ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

| Published : Apr 08 2024, 01:08 AM IST

ಸಾರಾಂಶ

ಹುಬ್ಬಳ್ಳಿ-ಧಾರವಾಡವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವ ಮೂಲಕ ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುವೆ. ದೇಶಕ್ಕಾಗಿ ಮತ್ತು ಈ ಕ್ಷೇತ್ರಕ್ಕಾಗಿ ನಾನು 10 ಪಟ್ಟು ಹೆಚ್ಚಿನ ಸಮಯ ನೀಡಿ ಸೇವೆ ಮಾಡುವೆ.

ಹುಬ್ಬಳ್ಳಿ:

ಧಾರವಾಡ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಮುಂದಿನ ದಿನಗಳಲ್ಲಿ ಮಾದರಿ ಕ್ಷೇತ್ರವನ್ನಾಗಿಸಲು ಬದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಭಾನುವಾರ ಖಾಸಗಿ ಹೊಟೇಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ದೇಶದಲ್ಲಿ 10 ವರ್ಷಗಳಲ್ಲಿ 150 ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಈಗ ಸಾವಿರ ವಿಮಾನ ನಿಲ್ದಾಣ ಮಾಡಲು ಉದ್ದೇಶಿಸಿರುವ ರಾಷ್ಟ್ರ ಭಾರತ ಒಂದೇ ಎಂದರು.

ಹುಬ್ಬಳ್ಳಿ-ಧಾರವಾಡವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವ ಮೂಲಕ ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುವೆ. ದೇಶಕ್ಕಾಗಿ ಮತ್ತು ಈ ಕ್ಷೇತ್ರಕ್ಕಾಗಿ ನಾನು 10 ಪಟ್ಟು ಹೆಚ್ಚಿನ ಸಮಯ ನೀಡಿ ಸೇವೆ ಮಾಡುವೆ ಎಂದರು.

ನರೇಂದ್ರ ಮೋದಿ ಅವರು ಮರಳಿ ಪ್ರಧಾನಿಯಾಗಿ ಆಯ್ಕೆಯಾದರೆ ಮಾತ್ರ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಖಾತ್ರಿ ಸಾಧ್ಯ. ವಿರೋಧ ಪಕ್ಷಗಳು ಮತ ಗಳಿಕೆಗಾಗಿ ಕೆಲವು ಸಮುದಾಯಗಳನ್ನು ಓಲೈಸುತ್ತಿವೆ. ಆದರೆ, ಬಿಜೆಪಿ ''''ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್'''' ಮಂತ್ರದಲ್ಲಿ ನಂಬಿಕೆ ಇರಿಸಿದೆ ಎಂದರು.

ಶಾಸಕ, ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಕೆಎಲ್‌ಇ ಮಾಜಿ ಕುಲಪತಿ ಅಶೋಕ್ ಶೆಟ್ಟರ್‌ ಮಾತನಾಡಿದರು. ಈ ವೇಳೆ ಶಂಕ್ರಣ್ಣ ಮುನವಳ್ಳಿ, ಕರಮರಿ, ಸಂಶಿಮಠ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.