ರೈತ ವರ್ಗಕ್ಕೆ ಬೇಕಾದ ಅನುಕೂಲ ಕಲ್ಪಿಸಲು ಬದ್ಧ

| Published : Sep 15 2025, 01:00 AM IST

ಸಾರಾಂಶ

ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ತತ್ವದಡಿ ಎಲ್ಲರೂ ಸಾಗಿದರೇ ಉತ್ತಮ ಬದುಕು ಕಟ್ಟಿಕೊಳ್ಳಬಹು. ರೈತರ ಅಭುಧ್ಯಯಕ್ಕಾಗಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ಜಿಲ್ಲೆಯ ಸಹಕಾರಿ ರಂಗವೂ ಒಂದು ಹಂತದಲ್ಲಿ ತನ್ನ ನೌಕರಿಗೆ ಸಂಬಳ ಕೊಡಲು ಹಣವಿಲ್ಲದೆ ಸೊರಗಿತ್ತು. ಆಗ ದೇವೆಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೆ ಅವರು ರೂಪಿಸಿದ ಪೈಲೆಟ್ ಯೋಜನೆಯ ಫಲವಾಗಿ ಇಂದು ಜಿಲ್ಲೆಯ ಸಹಕಾರಿ ಕ್ಷೇತ್ರವೂ ೨ ಸಾವಿರ ಕೋಟಿ ರು. ಗಳ ವಹಿವಾಟು ಮಾಡುತ್ತಿದೆ. ಜಿಲ್ಲೆಯಲ್ಲಿ ೧೩೦೦ ಕೋಟಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಒಬ್ಬರಿಗೊಬ್ಬರ ಸಹಕಾರದಿಂದ ಮಾತ್ರ ಸಹಕಾರಿ ಕ್ಷೇತ್ರ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ, ಸಹಕಾರಿ ಸಂಸ್ಥೆಗಳಲ್ಲಿ ಪ್ರಮಾಣಿಕತೆ ಮತ್ತು ಒಳ್ಳೆಯ ಭಾವನೆಗಳೊಂದಿಗೆ ಕೆಲಸ ಮಾಡಲು ಮುಂದಾದಾಗ ಮಾತ್ರ ರೈತರಿಗೆ ಅನುಕೂಲ ಮಾಡಲು ಸಾಧ್ಯವೆಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ತತ್ವದಡಿ ಎಲ್ಲರೂ ಸಾಗಿದರೇ ಉತ್ತಮ ಬದುಕು ಕಟ್ಟಿಕೊಳ್ಳಬಹು. ರೈತರ ಅಭುಧ್ಯಯಕ್ಕಾಗಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಉನ್ನತ ಮಟ್ಟಕ್ಕೆ ಬೆಳೆಸಿದ್ದಾರೆ. ಜಿಲ್ಲೆಯ ಸಹಕಾರಿ ರಂಗವೂ ಒಂದು ಹಂತದಲ್ಲಿ ತನ್ನ ನೌಕರಿಗೆ ಸಂಬಳ ಕೊಡಲು ಹಣವಿಲ್ಲದೆ ಸೊರಗಿತ್ತು. ಆಗ ದೇವೆಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೆ ಅವರು ರೂಪಿಸಿದ ಪೈಲೆಟ್ ಯೋಜನೆಯ ಫಲವಾಗಿ ಇಂದು ಜಿಲ್ಲೆಯ ಸಹಕಾರಿ ಕ್ಷೇತ್ರವೂ ೨ ಸಾವಿರ ಕೋಟಿ ರು. ಗಳ ವಹಿವಾಟು ಮಾಡುತ್ತಿದೆ. ಜಿಲ್ಲೆಯಲ್ಲಿ ೧೩೦೦ ಕೋಟಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದೆ ಎಂದರು.ಮೈಸೂರು ರಸ್ತೆಯಲ್ಲಿನ ಟಿಎಪಿಸಿಎಂಎಸ್ ಭವನ ಪಾಳುಬಿದ್ದಿತ್ತು. ಆಲ್ಲೀಗ ಒಂದು ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಿ ಆರ್ಥಿಕ ಮೂಲವನ್ನಾಗಿಸಲಾಗಿದೆ. ಅದೇ ರೀತಿ ಕಳೆದ ೫ ವರ್ಷಗಳಲ್ಲಿ ಗೊಬ್ಬರ ಮಾರಾಟದಲ್ಲಿ ೧೫ ಕೋಟಿ ರು. ವಹಿವಾಟು ನಡೆಸಿದ್ದು, ಲಾಭದ ದೃಷ್ಠಿಯಿಂದ ಮಾಡದೇ ಸೇವೆಯ ದೃಷ್ಠಿಯಿಂದ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಇದೀಗ ಹಳೇ ಕಟ್ಟಡಗಳ ನವೀಕರಣಗೊಳಿಸಿ, ಟಿಎಪಿಸಿಎಂಸ್ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಇಲ್ಲಿನ ಆವರಣಕ್ಕೆ ಕಾಂಕ್ರೀಟ್ ನೆಲಹಾಸು ಹಾಕಿಸಲಾಗುವುದು ಎಂದರು.

ಸಿ.ಎನ್. ಪುಟ್ಟಸ್ವಾಮೀಗೌಡ ಅವರು ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕರಾದ ನಂತರ ತಾಲೂಕಿಗೆ ೯೨ ಲಕ್ಷ ರು. ಅನುದಾನ ನೀಡಿದ್ದಾರೆ. ಟಿಎಪಿಸಿಂಎಸ್ ಕಟ್ಟಡಗಳಿಗೆ ೪೦ ಲಕ್ಷ ರು. ಸೇರಿ ತಾಲೂಕಿನ ಹಲವು ಕೃಷಿಪತ್ತಿನ ಸಹಕಾರ ಸಂಘಗಳಿಗೆ ೧ರಿಂದ ೫ ಲಕ್ಷ ರು. ವರೆಗೆ ಸಹಾಯಧನ ನೀಡಲು ಕಾರಣೀಕರ್ತರಾಗಿದ್ದಾರೆ. ತಾಲೂಕಿನಲ್ಲಿ ೪೦೦ ಕೋಟಿ ರು. ಹಣ ಹೈನುಗಾರಿಕೆ ಮೂಲಕ ರೈತರ ಕಿಸೆ ಸೇರುತ್ತಿದೆ. ರೈತರ ಅರ್ಥಿಕ ಮೂಲವಾಗಿರುವ ಹೈನುಗಾರಿಕೆಯನ್ನು ಕಳೆದ ೨೫ ವರ್ಷಗಳಿಂದ ಶಕ್ತಿ ತುಂಬುವ ಕೆಲಸ ಮಾಡುತ್ತಾ ಬರಲಾಗಿದೆ ಎಂದರು.ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಆರ್‌. ಅನಿಲ್‌ ಕುಮಾರ್ ಮಾತನಾಡಿ, ವಾರ್ಷಿಕ ಸಭೆಯ ಮೂಲಕ ಷೇರುದಾರರು ಮತ್ತು ಆಡಳಿತ ಮಂಡಳಿಯ ನಡುವಿನ ಸಂಬಂಧ ಗಟ್ಟಿಗೊಳಿಸುವ ಕೆಲಸವಾಗುತ್ತಿದೆ. ಆಯಾ ವರ್ಷದ ಖರ್ಚುವೆಚ್ಚವನ್ನು ಸದಸ್ಯರಿಗೆ ಒಪ್ಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಅಭಿವೃದ್ಧಿಗೆ ನಿಮ್ಮ ಸಲಹೆ, ಸೂಚನೆ ಅಗತ್ಯ, ರೈತರಿಗೆ ರಿಯಾಯ್ತಿ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದು, ನಮ್ಮ ಸಂಘವು ರಸಗೊಬ್ಬರ ಮಾರಾಟದಲ್ಲಿ ಮೈಸೂರು ವಲಯದಲ್ಲಿ ಅತ್ಯುತ್ತಮ ಮಾರಾಟ ಮಾಡಿದ ಹೆಗ್ಗಳಿಕೆ ಹೊಂದಿ ರಾಜ್ಯ ಪ್ರಶಸ್ತಿ ಗಳಿಸಿದೆ. ಇದು ನಮಗೆ ಮತ್ತಷ್ಟು ಪ್ರೇರಣೆಯಾಗಿದೆ. ರೈತರವರ್ಗಕ್ಕೆ ಬೇಕಾದ ಅನುಕೂಲಗಳನ್ನು ರೂಪಿಸುವಲ್ಲಿ ನಾವು ಬದ್ಧರಾಗಿದ್ದೇವೆ. ಶಾಸಕರ ಅಣತಿ ಮೇರೆಗೆ ಸಂಘವು ಅವರ ಸಹಕಾರದಿಂದ ಉತ್ತಮ ಯೋಜನೆಗಳನ್ನು ರೂಪಿಸುವಲ್ಲಿ ಮುಂದಾಗಿದೆ ಎಂದರು. ಇದೇ ಮೊದಲಬಾರಿಗೆ ತಾಲೂಕಿನ ಹಿರಿಯ ಸಹಕಾರಿಗಳನ್ನು ಗುರ್ತಿಸಿ ಅಭಿನಂದಿಸುವ ಕೆಲಸವನ್ನು ಪ್ರಸ್ತಕ ವರ್ಷದಿಂದ ಮಾಡಲಾಗುತ್ತಿದ್ದು, ಶಾಸಕರು ಸೂಚನೆ ಮೇರೆಗೆ ಇದನ್ನು ಪ್ರತಿವರ್ಷ ಮುಂದುವರಿಸಿಕೊಂಡು ಹೋಗಲಾಗುವುದು ಎಂದರು. ಟಿಎಪಿಸಿಎಂಎಸ್ ನಿಂದ ಅತಿ ಹೆಚ್ಚು ಗೊಬ್ಬರ ಖರೀದಿಸಿದ ನಾಲ್ವರು ರೈತರನ್ನು ಇದೇ ಸಂದರ್ಭ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಪುರಸಭಾ ಅಧ್ಯಕ್ಷ ಮೋಹನ್, ಉಪಾಧ್ಯಕ್ಷೆ ಕವಿತಾ ರಾಜು, ಸದಸ್ಯರಾದ ರೇಖಾ ಅನಿಲ್, ಬನಶಂಕರಿ, ರಾಣಿಕೃಷ್ಣ, ಲಕ್ಷ್ಮಮ್ಮ, ಸುಜಾತ, ಕೃಷಿ ಸಹಾಯಕ ನಿರ್ದೇಶಕ ಮೋಹನ್, ಟಿಎಪಿಸಿಎಂಎಸ್‌ನ ಉಪಾಧ್ಯಕ್ಷರಾದ ಯೋಗೇಶ್ ಗುರಿಗಾರನಹಳ್ಳಿ, ನಿರ್ದೇಶಕರಾದ ಸಿ.ಜಿ.ಜಗದೀಶ್, ವಿ.ಎನ್.ರಾಜಣ್ಣ, ಬಿ.ಎಚ್.ಶಿವಣ್ಣ, ಪರಮ ಕೃಷ್ಣೇಗೌಡ, ಕೆ.ಎಂ.ರಮೇಶ್, ಚಂದ್ರಕಲಾ ಮಂಜೇಗೌಡ, ಬಿ.ಕೆ.ಮನು, ಎಸ್.ಜಿ.ಚಿರಂಜೀವಿ ಸೇರಿದಂತೆ ಕಾರ್ಯದರ್ಶಿ ಸಂಧ್ಯಾ ಸೇರಿ ಸಿಬ್ಬಂದಿ ಹಾಜರಿದ್ದರು.