ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಶಾಸಕ ವಿಶ್ವಾಸ ವೈದ್ಯ

| Published : Feb 23 2025, 12:31 AM IST

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಶಾಸಕ ವಿಶ್ವಾಸ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅಂದಾಜು ₹55.00 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು, ಹಂತ ಹಂತವಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಯರಗಟ್ಟಿ

ಅಂದಾಜು ₹55.00 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು, ಹಂತ ಹಂತವಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಡಿ ಗ್ರಾಮದ ಚೆಕ್ಕರ ರಸ್ತೆ ಕಿ.ಮೀ 0.00 ದಿಂದ 0.200 ಕಿ.ಮೀ ವರೆಗೆ ಸಿ.ಸಿ.ರಸ್ತೆ ನಿರ್ಮಾಣ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೋ.ಶಿವಾಪೂರ ಗ್ರಾಮದಲ್ಲಿನ ಜೈನ ಬಸದಿ ಜೀರ್ಣೋದ್ಧಾರಕ್ಕೆ ₹15.95 ಲಕ್ಷ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ₹21.83 ಲಕ್ಷ ವೆಚ್ಚ ಸೇರಿ ಮೂರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸತ್ಯೆವ್ವ ಗೋರಗುದ್ದಿ, ಎಪಿಎಂಸಿ ಉಪಾಧ್ಯಕ್ಷ ಬಸವರಾಜ ಆರಿಬೆಂಚಿ, ಪಿಕೆಪಿಎಸ್ ಅಧ್ಯಕ್ಷ ಐ.ಕೆ.ಗೌಡರ, ಐ.ಬಿ.ಗೌಡರ, ಮಹಾಂತೇಶ ಇಟ್ನಾಳ, ಸುಭಾಶ ಕರೆನ್ನವರ, ಮಾರುತಿ ಗೋರಗುದ್ದಿ, ಕುಮಾರ ಹಳ್ಯಾಳ, ಬಾಳೇಶ ಬಡೆನ್ನವರ, ಸಂತೋಷ ಕರೆನ್ನವರ, ವಿಜಯ ಅಂಗಡಿ, ಪ್ರಕಾರ ವಾಲಿ, ಶಂಕರ ಇಟ್ನಾಳ, ಮಲಿಕಸಾಬ ಬಾಗವಾನ ಸೇರಿದಂತೆ ಗ್ರಾಮದ ಗುರು ಹಿರಿಯರು, ಮುಖಂಡರು, ಸುರೇಂದ್ರ ಅಂಗಡಿ, ಕೋಟೂರ ಶಿವಾಪೂರ ಗ್ರಾಪಂ ಅಧ್ಯಕ್ಷ ತವಣಪ್ಪ ಟೋಪನ್ನವರ, ಶ್ರೀಕಾಂತ ಪಠಗುಂದಿ, ಧರ್ಮೇಂದ್ರ ಉಪಾದ್ಯೆ, ಕುಮಾರ ಟೋಪನ್ನವರ, ಬುದ್ದಪ್ಪ ಉಪಾದ್ಯೆ, ಮಹಾದೇವ ಗಡ್ಡಿ, ಪಾಯಪ್ಪ ಟೋಪನ್ನವರ, ಶಿಂಗಯ್ಯಾ ಮಠಪತಿ, ಸಿದ್ದಲಿಂಗ ಕುಂದರಗಿ, ಚಾಯಪ್ಪ ಹುಂಡೆಕರ, ಲಕ್ಷ್ಮಣ ಕುಂಟಿಪ್ಪಗೋಳ, ಪ್ರಕಾಶ ವಾಲಿ, ಶಂಕರ ಇಟ್ನಾಳ, ಈರಪ್ಪ ಗಡ್ಡಿ ಯುವ ಮಿತ್ರರು ಉಪಸ್ಥಿತರಿದ್ದರು.