ಕೆಂಪೇಗೌಡ ಜಯಂತಿ

| Published : Jun 28 2024, 12:52 AM IST

ಸಾರಾಂಶ

ಇಂದು ಬೆಂಗಳೂರು ಜಗತ್ತಿನಲ್ಲಿ ಇಷ್ಟು ಹೆಸರನ್ನು ಗಳಿಸಲು ಹಾಗೂ ರಾಜ್ಯಕ್ಕೆ ಕೀರ್ತಿ ಬರಲು ಬಹಳ ಹಿಂದೆಯೇ ಮುತುವರ್ಜಿಯಿಂದ ಅಚ್ಚುಕಟ್ಟಾಗಿ ಒಂದು ದೂರದೃಷ್ಟಿಯ ಮಾರ್ಗದರ್ಶನದ ಮೂಲಕ ಬೆಂಗಳೂರು ನಗರವನ್ನು ಕೆಂಪೇಗೌಡರು ನಿರ್ಮಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿಶ್ವವಿದ್ಯಾನಿಲಯ ಒಕ್ಕಲಿಗರ ಹಿತರಕ್ಷಣಾ ಸಮಿತಿಯಿಂದ ಗುರುವಾರ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಅಂಗವಾಗಿ ಮಾನಸಗಂಗೋತ್ರಿಯ ಕುವೆಂಪು ಪುತ್ಥಳಿಯ ಬಳಿ ಕೆಂಪೇಗೌಡರ ಭಾವಚಿತ್ರಕ್ಕೆ ಕುಲಪತಿ ಎನ್‌.ಕೆ. ಲೋಕನಾಥ್‌ ಹಾಗೂ ಕುಲಸಚಿವರಾದ ವಿ.ಆರ್‌. ಶೈಲಜಾ ಪುಷ್ಪಾರ್ಚನೆ ಮಾಡಿದರು.

ಕುಲಪತಿ ಎನ್.ಕೆ. ಲೋಕನಾಥ್ ಮಾತನಾಡಿ, ಇಂದು ಬೆಂಗಳೂರು ಜಗತ್ತಿನಲ್ಲಿ ಇಷ್ಟು ಹೆಸರನ್ನು ಗಳಿಸಲು ಹಾಗೂ ರಾಜ್ಯಕ್ಕೆ ಕೀರ್ತಿ ಬರಲು ಬಹಳ ಹಿಂದೆಯೇ ಮುತುವರ್ಜಿಯಿಂದ ಅಚ್ಚುಕಟ್ಟಾಗಿ ಒಂದು ದೂರದೃಷ್ಟಿಯ ಮಾರ್ಗದರ್ಶನದ ಮೂಲಕ ಬೆಂಗಳೂರು ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಆದರೆ ಇಂದು ಅಂತಹ ವ್ಯಕ್ತಿಗಳು ಹುಟ್ಟಿ ಬರುತ್ತಿಲ್ಲ, ಆದ್ದರಿಂದ ಎಲ್ಲರೂ ಕೆಂಪೇಗೌಡರ ಹಾಗೇ ದೂರದೃಷ್ಟಿಯಿಂದ ಕೆಲಸ ಮಾಡಿ ಅವರ ಸಾಧನೆಯನ್ನು ಮೈಗೂಡಿಸಿಕೊಂಡು ರಾಜ್ಯವು ಇನ್ನೂ ಮುಂದೆ ಬೆಳೆಯಲು ಎಲ್ಲರೂ ಅವರ ಅದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕುಲಸಚಿವ ಶೈಲಜಾ ಮಾತನಾಡಿ, ಒಕ್ಕಲಿಗರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಡಾ. ಕೆ.ಟಿ. ಸಂದೀಪ್, ಉಪಾಧ್ಯಕ್ಷ ಪ್ರದೀಪ, ಪ್ರಧಾನ ಕಾರ್ಯದರ್ಶಿ ಡಾ. ಎಸ್‌. ಶಶಿಕುಮಾರ್, ಸಂಚಾಲಕ ಕೆ. ವಿವೇಕ್ ಗೌಡ, ನಿರ್ದೇಶಕ ಶಿವಣ್ಣ, ಡಾ.ಎಲ್. ಸೋಮಶೇಖರ್, ವಿನೋದ್ ಕುಮಾರ್, ಚಲುವೇಶ್ ಹಾಗೂ ಎಲ್ಲ ಅಧ್ಯಾಪಕ ಹಾಗೂ ಅಧ್ಯಾಪಕೇತರ ನೌಕರರು ಇದ್ದರು.