ಅರ್ಹರಿಗೆ 94ಸಿ ಅಡಿ ಹಕ್ಕು ಪತ್ರ ದೊರಕಿಸಿ ಕೊಡಲು ಬದ್ಧ: ಗಂಟಿಹೊಳೆ ಭರವಸೆ

| Published : Feb 28 2025, 12:48 AM IST

ಅರ್ಹರಿಗೆ 94ಸಿ ಅಡಿ ಹಕ್ಕು ಪತ್ರ ದೊರಕಿಸಿ ಕೊಡಲು ಬದ್ಧ: ಗಂಟಿಹೊಳೆ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಾಪುರ ತಾಲೂಕು ಕಚೇರಿಯಲ್ಲಿ ನಡೆದ ವಂಡ್ಸೆ ಹೋಬಳಿಯ ಗ್ರಾಮಗಳಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸ್ತವ್ಯದ ಮನೆ ಕಟ್ಟಿಕೊಂಡ ಅರ್ಹ 32 ಮಂದಿ ಫಲನುಭವಿಗಳಿಗೆ 94ಸಿ ಅಡಿ ಹಕ್ಕುಪತ್ರವನ್ನು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಗುರುವಾರ ವಿತರಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕುಂದಾಪುರ ತಾಲೂಕು ಕಚೇರಿಯಲ್ಲಿ ನಡೆದ ವಂಡ್ಸೆ ಹೋಬಳಿಯ ಗ್ರಾಮಗಳಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸ್ತವ್ಯದ ಮನೆ ಕಟ್ಟಿಕೊಂಡ ಅರ್ಹ 32 ಮಂದಿ ಫಲನುಭವಿಗಳಿಗೆ 94ಸಿ ಅಡಿ ಹಕ್ಕುಪತ್ರವನ್ನು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಗುರುವಾರ ವಿತರಿಸಿದರು.ನಂತರ ಮಾತನಾಡಿದ ಅವರು, 94ಸಿ ಅಡಿ ಎಲ್ಲ ಅರ್ಹರಿಗೂ ಹಕ್ಕು ಪತ್ರ ದೊರಕಿಸಿ ಕೊಡಲು ಬದ್ಧ ಎಂದು ಭರವಸೆ ನೀಡಿದರು.ಸಾಕಷ್ಟು ವರ್ಷಗಳಿಂದ ವಿವಿಧ ಹಂತದ ಅಧಿಕಾರಿಗಳ ಬಳಿಯಲ್ಲಿ 94ಸಿ ಅರ್ಜಿಗಳು ಸಮರ್ಪಕ ವಿಲೇವಾರಿ ಆಗದೇ ವಿಳಂಬವಾಗುತ್ತಿದ್ದರಿಂದ ಗ್ರಾಮೀಣ ಭಾಗದ ಬಡ ಕುಟುಂಬಗಳು ಸಂಕಷ್ಟ ಅನುಭವಿಸಿ ಬೇರೆ ಬೇರೆ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇಂದು ಅಂತಹ 32 ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ವಂಡ್ಸೆ ಹೋಬಳಿಯ ಬಾಕಿ ಉಳಿದ ಎಲ್ಲ ಅರ್ಹ ಬಡ ಕುಟುಂಬಕ್ಕೂ 94 ಅಡಿ ಭೂಮಿಯ ಹಕ್ಕು ಪತ್ರ ಒದಗಿಸುತ್ತೇವೆ ಎಂದರು.ಸಭೆಯಲ್ಲಿ ಬೈಂದೂರು ತಹಸೀಲ್ದಾರ್ ಮಲ್ಲಿಕಾರ್ಜುನ್, ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ರಾಘವೇಂದ್ರ ಮತ್ತು ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.