ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ಬದ್ಧ: ಕೃಷಿ ಸಚಿವ ಸಿಆರ್‌ಎಸ್‌

| Published : Apr 21 2024, 02:24 AM IST

ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ಬದ್ಧ: ಕೃಷಿ ಸಚಿವ ಸಿಆರ್‌ಎಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಸಜ್ಜುಗೊಳಿಸಿರುವುದು ವಿಶೇಷವಾಗಿದೆ. ಎಲ್ಲ ಸಮಾಜಗಳು ಒಗ್ಗೂಡಿ ಬೃಹತ್ ಶಕ್ತಿಯಾಗಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿರುವುದು ನಮಗೆ ಬಲ ಬಂದಂತಾಗಿದೆ. ಸಂವಿಧಾನಬದ್ಧವಾಗಿ ಹಿಂದುಳಿದವರಿಗೆ ಸಿಗುತ್ತಿರುವ ಮೀಸಲಾತಿ ಮತ್ತಿತರೆ ಸವಲತ್ತುಗಳನ್ನು ಕಸಿದುಕೊಳ್ಳಲು ಬಿಜೆಪಿ ಸಂಚು ರೂಪಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅತಿ ಹಿಂದುಳಿದ ಹಾಗೂ ಅಸಂಘಟಿತ ಹಿಂದುಳಿದ ಸಮಾಜಗಳ ಶ್ರೇಯೋಭಿವೃದ್ಧಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬದ್ಧವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ವಿವಿಧ ಹಿಂದುಳಿದ ಸಮಾಜಗಳು ಮಂಡ್ಯದ ಕನಕ ಭವನದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಜಾತಿ-ವರ್ಗದವರಿಗೂ ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದು, ಅತಿ ಹಿಂದುಳಿದವರ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಿದೆ ಎಂದರು.

ಸಂವಿಧಾನಬದ್ಧವಾಗಿ ಹಿಂದುಳಿದವರಿಗೆ ಸಿಗುತ್ತಿರುವ ಮೀಸಲಾತಿ ಮತ್ತಿತರೆ ಸವಲತ್ತುಗಳನ್ನು ಕಸಿದುಕೊಳ್ಳಲು ಬಿಜೆಪಿ ಸಂಚು ರೂಪಿಸುತ್ತಿದೆ. ಇದಕ್ಕೆ ಜೆಡಿಎಸ್ ಕೂಡಾ ಬೆಂಬಲ ನೀಡುತ್ತಿವೆ. ಈ ಎರಡೂ ಪಕ್ಷಗಳು ಹಿಂದುಳಿದವರ ವಿರೋಧಿಗಳಾಗಿವೆ ಎಂದು ದೂರಿದರು.

ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಸಜ್ಜುಗೊಳಿಸಿರುವುದು ವಿಶೇಷವಾಗಿದೆ. ಎಲ್ಲ ಸಮಾಜಗಳು ಒಗ್ಗೂಡಿ ಬೃಹತ್ ಶಕ್ತಿಯಾಗಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿರುವುದು ನಮಗೆ ಬಲ ಬಂದಂತಾಗಿದೆ. ಅತೀ ಹಿಂದುಳಿದ ಸಮಾಜಗಳು ಹಲವು ಸಮಸ್ಯೆ-ಸವಾಲುಗಳನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳೊಡನೆ ಮಾಸಿಕ ಸಭೆ ನಡೆಸಿ ಪರಿಹಾರ ಸೂಚಿಸಲಾಗುವುದು. ಅಲ್ಲದೆ ಸಮಾಜಗಳ ಅಭಿವೃದ್ಧಿಗೆ ಅಗತ್ಯ ನಿವೇಶನ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಮಾತನಾಡಿ, ತಳಸಮುದಾಯಗಳಿಗೆ ಕಾಂಗ್ರೆಸ್‌ನ ತಳಹದಿ. ಇವುಗಳನ್ನು ರಕ್ಷಣೆ ಮತ್ತು ಅಭಿವೃದ್ಧಿ ಮೂಲಕವೇ ಕಾಂಗ್ರೆಸ್ ಬಲವರ್ಧನೆ ಆಗಿದೆ. ಜಿಲ್ಲೆಯಲ್ಲಿ ಅತೀ ಹಿಂದುಳಿದ ಸಮಾಜಗಳ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಚ್.ನಾಗರಾಜ್, ಜಿ.ಪಂ. ಮಾಜಿ ಸದಸ್ಯ ಯೋಗೇಶ್, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ವಿವಿಧ ಹಿಂದುಳಿದ ಸಮಾಜದ ಅಧ್ಯಕ್ಷರಾದ ಹೆಚ್.ಪಿ.ಸತೀಶ್ , ಎಂ.ಕೃಷ್ಣ, ಡಿ.ರಮೇಶ್, ಪುಟ್ಟಸ್ವಾಮಿ ಸುರೇಶ್, ಪ್ರತಾಪ್, ಕನ್ನಲಿ ದೇವರಾಜ್, ಸಂತೆಕಸಲಗೆರೆ ಬಸವರಾಜ್, ಗೋವಿಂದಸ್ವಾಮಿ, ನಾಗರತ್ನ, ಗಾಯತ್ರಿ, ರಾಜಣ್ಣ, ಶಶಿಕುಮಾರ್ ಮತ್ತಿತರರು ಹಾಜರಿದ್ದರು.