ಸಾರಾಂಶ
ತಾಲೂಕಿನ ಕುಣಿಕೇರಿ ಹಾಗೂ ಹಿರೇಬಗನಾಳ ಗ್ರಾಮದಲ್ಲಿ ನೂತನ ಅಂಚೆ ಕಚೇರಿ ಕಟ್ಟದ ನಿರ್ಮಾಣದ ಕಾಮಗಾರಿಗೆ ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಅಡಿಗಲ್ಲು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಕುಣಿಕೇರಿ ಹಾಗೂ ಹಿರೇಬಗನಾಳ ಗ್ರಾಮದಲ್ಲಿ ನೂತನ ಅಂಚೆ ಕಚೇರಿ ಕಟ್ಟದ ನಿರ್ಮಾಣದ ಕಾಮಗಾರಿಗೆ ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಅಡಿಗಲ್ಲು ನೆರವೇರಿಸಿದರು.ಸಂಸದ ಕೆ. ರಾಜಶೇಖರ್ ಹಿಟ್ನಾಳ ಮಾತನಾಡಿ, ಇತ್ತೀಚೆಗೆ ಹೆಚ್ಚಿನ ಜನ ಅಂಚೆ ಕಚೇರಿಗಳ ಮೇಲೆ ಅವಲಂಬಿತರಾಗಿದ್ದಾರೆ. ಹಾಗಾಗಿ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ 185 ಅಂಚೆ ಕಚೇರಿಗಳ ಅಭಿವೃದ್ಧಿಗೆ ಬದ್ದರಾಗಿದ್ದೇವೆ. ಎಲ್ಲಾ ಅಂಚೆ ಕಚೇರಿಗಳಿಗೆ ಕಟ್ಟಡ ನಿರ್ಮಿಸಲು ಮುಂದಾಗಿದ್ದೇವೆ. ಸಿಎಸ್ಆರ್ ಫಂಡ್ ನಲ್ಲಿ ಹಂತ ಹಂತವಾಗಿ ಎಲ್ಲಾ ಕಚೇರಿಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಕಳೆದ 11 ವರ್ಷಗಳಲ್ಲಿ ಕೊಪ್ಪಳ ಮತಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದೇವೆ. ಕ್ಷೇತ್ರದಲ್ಲಿ ಹದೆಗೆಟ್ಟಿರುವ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಭಾಗದ ಬಹುದಿನಗಳ ಬೇಡಿಕೆ ಆಗಿದ್ದ ನವಲ್ ಕಲ್ ಏತ ನೀರಾವರಿ ಯೋಜನೆಯನ್ನೂ ಶೀಘ್ರದಲ್ಲಿ ಉದ್ಘಾಟನೆ ಮಾಡಲಿದ್ದೇವೆ. ನಮ್ಮ ತಾಲೂಕಿನಲ್ಲಿ ಬರುವ ಎಲ್ಲಾ ಅಂಚೆ ಕಚೇರಿಗಳ ಕಟ್ಟಡ ಮಾಡೆಲ್ ಆಗಿ ನಿರ್ಮಾಣ ಮಾಡುತ್ತೇವೆ ಎಂದರು.ಈ ಸಂದರ್ಭ ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಪ್ರಮುಖರಾದ ವಿರುಪಣ್ಣ ಕುಣಿಕೇರಿ, ರಾಜಶೇಖರ್ ಅಡೂರ್, ಶರಣಪ್ಪ ಸಜ್ಜನ್, ಹನಮೇಶ್ ಹೊಸಳ್ಳಿ, ಕಾಳಪ್ಪ ತಾಂಡ, ಮಹೇಶ್ ಕುಣಿಕೇರಿ, ಧರ್ಮರಾಜ್ ದೇವರಮನಿ, ರವಿ ದೇವರಮನಿ, ಗವಿಸಿದ್ದಪ್ಪ ಕುರುಬರು, ಅಂಚೆ ಕಚೇರಿ ಅಧಿಕಾರಿ ಜೆ.ಎನ್. ಹಳ್ಳಿ, ಕುಣಿಕೇರಿ ಅಂಚೆ ಇಲಾಖೆಯ ಅಧಿಕಾರಿ ಯಶೋದಾ ಕಾರಬಾರಿ ಸೇರಿದಂತೆ ಇತರರಿದ್ದರು.