾಂಧಿ ವಸತಿ ಕಾಲೋನಿಯಲ್ಲಿರುವ 1080 ಮನೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಅನುದಾನ ನೀಡುವಂತೆ ನಿಗಮದ ಕಾರ್ಯದರ್ಶಿಗೆ ಮಾತನಾಡಿದ್ದು ಶೀಘ್ರವೇ ಸಮಸ್ಯೆ ಪರಿಹರಿಸಲಾಗುವುದು ಎಂದ ಅವರು, ಪಟ್ಟಣದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ಮೇರೆಗೆ ಅನುದಾನ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್ಐ ಅಭಿಷೇಕ್ ನಾಡಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ, ಪಟ್ಟಣ ಪಂಚಾಯತಿ ಸದಸ್ಯರಾದ ಪಡಿಯಪ್ಪ ಕರಿಗಾರ, ಅಜ್ಜು ಬಾಯಿ ಸರಕಾರ, ಅಣವೀರಯ್ಯ ಪ್ಯಾಟಿಮಠ, ಸಿದ್ದು ಮೇಟಿ, ಸಿದ್ದು ಸಾರಾವರಿ, ಬಸವರಾಜ ಹಳ್ಳದಮನಿ, ಶಿವಾನಂದ ಮಾದರ, ರವಿ ನಾಗನಗೌಡರ, ಗುತ್ತಿಗೆದಾರರಾದ ಸಂಗಪ್ಪ ಕಂದಗಲ ಸಂತೋಷ ಕೋಲಾರ,ಯಲ್ಲಪ್ಪ ಮೇಟಿ, ಭಾಗವಹಿಸಿದ್ದರು.