ಕುಡಿತ ನಿರ್ಮೂಲನೆಗೆ ಸಮುದಾಯದ ಸಹಕಾರ ಅಗತ್ಯ: ಮಲ್ಲಿಕಾರ್ಜುನ್

| Published : Sep 30 2025, 12:00 AM IST

ಸಾರಾಂಶ

ದೇಶದ ಯುವಶಕ್ತಿ, ಮಾನವಶಕ್ತಿ ಕುಡಿತದಿಂದ ಹಾಳಾಗುತ್ತಿದೆ. ಇಂತಹ ವ್ಯಸನದಿಂದ ಮುಕ್ತವಾಗಲು ಎಲ್ಲರೂ ಸಮಾವೇಶದ ಯಶಸ್ಸಿಗೆ ಸಹಕರಿಸಿ ಜಾಗೃತಿ ಅರಿವು ಮೂಡಿಸಲು ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ದೇಹ, ಆರೋಗ್ಯ, ಕುಟುಂಬ, ಸಮಾಜ ಹಾಳು ಮಾಡುವ ಕುಡಿತವನ್ನು ದೂರ ಮಾಡಲು ಧರ್ಮಸ್ಥಳ ಸಂಸ್ಥೆಗೆ ಸಾಂಘೀಕ ಸಹಕಾರ ಬೇಕಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದ ಕುರುಹಿನಶೆಟ್ಟಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮದ್ಯವರ್ಜನೆ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಂಚ ರೋಗದಲ್ಲಿ ಮಹಾರೋಗ ಕುಡಿತವು ಒಂದು. ದುಶ್ಚಟ, ದುರಾಭ್ಯಾಸ ಮುಕ್ತವಾಗಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜಾಗೃತಿ ಮೂಡಿಸಲು ಶ್ರೀಗಳು ರಾಜ್ಯಾದ್ಯಂತ ಈ ಸಮಾವೇಶ ಆರಂಭಿಸಿದ್ದಾರೆ ಎಂದರು.

ದೇಶದ ಯುವಶಕ್ತಿ, ಮಾನವಶಕ್ತಿ ಕುಡಿತದಿಂದ ಹಾಳಾಗುತ್ತಿದೆ. ಇಂತಹ ವ್ಯಸನದಿಂದ ಮುಕ್ತವಾಗಲು ಎಲ್ಲರೂ ಸಮಾವೇಶದ ಯಶಸ್ಸಿಗೆ ಸಹಕರಿಸಿ ಜಾಗೃತಿ ಅರಿವು ಮೂಡಿಸಲು ಮುಂದಾಗಬೇಕು ಎಂದರು.

ಸಂಸ್ಥೆ ಜಿಲ್ಲಾ ನಿರ್ದೇಶಕ ಯೋಗೇಶ್ ಮಾತನಾಡಿದರು. ಕೆಪಿಸಿಸಿ ಸದಸ್ಯ ಸುರೇಶ್ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್‌ ಸೇರಿದಂತೆ ಪ್ರಮುಖರು ಹಲವು ಸಲಹೆ ನೀಡಿದರು.

ಈ ವೇಳೆ ಕಿಕ್ಕೇರಿ ಗ್ರಾಪಂ ಅಧ್ಯಕ್ಷ ಕೆ.ಬಿ.ಚಂದ್ರಶೇಖರ್, ಮಾಜಿ ಅಧ್ಯಕ್ಷೆ ಭಾರತಿ ಪ್ರಕಾಶ್, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷೆ ನಳಿನಿ, ಸದಸ್ಯರಾದ ಶಿವರಾಂ, ನಾರಾಯಣಸ್ವಾಮಿ, ಕುಮಾರ್, ಹರಿಣಿ, ಗ್ರಾಪಂ ಸದಸ್ಯರಾದ ಆನೆಗೊಳ ಶ್ರೀನಿವಾಸ್, ಕುಮಾರ್, ನಂದೀಶ್, ಕೆ.ಆರ್.ಪೇಟೆ ಯೋಜನಾಧಿಕಾರಿ ತಿಲಕ್‌ರಾಜು, ಕಿಕ್ಕೇರಿ ವಲಯ ಯೋಜನಾಧಿಕಾರಿ ಪ್ರಸಾದ್, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ, ಡಿ. ಉಮೇಶ್, ಮೇಲ್ವಿಚಾರಕರಾದ ನಂದಿನಿ, ಗುಣಶ್ರೀ, ಅಜಯ್, ವಲಯ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಇದ್ದರು.

100 ನಾಯಿ, ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕೆ: ಡಾ.ಗೋವಿಂದ

ಕನ್ನಡಪ್ರಭ ವಾರ್ತೆ ಮದ್ದೂರು

ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ತಾಲೂಕಿನ ಸುಮಾರು 100 ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕೆ ನೀಡಲಾಗಿದೆ ಎಂದು ಪಶುಇಲಾಖೆ ಸಹಾಯಕ ನಿರ್ದೇಶಕ ಡಾ.ಟಿ.ಎಚ್.ಗೋವಿಂದ ಹೇಳಿದರು.

ಪಟ್ಟಣದ ಶಿವಪುರದ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯನ ಪ್ರೀತಿಯ ಪ್ರಾಣಿಯಾಗಿರುವ ನಾಯಿಗಳು ರೋಗಕ್ಕೆ ತುತ್ತಾಗದಂತೆ ಎಚ್ಚರವಹಿಸುವುದು ಪ್ರತಿಯೊಬ್ಬ ಸಾಕು ಪ್ರಾಣಿಯ ಸಾಕಾಣಿಕೆದಾರರ ಕರ್ತವ್ಯವಾಗಿದೆ ಎಂದರು.

ಸೆ.28ರಿಂದ ಒಂದು ತಿಂಗಳ ಕಾಲ ಪಶು ಇಲಾಖೆಯಿಂದ ರೇಬಿಸ್ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಬೀದಿ ನಾಯಿಗಳಿಗೂ ಸಹ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಲಸಿಕೆ ಹಾಕುವುದು ಮತ್ತು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದರು. ಈ ವೇಳೆ ಪಶು ವೈದ್ಯರಾದ ಡಾ.ಮಂಜೇಶ್, ಡಾ.ಚೈತನ್ಯ ಹಾಗೂ ಪಶು ಆಸ್ಪತ್ರೆಯ ಸಿಬ್ಬಂದಿ ಅಭಿಯಾನಾದಲ್ಲಿ ಪಾಲ್ಗೊಂಡಿದ್ದರು.