ನವಲಿ ಜಲಾಶಯ ನಿರ್ಮಾಣಕ್ಕೆ ಬದ್ಧ: ಡಿಸಿಎಂ

| Published : Apr 30 2024, 02:02 AM IST

ನವಲಿ ಜಲಾಶಯ ನಿರ್ಮಾಣಕ್ಕೆ ಬದ್ಧ: ಡಿಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಅದಕ್ಕೆ ಪರ್ಯಾಯವಾಗಿ ನವಲಿ ಜಲಾಶಯ ನಿರ್ಮಾಣಕ್ಕೆ ಬದ್ಧ.

ಗವಿಸಿದ್ದೇಶ್ವರ ಮಠಕ್ಕೆ ಸಾಷ್ಟಾಂಗ ನಮಸ್ಕಾರ ಹಾಕಿ ಹೇಳುತ್ತಿದ್ದೇನೆ ಎಂದು ಭರವಸೆ ನೀಡಿದ ಡಿ.ಕೆ. ಶಿವಕುಮಾರಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಅದಕ್ಕೆ ಪರ್ಯಾಯವಾಗಿ ನವಲಿ ಜಲಾಶಯ ನಿರ್ಮಾಣಕ್ಕೆ ಬದ್ಧ. ಇದನ್ನು ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಸಾಷ್ಟಾಂಗ ನಮಸ್ಕಾರ ಹಾಕಿ ಹೇಳುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.

ಜಿಲ್ಲೆಯ ಕುಷ್ಟಗಿಯಲ್ಲಿ ಜರುಗಿದ ಕಾಂಗ್ರೆಸ್‌ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕರಡಿ ಸಂಗಣ್ಣ ಕಾಂಗ್ರೆಸ್ಸಿಗೆ ಬಂದಿದ್ದು ಖುಷಿ ಆಗಿದೆ. ನಮ್ಮ ಕುದುರೆ ಗೆಲ್ಲಿಸಲಿಕ್ಕೆ ಅನುಕೂಲವಾಗಿದೆ ಎಂದರು.

ಕಮಲ ಕೆರೆಯಲ್ಲಿದ್ದರೆ ಚೆನ್ನ, ತೆನೆ ಹೊಲದಲ್ಲಿ ಇದ್ದರೆ ಚೆನ್ನ. ಕೈ ಅಧಿಕಾರದಲ್ಲಿ ಇದ್ದರೆ ಮಾತ್ರ ದಾನಧರ್ಮ. ಗ್ಯಾರಂಟಿ ಘೋಷಣೆ ಮಾಡಿದಂತೆ ಜಾರಿ ಮಾಡಿದ್ದೇವೆ. ಬಸವಣ್ಣ ಅವರಿಗೆ ಸಾಂಸ್ಕೃತಿಕ ನಾಯಕ ಅಂತಾ ಘೋಷಣೆ ಮಾಡಿದ್ದೇವೆ ಎಂದರು.

ಬೆಲೆ ಏರಿಕೆಯಿಂದ ಜನರ ರಕ್ಷಣೆ ಮಾಡಬೇಕು ಎಂದು ತೀರ್ಮಾನ ಮಾಡಿ ಗೃಹ ಜ್ಯೋತಿ ಘೋಷಣೆ ಮಾಡಿದೆವು. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿ ಆಯಿತು. ಬೆಲೆ ದುಬಾರಿಯಾಗಿದೆ ಎಂದು ಎರಡು ಸಾವಿರ ರುಪಾಯಿ ನೀಡಲು ತೀರ್ಮಾನ ಮಾಡಿದೆವು. ಪ್ರಿಯಾಂಕಾ ಗಾಂಧಿ ಅವರು ಬಂದು ಶಕ್ತಿ ಯೋಜನೆ ಘೋಷಣೆ ಮಾಡಿದರು. ದಿನಕ್ಕೆ ೬೦ ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಾರೆ. ಐದು ಗ್ಯಾರಂಟಿ ಕರೆಕ್ಟ್ ಆಗಿ ತಲುಪುತ್ತಿವೆ ಎಂದರು.

ಕಾಂಗ್ರೆಸ್ ಸರ್ಕಾರದಿಂದ ಉಳುವವನಿಗೆ ಭೂಮಿ, ಬ್ಯಾಂಕ್ ರಾಷ್ಟ್ರೀಕರಣ ಆಯಿತು. ಅಹಾರ ಭದ್ರತಾ ಕಾಯಿದೆ ಜಾರಿ ಮಾಡಲಾಯಿತು. ೩೭೧ ಜೆ ಸ್ಥಾನಮಾನವನ್ನು ಈ ಭಾಗಕ್ಕೆ ನೀಡಲಾಯಿತು. ಶಿಕ್ಷಣ, ಉದ್ಯೋಗದಲ್ಲಿ ಮೀಸಲು ಸಿಕ್ಕಿತು. ಇಂಥ ಒಂದು ಕೆಲಸ ಬಿಜೆಪಿ ಅವರು ಮಾಡಿದರಾ, ಬಡವರಿಗೆ ಒಂದು ಸಾವಿರ ರುಪಾಯಿ ಕೊಡಲಿಲ್ಲ.

ಮಿಸ್ಟರ್‌ ವಿಜಯೇಂದ್ರ ಗ್ಯಾರಂಟಿ ಯೋಜನೆ ಯಾರಿಂದಲೂ ನಿಲ್ಲಿಸಲು ಆಗುವುದಿಲ್ಲ. ಅದರಿಂದ ಅನೇಕರು ಮಂಗಳ ಸರ ಮಾಡಿಸಿಕೊಡರು. ಮೋದಿ ತಾಳಿ ಕಿತ್ತುಕೊಳ್ಳುತ್ತಾರೆ ಅಂತಾರೆ. ಸೋನಿಯಾಗಾಂಧಿ ಅವರು ದೇಶಕ್ಕಾಗಿ ಮಾಂಗಲ್ಯ ನೀಡಿದ್ದಾರೆ ಎಂದರು.

ಸಂತೋಷದಿಂದ ಕಾಂಗ್ರೆಸ್ ಸೇರಿದ್ದೇನೆ.‌ ಇದಕ್ಕೆ ದೊಡ್ಡನಗೌಡರ ಅನುಮತಿ ಬೇಕಾಗಿಲ್ಲ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಆಕ್ರೋಶ ವ್ಯಕ್ತಪಡಿಸಿದರು.

ಕುಷ್ಟಗಿಯಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮ ಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಇಲ್ಲದೇ ಆಡಳಿತ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ. ಸೋಲಾರ್ ನೀಡಿದವರು ಡಿಕೆಶಿ ಅವರು. ಕೆ.‌ವಿರೂಪಾಕ್ಷಪ್ಪ ಅವರು ಎಷ್ಟಕ್ಕೆ ಹರಾಜ್ ಆಗಿದ್ದಾರೆ ಎಂದು ಕೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.

ವರಸೆ ಬದಲಾಯಿಸಿದ ತಂಗಡಗಿ:

ಮೋದಿ ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದಿದ್ದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವರಸೆ ಬದಲಾಯಿಸಿದ್ದು, ಮತ ಹಾಕುವ ಮೂಲಕ ಉದ್ಯೋಗ ನೀಡದವರ ಕಪಾಳಕ್ಕೆ ಹೊಡೆಯಿರಿ ಎಂದಿದ್ದಾರೆ.

ಕುಷ್ಟಗಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದವರು ಉದ್ಯೋಗ ನೀಡಲಿಲ್ಲ. ಈ ಕುರಿತು ಮೋದಿ ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದು ಬುದ್ದಿಮಾತು ಹೇಳಿದರೆ ಬಿಜೆಪಿಯವರಿಗೆ ಆಗಲಿಲ್ಲ. ಈಗ ಹೇಳುತ್ತೇನೆ, ಎರಡು ಕೋಟಿ ಉದ್ಯೋಗ ನೀಡದವರಿಗೆ ಕಾಂಗ್ರೆಸ್‌ಗೆ ವೋಟ್‌ ಹಾಕುವ ಮೂಲಕ ಕಪಾಳಕ್ಕೆ ಹೊಡೆಯಿರಿ ಎಂದರು.