ಸಾರಾಂಶ
ಚಿಕ್ಕಮಗಳೂರು ಮುಸ್ಲೀಂ ಒಕ್ಕೂಟದಿಂದ ನಗರದ ಹೊರ ವಲಯದಲ್ಲಿ ಒಕ್ಕೂಟದ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರತಿ ಚುನಾವಣೆಗಳಲ್ಲಿ ಮುಸ್ಲೀಂ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ. ಈ ಜನಾಂಗಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಲು ಪಕ್ಷ ಕಟಿಬದ್ಧವಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.ನಗರದ ಹೊರವಲಯದಲ್ಲಿ ಚಿಕ್ಕಮಗಳೂರು ಮುಸ್ಲೀಂ ಒಕ್ಕೂಟದಿಂದ ಆಯೋಜಿಸಿದ್ದ ಒಕ್ಕೂಟದ ಸಭೆಯಲ್ಲಿ ಮಾತನಾಡಿದರು. ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೂ ಮುಸ್ಲೀಂ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿ ಆಧಾರಸ್ಥಂಭವಾಗಿದೆ. ಅಧಿಕಾರಕ್ಕೆ ಬಂದ ಕ್ಷಣಗಳಲ್ಲಿ ಅತಿಹೆಚ್ಚು ಶ್ರಮವಹಿಸಿ ಪಕ್ಷಕ್ಕಾಗಿ ದುಡಿದಿರುವ ಜನಾಂಗದ ಕಾರ್ಯಕರ್ತರಿಗೆ ಸ್ಥಾನಮಾನ ಕಲ್ಪಿಸುವ ಮೂಲಕ ಅವಕಾಶ ನೀಡಲಾಗುವುದು ಎಂದರು.ಸಂವಿಧಾನಕ್ಕೆ ಬದ್ಧವಾಗಿ ದಲಿತರು, ಮುಸ್ಲೀಂ ಜನಾಂಗ ಕಾಂಗ್ರೆಸ್ ಜನ್ಮವಿತ್ತ ಕಾಲದಿಂದ ಸಹಕಾರ ನೀಡುತ್ತಿದೆ. ಅಲ್ಲದೇ ಸಾಮಾಜಿಕ ಸೇವೆ ಹಾಗೂ ಜನಪರ ಕಾಳಜಿ ಬಗ್ಗೆ ಹೆಚ್ಚು ಚಿಂತನೆ ಹೊಂದುವ ಮುಖಂಡರಿಗೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಳಿ ತೆರಳಿ ಚರ್ಚಿಸುವ ಮೂಲಕ ಅಧಿಕಾರ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಜಿಲ್ಲೆಯಲ್ಲಿ ಹಿಂದೂ ಹಾಗೂ ಮುಸ್ಲೀಮರು ಅಣ್ಣ ತಮ್ಮಂದಿರಂತೆ ಬಾಂಧವ್ಯ ಹೊಂದಿದ್ದಾರೆ. ಪರಸ್ಪರ ಪ್ರೀತಿ, ಗೌರವ ತರುವ ನಿಟ್ಟಿನಲ್ಲಿ ಪಕ್ಷದಲ್ಲಿ ಕೆಲಸ ಮಾಡಲಾಗುತ್ತಿದೆ. ವಿಶೇಷವಾಗಿ ಐದು ಕ್ಷೇತ್ರಗಳಲ್ಲಿ ಶಾಸಕರ ಗೆಲುವಿಗೆ ಪೂರಕವಾದ ಮುಸ್ಲೀಂ ಸಮಾಜವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯದಡಿ ಪ್ರತಿಯೊಂದು ಸಮುದಾಯಕ್ಕೆ ಸಮಾನ ಅವಕಾಶವಿದೆ. ಜಿಲ್ಲೆಯ ಮುಸ್ಲೀಂ ಒಕ್ಕೊರಲಿನಂತೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳುವ ಮೂಲಕ ಚರ್ಚಿಸೋಣ. ಇದಕ್ಕೆ ಜಿಲ್ಲಾ ಸಮಿತಿ ಗಟ್ಟಿಯಾಗಿ ಧ್ವನಿಗೂಡಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.ಸಿಡಿಎ ಮಾಜಿ ಅಧ್ಯಕ್ಷ ಅತೀಖ್ ಖೈಸರ್ ಮಾತನಾಡಿ, ಕ್ಷೇತ್ರದಲ್ಲಿ ಎರಡು ದಶಕಗಳ ಬಳಿಕ ಹಾಗೂ ರಾಜ್ಯದಲ್ಲಿ ಬಹುಮತ ದಿಂದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಕ್ಷೇತ್ರದಲ್ಲಿ ಯಾವುದೇ ಫಲಪೇಕ್ಷೆ ಇಲ್ಲದೇ ಸಾಮಾಜಿಕ ಸೇವೆ ಹಾಗೂ ಕೊರೋನಾ ಸಂದರ್ಭದಲ್ಲಿ ಬೇಧ, ಭಾವ ವಿಲ್ಲದೇ ಎಲ್ಲಾ ಧರ್ಮದ ಕುಟುಂಬಕ್ಕೆ ಆಸರೆ ಯಾದ ಸಿ.ಎನ್.ಅಕ್ಮಲ್‌ಗೆ ಸಿಡಿಎ ಅಧ್ಯಕ್ಷಗಾದಿ ಒದಗಿಸಿಕೊಡಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮಹಮ್ಮದ್ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಹಾಮಾರಿ ಕೋವಿಡ್‌ನಲ್ಲಿ ಮೃತಪಟ್ಟವರ ಸಂಬಂಧಿಕರೇ ಅಂತ್ಯಕ್ರಿಯೆಗೆ ಧಾವಿಸದಿರುವ ಸಮಯದಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲೀಂ ಸಮಾಜ ದವರು ಪ್ರಾಣದ ಹಂಗು ತೊರೆದು ಶವಸಂಸ್ಕಾರಕ್ಕೆ ಮುಂದಾಗಿದ್ದರು. ಅಲ್ಲದೇ ಸಂಕಷ್ಟದಲ್ಲಿ ಆರ್ಥಿಕ, ಸಾಮಾಜಿಕವಾಗಿ ಸ್ಪಂದಿಸಿ, ಪಕ್ಷಕ್ಕಾಗಿ ಸೇವೆಗೈದ ಮುಖಂಡರಿಗೆ ಸ್ಥಾನ ಮಾನ ಕಲ್ಪಿಸುವ ಸಮಯ ಇದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ಡಾ.ಡಿ. ಎಲ್.ವಿಜಯ್‌ಕುಮಾರ್, ಪಕ್ಷದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮಹಮ್ಮದ್ ಶಾಹೀದ್ ರಜ್ವಿ, ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್, ಮುಖಂಡರಾದ ಎ.ಎನ್. ಮಹೇಶ್, ಬಿ.ಎಚ್.ಹರೀಶ್, ಎಚ್.ಪಿ.ಮಂಜೇಗೌಡ, ಮಸೀದಿ ಗುರುಗಳಾದ ಕ್ವಾಜಾ ಮೊಹಿಯುದ್ದೀನ್, ಅಶ್ರಫ್ ಆಲಿಖಾನ್, ಷರೀಫ್, ಶಹಾಬುದ್ದೀನ್, ಭದ್ರುದ್ದೀನ್ ಹಾಜರಿದ್ದರು.ಪೋಟೋ ಫೈಲ್ ನೇಮ್ 25 ಕೆಸಿಕೆಎಂ 2ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಚಿಕ್ಕಮಗಳೂರು ಮುಸ್ಲೀಂ ಒಕ್ಕೂಟದಿಂದ ಆಯೋಜಿಸಿದ್ದ ಒಕ್ಕೂಟದ ಸಭೆಯಲ್ಲಿ ಜಯಪ್ರಕಾಶ್ ಹೆಗ್ಡೆ ಮಾತನಾಡಿದರು.